ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೊಚ್ಚಲ ಚೀನಾ ಮಾಸ್ಟರ್ಸ್​ ಪ್ರಶಸ್ತಿ ಗೆದ್ದ ಸಾತ್ವಿಕ್​-ಚಿರಾಗ್​

Satwik-Chirag: ಶನಿವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಮಲೇಷ್ಯಾದ ನುರ್​ ಮೊಹಮದ್​ ಅಜ್ರಿನ್​ ಆಯುಬ್​ ಮತ್ತು ಟನ್​ ವೀ ಕಿಯೋಂಗ್​ ಜೋಡಿಯ ವಿರುದ್ಧ ಮೂರು ಗೇಮ್​ಗಳ ಹೋರಾಟದಲ್ಲಿ ಭಾರತೀಯ ಜೋಡಿ 21-15, 18-21, 21-11ರಿಂದ ಗೆಲುವು ಸಾಧಿಸಿದ್ದರು.

Satwik-Chirag

ಶೆನ್ಜೆನ್​, ಸೆ. 6: ಭಾರತದ ಡಬಲ್ಸ್​ ತಾರೆಯರಾದ ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಪ್ರತಿಷ್ಠಿತ ಚೀನಾ ಮಾಸ್ಟರ್ಸ್​ ಸೂಪರ್​ 750 (China Masters) ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಈ ಮೂಲಕ ಹಾಲಿ ವರ್ಷದಲ್ಲಿ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಭಾನುವಾರ ನಡೆದ ತೀವ್ರ ಪೈಪೋಟಿಯ ಫೈನಲ್‌ ಪಂದ್ಯದಲ್ಲಿ ವಿಶ್ವ ನಂ. 5 ಸಾತ್ವಿಕ್​-ಚಿರಾಗ್​ ಚೀನಾದ ಹಿ ಜಿ ಟಿಂಗ್​ ಮತ್ತು ರೆನ್​ ಕ್ಸಿಯಾಂಗ್​ ಯು ಜೋಡಿಯನ್ನು 21-11, 13-21, 21-17 ಅಂತರದಲ್ಲಿ ಸೋಲಿಸಿ ತಮ್ಮ 10 ನೇ ಬಿಡಬ್ಲ್ಯೂಎಫ್ ವಿಶ್ವ ಪ್ರವಾಸ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಗೆಲುವಿನೊಂದಿಗೆ ಹೀ ಮತ್ತು ರೆನ್ ವಿರುದ್ಧ ಭಾರತೀಯ ಜೋಡಿಯ ಹೆಡ್-ಟು-ಹೆಡ್ ದಾಖಲೆಯನ್ನು 3-0 ಗೆ ವಿಸ್ತರಿಸಿತು.

ಸಾತ್ವಿಕ್​-ಚಿರಾಗ್​ ಕಳೆದ 4 ವರ್ಷಗಳಲ್ಲಿ 3ನೇ ಬಾರಿ ಟೂರ್ನಿಯ ಫೈನಲ್​ಗೇರಿದ್ದರು. ಆದರೆ ಈ ಮುನ್ನ 2023, 2025ರಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅವರು ಈ ಬಾರಿ ಚೊಚ್ಚಲ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಚೀನಾ ಜೋಡಿಯನ್ನು ಭಾರತೀಯರು ನಾಲ್ಕು ಪಾಯಿಂಟ್‌ಗಳಿಗಿಂತ ಹತ್ತಿರ ಬರಲು ಎಂದಿಗೂ ಅವಕಾಶ ನೀಡಲಿಲ್ಲ ಮತ್ತು 18 ನಿಮಿಷಗಳಲ್ಲಿ 21-11 ರಲ್ಲಿ ಮೊದಲ ಪಂದ್ಯವನ್ನು ಪೂರ್ಣಗೊಳಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗಿ ಬಿದ್ದ ಚೀನಾ ಆಟಗಾರರು ಗೆಲುವು ಸಾಧಿಸಿ ಪಂದ್ಯವನ್ನು ಸಲಬಲಕ್ಕೆ ತಂದರು. ಅಂತಿಮ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಸಾತ್ವಿಕ್​-ಚಿರಾಗ್ 21-17 ಅಂತರದಿಂದ ಗೆಲುವು ಸಾಧಿಸಿದರು.

ಶನಿವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಮಲೇಷ್ಯಾದ ನುರ್​ ಮೊಹಮದ್​ ಅಜ್ರಿನ್​ ಆಯುಬ್​ ಮತ್ತು ಟನ್​ ವೀ ಕಿಯೋಂಗ್​ ಜೋಡಿಯ ವಿರುದ್ಧ ಮೂರು ಗೇಮ್​ಗಳ ಹೋರಾಟದಲ್ಲಿ ಭಾರತೀಯ ಜೋಡಿ 21-15, 18-21, 21-11ರಿಂದ ಗೆಲುವು ಸಾಧಿಸಿದ್ದರು.