ಚೆನ್ನೈ, ಮೇ 19: ಸೋಮವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್(CSK vs SRH) ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು ಸಂಜು ಸ್ಯಾಮ್ಸನ್(Sanju Samson) ಸ್ಟಂಪ್ ಔಟ್ ಮಾಡಿ ಔಟ್ ಮಾಡಿದಾಗ ಬಳಿಕ ಉಭಯ ಆಟಗಾರರ ಮಧ್ಯೆ ಮೈದಾನದಲ್ಲೇ ವಾಗ್ವಾದ ನಡೆಯಿತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ಲಾಸೆನ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾಗ ಸಿಎಸ್‌ಕೆ ಯಾವುದೇ ಆಯ್ಕೆಗಳಿಲ್ಲದ ಸ್ಥಿತಿಯಲ್ಲಿತ್ತು. 15ನೇ ಓವರ್‌ನಲ್ಲಿ ನೂರ್ ಅಹ್ಮದ್ ತಮ್ಮ ಕೊನೆಯ ಓವರ್‌ನ ಸ್ಪೆಲ್ ಮಾಡುತ್ತಿದ್ದರು. ಈ ವೇಳೆ ಕ್ಲಾಸೆನ್ ಅವರು ಸಂಜು ಅವರಿಂದ ಕ್ವಿಕ್ ಸ್ಟಂಪಿಂಗ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ಸ್ಟಂಪಿಂಗ್ ಮಾಡುತ್ತಿದ್ದಂತೆ ಸಂಜು ಅವರು ಮೇಲಕ್ಕೆ ಜಿಗಿಯುತ್ತ ಜೋರಾದ ಸಂಭ್ರಮಾಚರಣೆ ಮಾಡಿದರು. ಇದು ಕ್ಲಾಸೆನ್ ಅವರನ್ನು ಕೆರಳಿಸುವಂತೆ ಮಾಡಿತು.
ಫಿಟ್ನೆಸ್ ಕ್ಲಿಯರೆನ್ಸ್ ಆಧಾರದಲ್ಲಿ ಆಫ್ಘಾನ್ ಏಕದಿನ ಸರಣಿಗೆ ರೋಹಿತ್, ಪಾಂಡ್ಯ ಆಯ್ಕೆ
ಈ ಔಟ್ ನಿಂದ ಕ್ಲಾಸೆನ್ ಮತ್ತು ಸ್ಯಾಮ್ಸನ್ ನಡುವೆ ಮಾತಿನ ಚಕಮಕಿ ನಡೆಯಿತು. ಕ್ಲಾಸೆನ್ ಸ್ಯಾಮ್ಸನ್ ಜೊತೆ ಒಂದೆರಡು ಮಾತುಗಳನ್ನಾಡಿದರು, ಆದರೆ ಸ್ವಲ್ಪ ಹೊತ್ತು ಪರಿಸ್ಥಿತಿ ಬಿಸಿಯಾಗುತ್ತಿದ್ದಂತೆ ಶಿವಂ ದುಬೆ ಮಧ್ಯವರ್ತಿಯಾಗಿ ತ್ವರಿತವಾಗಿ ಕಾರ್ಯನಿರ್ವಹಿಸಿದರು. ಕ್ಲಾಸೆನ್ ಅವರನ್ನು ಹೊರಹೋಗುವಂತೆ ಕೇಳಿಕೊಂಡರು. ಮೈದಾನದಲ್ಲಿರುವ ಅಂಪೈರ್ ಕೂಡ ಘಟನೆಯ ಬಗ್ಗೆ ಸ್ಯಾಮ್ಸನ್ ಜೊತೆ ಮಾತನಾಡಿದ್ದರು. ಈ ವೇಳೆ ಸಂಜು ತಮ್ಮ ತಪ್ಪಿಲ್ಲ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಕ್ಲಾಸೆನ್ ಔಟಾದರೂ ಕಿಶನ್ ತಾಳ್ಮೆಯಿಂದ ಬ್ಯಾಟಿಂಗ್ ಕಾಯ್ದುಕೊಂಡು. 19 ನೇ ಓವರ್‌ನಲ್ಲಿ 47 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು. ಆದರೆ, ಅನ್ಶುಲ್ ಕಾಂಬೋಜ್ ಕಿಶನ್ ಅವರನ್ನು ಔಟ್ ಮಾಡುವ ಹೊತ್ತಿಗೆ, ಪಂದ್ಯವು ಆತಿಥೇಯರಿಂದ ದೂರ ಸರಿದಿತ್ತು. ಕೈಯಲ್ಲಿ ಐದು ವಿಕೆಟ್‌ಗಳು ಮತ್ತು ಇನ್ನೂ ಆರು ಎಸೆತಗಳು ಬಾಕಿ ಇರುವಾಗ ಹೈದರಾಬಾದ್ ಜಯ ಸಾಧಿಸಿತು.
ಸೋಲಿಗೆ ತಂಡದ ಬೌಲರ್‌ಗಳನ್ನು ಟೀಕಿಸಿದ ಸಿಎಸ್‌ಕೆ ನಾಯಕ ಗಾಯಕ್ವಾಡ್
ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕವಾಡ್ ಬ್ಯಾಟಿಂಗ್ ಆಯ್ದುಕೊಂಡರು. ಡೆವಾಲ್ಡ್ ಬ್ರೆವಿಸ್ (44) ಮತ್ತು ಕಾರ್ತಿಕ್ ಶರ್ಮಾ (32) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ತಂಡವು 7 ವಿಕೆಟ್‌ಗೆ 180 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡವು ಇಶಾನ್ (70) ಮತ್ತು ಕ್ಲಾಸೆನ್ ಅವರ ಬಿರುಸಿನ ಆಟದ ಬಲದಿಂದ ಆರು ಎಸೆತಗಳು ಬಾಕಿ ಇರುವಂತೆ 5 ವಿಕೆಟ್‌ಗೆ 181 ರನ್ ಗಳಿಸಿ ಸಂಭ್ರಮಿಸಿತು. ಜತೆಗೆ ಪ್ಲೇ ಆಫ್‌ಗೂ ಪ್ರವೇಶಿಸಿತು.