ದುಬೈ, ಸೆ.6: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಭಾರತದ ಏಷ್ಯಾ ಕಪ್ 2026 ರ ಪಂದ್ಯದ ವೇಳೆ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು. ಮಹಿಳಾ T20I ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಗಳಿಸಿದ ಅತ್ಯಂತ ವೇಗದ ಮತ್ತು ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
22 ವರ್ಷದ ಭಾರತೀಯ ಆರಂಭಿಕ ಆಟಗಾರ್ತಿ ಈ ಮೈಲಿಗಲ್ಲು ತಲುಪಲು ಏಳು ರನ್‌ಗಳ ಅಗತ್ಯವಿತ್ತು ಮತ್ತು ಭಾರತದ ಗುರಿ ಬೆನ್ನಟ್ಟುವಿಕೆಯ ಮೊದಲ ಎರಡು ಎಸೆತಗಳಲ್ಲಿ ಅದನ್ನು ಪೂರ್ಣಗೊಳಿಸಿದರು. ಶಫಾಲಿ 2,182 ಎಸೆತಗಳಲ್ಲಿ 3,000 ಟಿ20ಐ ರನ್‌ಗಳನ್ನು ತಲುಪಿ ಆಸ್ಟ್ರೇಲಿಯಾದ ಅಲಿಸಾ ಹೀಲಿ ಅವರ ಹಿಂದಿನ ದಾಖಲೆಯನ್ನು ಮುರಿದರು.
2019 ರಲ್ಲಿ ಭಾರತದ ಮಹಿಳಾ ಟಿ20ಐಗಳಲ್ಲಿ ಪದಾರ್ಪಣೆ ಮಾಡಿದ ಏಳು ವರ್ಷಗಳ ನಂತರ ಶಫಾಲಿ 3 ಸಾವಿರ ರನ್‌ಗಳಿಸಿದ 3ನೇ ಭಾರತೀಯ ಕ್ರಿಕೆಟರ್ ಎನಿಸಿದರು. ಸ್ಮತಿ ಮಂದನಾ, ಹರ್ಮಾನ್‌ಪ್ರೀತ್ ಕೌರ್ ಮೊದಲಿಬ್ಬರು.
ಮಹಿಳಾ ಟಿ20ಐಗಳಲ್ಲಿ 3,000 ರನ್ ಗಳಿಸಿದ ಕಿರಿಯ ಆಟಗಾರ್ತಿ
ಶಫಾಲಿ ವರ್ಮಾ (ಭಾರತ) - 22 ವರ್ಷ, 220 ದಿನಗಳು
ಗ್ಯಾಬಿ ಲೂಯಿಸ್ (ಐರ್ಲೆಂಡ್) - 24 ವರ್ಷ, 347 ದಿನಗಳು
ಇಶಾ ಓಜಾ (ಯುಎಇ) - 27 ವರ್ಷ, 139 ದಿನಗಳು
ಸ್ಮೃತಿ ಮಂಧಾನ (ಭಾರತ) - 27 ವರ್ಷ, 171 ದಿನಗಳು
ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್) - 27 ವರ್ಷ, 347 ದಿನಗಳು
ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿ 9 ರನ್ ಅಂತರದಲ್ಲಿ ಆರು ವಿಕೆಟ್ ಕೈಚೆಲ್ಲಿತು.18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆದ ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20ಯಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು.
Women's Asia Cup: ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ!
ಚೇಸಿಂಗ್‌ನಲ್ಲಿ ಫಾತಿಮಾ ಸನಾ (17ಕ್ಕೆ 3) ದಾಳಿಗೆ ಸಿಲುಕಿ ಪರದಾಡಿದ ಭಾರತ ಅಂತಿಮವಾಗಿ 8.4 ಓವರ್‌ಗಳಲ್ಲಿ 3 ವಿಕೆಟ್‌ಗೆ 57 ರನ್‌ಗಳಿಸಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತು. ಈ ಪಂದ್ಯದಲ್ಲೂ ಪಾಕಿಸ್ತಾನ ಎದುರು ಭಾರತ ತಂಡ ನೋ ಹ್ಯಾಂಡ್‌ಶೇಕ್ ಪಾಲಿಸಿ ಮುಂದುವರಿಸಿತು. ಕಳೆದ ಒಂದು ವರ್ಷದಿಂದ ಭಾರತ-ಪಾಕ್ ತಂಡಗಳು (ಕಿರಿಯರು-ಹಿರಿಯರು) ಪರಸ್ಪರ ಎಂಟನೇ ಬಾರಿಗೆ ಎದುರಾದ ದೃಷ್ಟಾಂತ ಇದಾಗಿದೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 18.1 ಓವರ್‌ಗಳಲ್ಲಿ 55 (ಮುನೀಬಾ 13, ಶಾವಯಿ 14, ಆಯೇಷಾ 2, ಫಾತಿಮಾ 5, ಉಮ್ ಇ ಹನಿ 6, ತುಬ 9, ಶ್ರೀಚರಣಿ 7ಕ್ಕೆ 3, ಪ್ರೇಮಾ ರಾವತ್ 9ಕ್ಕೆ 3, ದೀಪ್ತಿ ಶರ್ಮ 5ಕ್ಕೆ 2, ಶೆಾಲಿ 10ಕ್ಕೆ 1).
ಭಾರತ: 8.4 ಓವರ್‌ಗಳಲ್ಲಿ 3 ವಿಕೆಟ್‌ಗೆ 57 (ಸ್ಮತಿ ಮಂದನಾ 9, ಶೆಾಲಿ 12, ಪ್ರತೀಕಾ 4, ಹರ್ಮಾನ್‌ಪ್ರೀತ್ 18*, ದೀಪ್ತಿ 12*, ಫಾತಿಮಾ 17ಕ್ಕೆ 3).