ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sania Mirza: ಆಪರೇಷನ್‌ ಸಿಂದೂರ ಬಗ್ಗೆ ಸಾನಿಯಾ ಮಿರ್ಜಾ ಪೋಸ್ಟ್‌

Operation Sindoor: ಭಾರತೀಯ ಸೈನ್ಯ ಭಯೋತ್ಪಾದನಾ ನೆಲೆಗಳ ಮೇಲೆ ನಡೆಸಿದ ದಾಳಿಗೆ ಭಾರತದ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಗೌತಮ್‌ ಗಂಭೀರ್‌, ಇರ್ಫಾನ್‌ ಪಠಾಣ್‌, ಸುರೇಶ್‌ ರೈನಾ, ಮೊಹಮ್ಮದ್‌ ಶಮಿ, ಕುಸ್ತಿಪಟು ಯೋಗೇಶ್ವರ್‌ ದತ್‌, ವಿನೇಶ್‌ ಫೋಗಟ್‌, ಬಾಕ್ಸರ್‌ ನಿಖತ್‌ ಜರೀನ್‌ ಸೇರಿ ಅನೇಕ ಕ್ರೀಡಾಪಟುಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಪರೇಷನ್‌ ಸಿಂದೂರ ಬಗ್ಗೆ ಸಾನಿಯಾ ಮಿರ್ಜಾ ಪೋಸ್ಟ್‌

Profile Abhilash BC May 8, 2025 10:52 AM

ನವದೆಹಲಿ: ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ಅವರು 'ಆಪರೇಷನ್‌ ಸಿಂದೂರ'(Operation Sindoor) ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾರತೀಯ ಸಶಸ್ತ್ರಪಡೆಗಳ ಇಬ್ಬರು ಮಹಿಳಾ ಅಧಿಕಾರಿಗಳಾದ ವಾಯು ಪಡೆ ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌(Vyomika Singh) ಮತ್ತು ಭಾರತೀಯ ಸೇನೆಯ ಕರ್ನಲ್‌ ಸೋಫಿಯಾ ಕುರೇಷಿ(Sofiya Qureshi) ಬಗ್ಗೆ ಮೆಚ್ಚಿಗೆ ಸೂಚಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಬಲ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಪತ್ರಕರ್ತ ಫಾಯೆ ಡಿ'ಸೋಜಾ ಅವರು ವ್ಯೋಮಿಕಾ ಸಿಂಗ್‌ ಮತ್ತು ಸೋಫಿಯಾ ಕುರೇಷಿ ಸುದ್ದಿಗೋಷ್ಠಿಯಲ್ಲಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ 'ಈ ಅತ್ಯಂತ ಶಕ್ತಿಶಾಲಿ ಫೋಟೋದಲ್ಲಿನ ಸಂದೇಶವು ನಾವು ಒಂದು ರಾಷ್ಟ್ರವಾಗಿ ಯಾರೆಂದು ಸಂಪೂರ್ಣವಾಗಿ ಸೆರೆಹಿಡಿಯುತ್ತದೆ' ಎಂದು ಬರೆದಿದ್ದರು. ಇದೇ ಪೋಸ್ಟ್‌ ಸಾನಿಯಾ ಮಿರ್ಜಾ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ಉಗ್ರವಾದಕ್ಕೆ ಇಲ್ಲಿ ಜಾಗವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಭಾರತೀಯ ಸೈನ್ಯ ಭಯೋತ್ಪಾದನಾ ನೆಲೆಗಳ ಮೇಲೆ ನಡೆಸಿದ ದಾಳಿಗೆ ಭಾರತದ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಗೌತಮ್‌ ಗಂಭೀರ್‌, ಇರ್ಫಾನ್‌ ಪಠಾಣ್‌, ಸುರೇಶ್‌ ರೈನಾ, ಮೊಹಮ್ಮದ್‌ ಶಮಿ, ಕುಸ್ತಿಪಟು ಯೋಗೇಶ್ವರ್‌ ದತ್‌, ವಿನೇಶ್‌ ಫೋಗಟ್‌, ಬಾಕ್ಸರ್‌ ನಿಖತ್‌ ಜರೀನ್‌ ಸೇರಿ ಅನೇಕ ಕ್ರೀಡಾಪಟುಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರು ಭಾರತೀಯ ವಾಯುಪಡೆಯ ವಿಶಿಷ್ಟ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. 2004ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡ ಇವರು ಜಮ್ಮು ಕಾಶ್ಮೀರ, ಭಾರತದ ಈಶಾನ್ಯ ಭಾಗ ಸೇರಿದಂತೆ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ‘ಚೇತಕ್‌’ ಮತ್ತು ‘ಚೀತಾ’ ಹೆಲಿಕಾಪ್ಟರ್‌ಗಳನ್ನು ಹಾರಿಸಿದ್ದಾರೆ. 2019ರ ಡಿ.18ರಂದು ಇವರಿಗೆ ಪರ್ಮನೆಂಟ್‌ ಕಮಿಷನ್‌(ನಿವೃತ್ತಿಯ ವರೆಗೂ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಅವಕಾಶ) ನೀಡಲಾಗಿದೆ. 2021ರಲ್ಲಿ ಹಿಮಾಚಲ ಪ್ರದೇಶದ ಮಣಿರಾಂಗ್‌ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದಲ್ಲೂ ವ್ಯೋಮಿಕಾ ಇದ್ದರು.

ಇದನ್ನೂ ಓದಿ Operation Sindoor: ಭಯೋತ್ಪಾದಕ ಶಿಬಿರಗಳ ಭಾರತ ದಾಳಿ; ಜಾಗತಿಕ ಮಾಧ್ಯಮಗಳು ವರದಿ ಮಾಡಿದ್ದೇನು?

2016ರಲ್ಲಿ ಪುಣೆಯಲ್ಲಿ ನಡೆದ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್‌ ಸೋಫಿಯಾ ಖುರೇಷಿ(35). ಮೂಲತಃ ಸೈನಿಕ ಕುಟುಂಬಕ್ಕೆ ಸೇರಿದವರಾದ ಇವರು, ಪ್ರಸ್ತುತ ಮಿಲಿಟರಿ ಸಂವಹನಗಳನ್ನು ನಿರ್ವಹಿಸುವ ಸಿಗ್ನಲ್ಸ್‌ ವಿಭಾಗದ ಅಧಿಕಾರಿ. ಸೇನೆಯ ಉನ್ನತ ಹುದ್ದೆಗಳಲ್ಲಿ ಲಿಂಗ ಸಮಾನತೆಯ ಬಗ್ಗೆ 2020ರಲ್ಲಿ ತೀರ್ಪು ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ಖುರೇಷಿ ಅವರ ಸಾಧನೆಯನ್ನೂ ಆ ಸಂದರ್ಭದಲ್ಲಿ ಬಣ್ಣಿಸಿತ್ತು.