ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುತ್ರ ಅರ್ಜುನ್ ಪ್ರದರ್ಶನಕ್ಕೆ ಭಾವನಾತ್ಮಕ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

IPL 2026: ಚೇಸಿಂಗ್‌ ವೇಳೆ ಪಂಜಾಬ್‌ ಪರ, ಪ್ರಭ್‌ಸಿಮ್ರಾನ್‌ ಸಿಂಗ್‌ 39 ಎಸೆತಗಳಿಂದ 69 ರನ್‌ ಸಿಡಿಸಿದರೆ, ಅಯ್ಯರ್‌ ಕೊನೆಯ ತನಕ ನಿಂತು ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 51 ಎಸೆತ ಎದುರಿಸಿದ ಶ್ರೇಯಸ್‌ ಅಯ್ಯರ್‌ 5 ಸಿಕ್ಸರ್‌ ಮತ್ತು 11 ಬೌಂಡರಿ ನೆರವಿನಿಂದ 101*ರನ್‌ ಬಾರಿಸಿದರು.

Sachin Tendulkar

ಲಖನೌ, ಮೇ 24: ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026(IPL 2026)ರಲ್ಲಿ ಲಕ್ನೋ ಸೂಪರ್ ಜೈಂಟ್ಸ್(LSG vs PBKS) ತಂಡದ ಪರ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಮತ್ತು ದಂತಕಥೆ ಸಚಿನ್ ತೆಂಡೂಲ್ಕರ್(Sachin Tendulkar) ತಮ್ಮ ಮಗ ಅರ್ಜುನ್ ತೆಂಡೂಲ್ಕರ್‌(Arjun Tendulkar) ಅವರನ್ನು ಶ್ಲಾಘಿಸಿದರು. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಅರ್ಜುನ್, ಎಲ್‌ಎಸ್‌ಜಿ ಪರ ಮೊದಲ ಬಾರಿಗೆ ಕಾಣಿಸಿಕೊಂಡರು ಮತ್ತು ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ವಿಕೆಟ್ ಪಡೆದರು.

ಪಂದ್ಯದಲ್ಲಿ ಪವರ್‌ಪ್ಲೇ ನಂತರ ಬೌಲಿಂಗ್ ಮಾಡಿದ ಅರ್ಜುನ್ ತಮ್ಮ ನಾಲ್ಕು ಓವರ್‌ಗಳ ಬೌಲಿಂಗ್ ಕೋಟಾದಲ್ಲಿ 36 ರನ್‌ಗಳನ್ನು ನೀಡಿ ಪ್ರಭ್‌ಸಿಮ್ರಾನ್ ಸಿಂಗ್ ಅವರ ವಿಕೆಟ್ ಪಡೆದರು. ಆರಂಭದಲ್ಲೇ ಅವರ ವಿಕೆಟ್‌ ಪಡೆಯುವ ಅವಕಾಶವಿತ್ತು. ಆದರೆ ರಿಷಭ್‌ ಪಂತ್‌ ಸುಲಭವಾಗಿ ಹಿಡಿಯಬಹುದಾದ ಕ್ಯಾಚ್‌ ಕೈಚೆಲ್ಲಿದರು. ಆದರೂ ಕೊನೆಗೆ ಅರ್ಜುನ್‌ ಎಲ್‌ಬಿಡಬ್ಲ್ಯು ಮೂಲಕ ಅವರ ವಿಕೆಟ್‌ ಕಿತ್ತರು.

ಮಗನ ಪದರ್ಶನದ ಬಗ್ಗೆ ತಂದೆ ಸಚಿನ್‌, ಎಕ್ಸ್‌ ಖಾತೆಯಲ್ಲಿ ಮೆಚ್ಚುಗೆ ಸೂಚಿದರು., "ಚೆನ್ನಾಗಿ ಮಾಡಿದ್ದೀರಿ, ಅರ್ಜುನ್. ಈ ಋತುವಿನಲ್ಲಿ ನೀವು ನಿಮ್ಮನ್ನು ಹೇಗೆ ನಿಭಾಯಿಸಿದ್ದೀರಿ ಎಂಬುದರ ಬಗ್ಗೆ ಹೆಮ್ಮೆಪಡುತ್ತೇನೆ, ಯಾವಾಗಲೂ ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಡುತ್ತೀರಿ, ತಾಳ್ಮೆಯಿಂದಿರಿ, ಸದ್ದಿಲ್ಲದೆ ಶ್ರಮಿಸುತ್ತೀರಿ ಮತ್ತು ಕೊನೆಯ ಪಂದ್ಯದವರೆಗೆ ನಿಮ್ಮ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ಸಕಾರಾತ್ಮಕವಾಗಿ ಉಳಿಯುತ್ತೀರಿ. ಕ್ರಿಕೆಟ್ ಕೌಶಲ್ಯದ ಜೊತೆಗೆ ತಾಳ್ಮೆಯನ್ನು ಪರೀಕ್ಷಿಸುತ್ತದೆ, ಮತ್ತು ನೀವು ಇಂದು ಎರಡನ್ನೂ ಸುಂದರವಾಗಿ ನಿರ್ವಹಿಸಿದ್ದೀರಿ. ನಿಮ್ಮ ಪಾದಗಳನ್ನು ನೆಲದ ಮೇಲೆ ಇರಿಸಿ ಮತ್ತು ನೀವು ಯಾವಾಗಲೂ ಮಾಡಿದಂತೆ ಆಟವನ್ನು ಪ್ರೀತಿಸುವುದನ್ನು ಮುಂದುವರಿಸಿ" ಎಂದು ಶ್ಲಾಘಿಸಿದ್ದಾರೆ.



ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಜೋಶ್‌ ಇಂಗ್ಲಿಸ್‌(72) ಮತ್ತು ಆಯೂಷ್‌ ಬದೋನಿ(43) ಅವರ ಬ್ಯಾಟಿಂಗ್‌ ಹೋರಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 196ರನ್‌ ಬಾರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ ಎರಡು ಓವರ್‌ ಬಾಕಿ ಇರುವಂತೆಯೇ 3 ವಿಕೆಟ್‌ಗೆ 200 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ಪಂಜಾಬ್‌ ಪರ, ಪ್ರಭ್‌ಸಿಮ್ರಾನ್‌ ಸಿಂಗ್‌ 39 ಎಸೆತಗಳಿಂದ 69 ರನ್‌ ಸಿಡಿಸಿದರೆ, ಅಯ್ಯರ್‌ ಕೊನೆಯ ತನಕ ನಿಂತು ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 51 ಎಸೆತ ಎದುರಿಸಿದ ಶ್ರೇಯಸ್‌ ಅಯ್ಯರ್‌ 5 ಸಿಕ್ಸರ್‌ ಮತ್ತು 11 ಬೌಂಡರಿ ನೆರವಿನಿಂದ 101*ರನ್‌ ಬಾರಿಸಿದರು.