ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 retention: ಚೆನ್ನೈ ಸೇರಿದ ಸಂಜು ಸ್ಯಾಮ್ಸನ್‌, ರಾಜಸ್ಥಾನ್‌ಗೆ ರವೀಂದ್ರ ಜಡೇಜಾ

Sanju Samson: ಸ್ಯಾಮ್ಸನ್ 18 ಕೋಟಿ ರೂ.ಗೆ ಚೆನ್ನೈಗೆ ತೆರಳಿದರೆ, ರವೀಂದ್ರ ಜಡೇಜಾ 14 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್‌ಗೆ ಮರಳಿದರು. ಸ್ಯಾಮ್ಸನ್ ಆಗಮನದಿಂದ ಚೆನ್ನೈ ತಂಡಕ್ಕೆ ಸಮರ್ಥ ವಿಕೆಟ್‌ ಕೀಪರ್‌ ಮತ್ತು ಆರಂಭಿಕ ಬ್ಯಾಟರ್‌ ಲಭಿಸಿದಂತಾಗಿದೆ. ಧೋನಿಯ ಉತ್ತರಾಧಿಕಾರಿಯಾಗಿ ಸ್ಯಾಮ್ಸನ್‌ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಮುಂದಿನ ಆವೃತ್ತಿಯಲ್ಲಿ ಕೇಲವ ಇಂಪ್ಯಾಕ್ಟ್‌ ಆಟಗಾರನಾಗಿ ಆಡುವ ಸಾಧ್ಯತೆ ಇದೆ.

ಚೆನ್ನೈ ಸೇರಿದ ಸಂಜು ಸ್ಯಾಮ್ಸನ್‌, ರಾಜಸ್ಥಾನ್‌ಗೆ ರವೀಂದ್ರ ಜಡೇಜಾ

ಮುಂಬಯಿ: ಬಹುದಿನಗಳಿಂದ ಭಾರೀ ಚರ್ಚೆಯಾಗುತ್ತಿದ್ದ ಸಂಜು ಸ್ಯಾಮ್ಸನ್‌(Sanju Samson) ಮತ್ತು ರವೀಂದ್ರ ಜಡೇಜಾ(Ravindra Jadeja) ಟ್ರೇಡಿಂಗ್‌(IPL 2026 retention) ವ್ಯಾಪಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಂಜು ಸ್ಯಾಮ್ಸನ್‌ ಅವರು ರಾಜಸ್ಥಾನ್‌ ತಂಡದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಚೆನ್ನೈ ತಂಡದ ಆಟಗಾರರಾಗಿದ್ದ ರವೀಂದ್ರ ಜಡೇಜಾ ಮತ್ತು ಸ್ಯಾಮ್‌ ಕರನ್‌ ರಾಜಸ್ಥಾನ್‌ ರಾಯಲ್ಸ್‌ಗೆ ಸೇರಿದರು. ಜಡೇಜಾ ತಮ್ಮ ಐಪಿಎಲ್‌ ವೃತ್ತಿಜೀವನ ಆರಂಭಿಸಿದ್ದೇ ರಾಜಸ್ಥಾನ್‌ ಪರ ಆಡುವ ಮೂಲಕ. 2012ರಲ್ಲಿ ಅವರು ಚೆನ್ನೈ ಸೇರಿದ್ದರು. ಇದೀಗ ಮತ್ತೆ ತಮ್ಮ ಹಳೆಯ ತಂಡ್ಕಕ್ಕೆ ಮರಳಿದ್ದಾರೆ.

ಸ್ಯಾಮ್ಸನ್ 18 ಕೋಟಿ ರೂ.ಗೆ ಚೆನ್ನೈಗೆ ತೆರಳಿದರೆ, ರವೀಂದ್ರ ಜಡೇಜಾ 14 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್‌ಗೆ ಮರಳಿದರು. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಪ್ಲೇಆಫ್‌ಗಳನ್ನು ತಲುಪಲು ವಿಫಲವಾದ ಮತ್ತು ಪದೇ ಪದೇ ನ್ಯೂನತೆಗಳನ್ನು ಎದುರಿಸಿದ ನಂತರ ಈ ವಿನಿಮಯವು ಬಂದಿದೆ. ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಚೆನ್ನೈ ಸೂಪರ್ ಕಿಂಗ್ಸ್ ನಿಂದ ರಾಜಸ್ಥಾನ್ ರಾಯಲ್ಸ್‌ಗೆ ತಮ್ಮ ಪ್ರಸ್ತುತ ಲೀಗ್ ಶುಲ್ಕ 2.4 ಕೋಟಿ ರೂಪಾಯಿಗಳಲ್ಲಿ ಸೇರಿಕೊಂಡರು.



ಸ್ಯಾಮ್ಸನ್ ಆಗಮನದಿಂದ ಚೆನ್ನೈ ತಂಡಕ್ಕೆ ಸಮರ್ಥ ವಿಕೆಟ್‌ ಕೀಪರ್‌ ಮತ್ತು ಆರಂಭಿಕ ಬ್ಯಾಟರ್‌ ಲಭಿಸಿದಂತಾಗಿದೆ. ಧೋನಿಯ ಉತ್ತರಾಧಿಕಾರಿಯಾಗಿ ಸ್ಯಾಮ್ಸನ್‌ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಮುಂದಿನ ಆವೃತ್ತಿಯಲ್ಲಿ ಕೇಲವ ಇಂಪ್ಯಾಕ್ಟ್‌ ಆಟಗಾರನಾಗಿ ಆಡುವ ಸಾಧ್ಯತೆ ಇದೆ.

2021 ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಸ್ಯಾಮ್ಸನ್ ನೇತೃತ್ವದಲ್ಲಿ ರಾಯಲ್ಸ್ 33 ಪಂದ್ಯಗಳಲ್ಲಿ ಜಯಗಳಿಸಿದೆ ಮತ್ತು 32 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್‌ ಪರ ಸಂಜು 4027 ರನ್ ಗಳಿಸಿದ್ದಾರೆ. 18ನೇ ಆವೃತ್ತಿಯಲ್ಲಿ ಕೈ ಬೆರಳಿನ ಗಾಯದಿಂದ ಬಳಲಿದ್ದ ಸಂಜು ಬೆರಳೆಣಿಕೆಯ ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದರು. ಜತೆಗೆ ಕೋಚ್‌ ಗಂಭೀರ್‌ ಜತೆ ಮನಸ್ತಾಪ ಮಾಡಿಕೊಂಡಿದ್ದಾಗಿಯೂ ಸುದ್ದಿಯಾಗಿತ್ತು.

ಕಳೆದ 12 ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 200 ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ, ಸಿಎಸ್‌ಕೆ ಪರ 143 ವಿಕೆಟ್‌ಗಳು, ಮೂರು ಪ್ರಶಸ್ತಿ ವಿಜೇತ ಅಭಿಯಾನಗಳು ಮತ್ತು 2023 ರ ಫೈನಲ್‌ನಲ್ಲಿ ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

"ರಾಜಸ್ಥಾನ್ ರಾಯಲ್ಸ್ ತಂಡ ನನಗೆ ಮೊದಲ ವೇದಿಕೆ ಮತ್ತು ಗೆಲುವಿನ ರುಚಿಯನ್ನು ನೀಡಿತು. ಮತ್ತೆ ತಂಡಕ್ಕೆ ಮರಳುವುದು ವಿಶೇಷವೆನಿಸುತ್ತದೆ. ಇದು ನನಗೆ ಕೇವಲ ಒಂದು ತಂಡವಲ್ಲ, ಅದು ತವರು. ನಾನು ನನ್ನ ಮೊದಲ ಐಪಿಎಲ್ ಗೆದ್ದ ಸ್ಥಳ ರಾಜಸ್ಥಾನ ರಾಯಲ್ಸ್, ಮತ್ತು ಈಗಿನ ಆಟಗಾರರ ಗುಂಪಿನೊಂದಿಗೆ ಇನ್ನಷ್ಟು ಗೆಲ್ಲುವ ಭರವಸೆ ನನಗಿದೆ" ಎಂದು ರವೀಂದ್ರ ಜಡೇಜಾ ಹೇಳಿದರು.



ಇದನ್ನೂ ಓದಿ IPL 2026 Mini Auction: ಮುಂಬೈ ಇಂಡಿಯನ್ಸ್‌ ಉಳಿಸಿಕೊಳ್ಳಬಲ್ಲ ಆಟಗಾರರ ವಿವರ!

ಲಕ್ನೋ ಸೇರಿದ ಅರ್ಜುನ್‌ ತೆಂಡೂಲ್ಕರ್‌

ಲಕ್ನೋ ಸೂಪರ್ ಜೈಂಟ್ಸ್ ತಂಡವು ಅರ್ಜುನ್ ತೆಂಡೂಲ್ಕರ್ ಮತ್ತು ಮೊಹಮ್ಮದ್ ಶಮಿ ಇಬ್ಬರಿಗೂ ಎಲ್ಲಾ ರೀತಿಯ ನಗದು ವರ್ಗಾವಣೆಗಳನ್ನು ಪೂರ್ಣಗೊಳಿಸಿದೆ. ಅರ್ಜುನ್‌ 2021 ರಿಂದ ಮುಂಬೈ ತಂಡದ ಭಾಗವಾಗಿದ್ದರು. ಆದರೆ 2023 ರಲ್ಲಿ ಪದಾರ್ಪಣೆ ಮಾಡಿದರು. ಐದು ಬಾರಿಯ ಚಾಂಪಿಯನ್ ಮುಂಬೈ ಪರ ಅವರು ಒಟ್ಟು ಐದು ಪಂದ್ಯಗಳನ್ನು ಆಡಿದ್ದಾರೆ ಮತ್ತು ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಅರ್ಜುನ್‌ 30 ಲಕ್ಷಕ್ಕೆ ಲಕ್ನೋ ತಂಡವನ್ನು ಸೇರಲಿದ್ದಾರೆ. ಶಮಿ ಅವರನ್ನು 10 ಕೋಟಿಗೆ ಲಕ್ನೋ ತನ್ನ ತಂಡಕ್ಕೆ ಸೇರಿಸಿಕೊಂಡಿತು. ಇದೇ ವೇಳೆ ನಿತೀಶ್ ರಾಣಾ ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾದರು.