ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾವನ್ನು ಮಣಿಸಿದರೆ ಹರಿಣಗಳ ಸೆಮೀಸ್‌ ಟಿಕೆಟ್‌ ಪಕ್ಕಾ

ಬಾಂಗ್ಲಾವನ್ನು ಮಣಿಸಿದರೆ ಹರಿಣಗಳ ಸೆಮೀಸ್‌ ಟಿಕೆಟ್‌ ಪಕ್ಕಾ

image-cbf76cf6-66a3-4a1b-9715-975006c95d72.jpg
image-5347625e-64f3-4246-92a9-a39616d5d10d.jpg
ಅಬುಧಾಬಿ: ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೂಪರ್ 12ರ ಹಂತದ ಈ ಪಂದ್ಯದಲ್ಲಿ ಗೆದ್ದರೆ ತೆಂಬಾ ಬವುಮಾ ಬಳಗದ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ಎರಡು ಜಯ ಸಾಧಿಸಿ ಹುಮ್ಮಸ್ಸಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಗುಂಪಿನ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶ ವನ್ನು ಎದುರಿಸಲಿದೆ. ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾವನ್ನು ಮಣಿಸಿರುವ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ದಲ್ಲಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಬಾಂಗ್ಲಾದೇಶ ಮೂರು ಪಂದ್ಯಗಳನ್ನು ಸೋತಿದೆ. ಹೀಗಾಗಿ ನಾಲ್ಕರ ಘಟ್ಟ ಪ್ರವೇಶಿಸುವ ಆಸೆ ಕಮರಿದೆ. ವಿಶ್ವ ದರ್ಜೆಯ ವೇಗಿ ಗಳನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್‌ಗಳು ಕೂಡ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ತೆಂಬಾ ಬವುಮಾ, ಡೇವಿಡ್ ಮಿಲ್ಲರ್ ಮತ್ತು ಏಡನ್ ಮರ್ಕರಮ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕ್ವಿಂಟನ್ ಡಿ'ಕಾಕ್, ರಸಿ ವ್ಯಾನ್ ಡೆರ್ ಡುಸೆನ್ ಮತ್ತು ರೀಜಾ ಹೆನ್ರಿಕ್ಸ್ ಅವೊಂದಿಗೆ ಮಧ್ಯಮ ಕ್ರಮಾಂಕದ ವೈಫಲ್ಯ ತಂಡವನ್ನು ಕಾಡುತ್ತಿದೆ. ಮಂಡಿರಜ್ಜು ನೋವಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಶಕೀಬ್ ಅಲ್ ಹಸನ್ ಅವರ ಅನುಪಸ್ಥಿತಿ ಬಾಂಗ್ಲಾದೇಶವನ್ನು ಕಾಡಲಿದೆ.