ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಂದ್ಯಶ್ರೇಷ್ಠ ಪಡೆದು ಸ್ಮೃತಿ ಮಂಧಾನ ದಾಖಲೆ ಮುರಿದ ಶಫಾಲಿ ವರ್ಮ

Shafali Verma: ಭಾರತ ಪರ ಟಿ20 ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಒಟ್ಟಾರೆ ದಾಖಲೆ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಹೆಸರಿನಲ್ಲಿದೆ. ಮಿಥಾಲಿ 2006 ರಿಂದ 2019 ರವರೆಗೆ ಭಾರತಕ್ಕಾಗಿ 89 T20I ಗಳನ್ನು ಆಡಿದ್ದಾರೆ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Shafali Verma

ವಿಶಾಖಪಟ್ಟಣಂ,ಡಿ.24 ಮಂಗಳವಾರ ಶ್ರೀಲಂಕಾ ವಿರುದ್ಧದ ಎರಡನೇ(India Women vs Sri Lanka Women) ಟಿ20 ಪಂದ್ಯದಲ್ಲಿ ಭಾರತ ಪರ ಮ್ಯಾಚ್‌ ವಿನ್ನಿಂಗ್‌ ಇನ್ನಿಂಗ್ಸ್ ಆಡಿದ ಸ್ಫೋಟಕ ಬ್ಯಾಟರ್‌ ಶಫಾಲಿ ವರ್ಮಾ(Shafali Verma) ಅವರು ಸ್ಮೃತಿ ಮಂಧಾನ ಅವರ ದಾಖಲೆ ಹಿಂದಿಕ್ಕಿ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್‌ ಜತೆ ಎಲೈಟ್‌ ಪಟ್ಟಿ ಸೇರಿದ್ದಾರೆ.

ಪಂದ್ಯದಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ ಶಫಾಲಿ ಅಜೇಯ 69 ರನ್ ಗಳಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದೇ ವೇಳೆ ಭಾರತದ ಪರ ಅತಿ ಕಡಿಮೆ ಅವಧಿಯ ಟಿ20 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪಡೆದ ಮೂರನೇ ಆಟಗಾರ್ತಿ ಎನಿಸಿದರು. ಇದು ಶಫಾಲಿಯ 8ನೇ ಪಂದ್ಯಶ್ರೇಷ್ಠ ಪ್ರಶಸ್ತಿ. ಏಳು ಬಾರಿ ಈ ಪ್ರಶಸ್ತಿ ಪಡೆದಿದ್ದ ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಅವರನ್ನು ಹಿಂದಿಕ್ಕಿದರು.

ಭಾರತ ಪರ ಟಿ20 ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಒಟ್ಟಾರೆ ದಾಖಲೆ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಹೆಸರಿನಲ್ಲಿದೆ. ಮಿಥಾಲಿ 2006 ರಿಂದ 2019 ರವರೆಗೆ ಭಾರತಕ್ಕಾಗಿ 89 T20I ಗಳನ್ನು ಆಡಿದ್ದಾರೆ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ನಂತರ ಹರ್ಮನ್‌ಪ್ರೀತ್ ಇದ್ದಾರೆ. ಇದುವರೆಗೆ ಆಡಿದ 184 T20I ಗಳಲ್ಲಿ 11 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಶಫಾಲಿ 92 T20I ಗಳಲ್ಲಿ 8 ಪಂದ್ಯಶ್ರೇಷ್ಠ ಪ್ರಶಸ್ತಿಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

T20ಯಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತ ಮಹಿಳಾ ಆಟಗಾರ್ತಿಯರು

12 - ಮಿಥಾಲಿ ರಾಜ್

11 - ಹರ್ಮನ್‌ಪ್ರೀತ್ ಕೌರ್

8 - ಶಫಾಲಿ ವರ್ಮಾ*

7 - ಸ್ಮೃತಿ ಮಂಧಾನ

7 - ದೀಪ್ತಿ ಶರ್ಮಾ

7 - ಜೆಮಿಮಾ ರಾಡ್ರಿಗಸ್

ಹಲವು ವರ್ಷಗಳ ಬಳಿಕ ವಿಜಯ್‌ ಹಜಾರೆಯಲ್ಲಿ ಕಾಣಿಸಿಕೊಂಡ ಕೊಹ್ಲಿ, ರೋಹಿತ್‌

ಎಸಿಎ–ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ, ಶ್ರೀಚರಣಿ (23ಕ್ಕೆ2), ವೈಷ್ಣವಿ ಶರ್ಮಾ (32ಕ್ಕೆ2) ಹಾಗೂ ಸ್ನೇಹ ರಾಣಾ (11ಕ್ಕೆ1) ಅವರ ದಾಳಿಯ ಮುಂದೆ ಲಂಕಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 128 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡವು ಕೇವಲ 11.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು.

ಲಂಕಾ ಪರ ತಂಡದ ಹರ್ಷಿತಾ ಸಮರವಿಕ್ರಮ (33 ರನ್) ಮತ್ತು ನಾಯಕಿ ಚಾಮರಿ ಅಟಪಟ್ಟು (31 ರನ್) ಅವರ ಆಟದಿಂದಾಗಿ ತಂಡವು ಮೂರಂಕಿ ಮೊತ್ತ ದಾಟಲು ಸಾಧ್ಯವಾಯಿತು.