Shreyas Iyer: ಏಷ್ಯಾಕಪ್ ತಂಡದ ಸ್ಥಾನ ನಿರೀಕ್ಷೆಯಲ್ಲಿ ದುಲೀಪ್ ಟ್ರೋಫಿಯ ನಾಯಕತ್ವ ತಿರಸ್ಕರಿಸಿದ್ದ ಶ್ರೇಯಸ್ ಅಯ್ಯರ್
ಇದೇ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಶ್ರೇಯಸ್ ಪ್ರಮುಖ ಪಾತ್ರವಹಿಸಿದ್ದರು. ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರು ನಾಯಕರಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಅದರ ನಂತರದ ಸರಣಿಗಳಲ್ಲಿ ಶ್ರೇಯಸ್ ಅವರಿಗೆ ನಾಯಕತ್ವ ಸಿಗಲಿದೆ ಎನ್ನಲಾಗಿದೆ.


ಮುಂಬಯಿ: ಭಾರತ ಏಕದಿನ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್(Shreyas Iyer), ದೇಶೀಯ ಕ್ರಿಕೆಟ್ ಟೂರ್ನಿಯಾದ ದುಲೀಪ್ ಟ್ರೋಫಿಯ ಪಶ್ಚಿಮ ವಲಯದ(West Zone) ನಾಯಕತ್ವದ ಆಫರನ್ನು ತಿರಸ್ಕರಿಸಿದ ಕಾರಣ ಆಲ್ ರೌಂಡರ್ ಶಾರ್ದುಲ್ ಠಾಕೂರ್(Shardul Thakur) ಅವರಿಗೆ ನಾಯಕತ್ವದ ಹೊಣೆ ವಹಿಸಿದರು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
"ಹೌದು, ಪಶ್ಚಿಮ ವಲಯ ಆಯ್ಕೆ ಸಮಿತಿಯಿಂದ ತಂಡದ ನಾಯಕತ್ವದ ಪ್ರಸ್ತಾಪವನ್ನು ಅಯ್ಯರ್ ತಿರಸ್ಕರಿಸಿದ್ದು ನಿಜ. ಅದಾದ ನಂತರ, ಸಮಿತಿಯ ಅಧ್ಯಕ್ಷರು ಮತ್ತು ಮುಂಬೈ ಮುಖ್ಯ ಆಯ್ಕೆದಾರರೂ ಆಗಿರುವ ಸಂಜಯ್ ಪಾಟೀಲ್, ಪಶ್ಚಿಮ ವಲಯವನ್ನು ಮುನ್ನಡೆಸಲು ಠಾಕೂರ್ ಅವರನ್ನು ಸಂಪರ್ಕಿಸಿದರು, ಈ ಅವಕಾಶವನ್ನು ಠಾಕೂರ್ ಸಂತೋಷದಿಂದ ಸ್ವೀಕರಿಸಿದರು" ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಂದು ಆರಂಭವಾಗಲಿದ್ದು, ದುಲೀಪ್ ಟ್ರೋಫಿಯ ಸೆಮಿಫೈನಲ್ ಸೆಪ್ಟೆಂಬರ್ 4 ರಿಂದ 7 ರವರೆಗೆ ನಡೆಯಲಿದೆ. ಶ್ರೇಯಸ್ ಅವರನ್ನು ತಂಡದಲ್ಲಿ ಸೇರಿಸಿದ್ದರೆ, ಅವರು ಸ್ಪರ್ಧೆಯ ಅಂತಿಮ ಹಂತಕ್ಕೆ ಲಭ್ಯವಿರಲಿಲ್ಲ. ಆದಾಗ್ಯೂ, ಬ್ಯಾಟ್ಸ್‌ಮನ್ 15 ಜನರ ತಂಡದಲ್ಲಿ ಸ್ಥಾನ ಪಡೆಯಲಿಲ್ಲ.
ದೈನಿಕ್ ಜಾಗರಣ್ ವರದಿ ಪ್ರಕಾರ, ಏಷ್ಯಾಕಪ್‌ನಲ್ಲಿ ಅಯ್ಯರ್‌ಗೆ ಅವಕಾಶ ಸಿಗದಿದ್ದರೂ ಕೂಡ ಏಕದಿನ ಕ್ರಿಕೆಟ್‌ನಲ್ಲಿ ನಾಯಕತ್ವದ ಪಾತ್ರಕ್ಕಾಗಿ ಅವರ ಹೆಸರು ಚರ್ಚೆಯಲ್ಲಿದೆ ಎಂದು ವರದಿ ಮಾಡಿದೆ. ಅಯ್ಯರ್‌ಗೆ ನಾಯಕತ್ವ ನೀಡಿದರೆ ಅವರು ಅದಕ್ಕೆ ಅರ್ಹರಾಗಿದ್ದಾರೆ. ಈಗಾಗಲೇ ಐಪಿಎಲ್ ಸೇರಿ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವವನ್ನು ಅವರು ಸಾಬೀತು ಪಡಿಸಿದ್ದಾರೆ.
ಇದೇ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಶ್ರೇಯಸ್ ಪ್ರಮುಖ ಪಾತ್ರವಹಿಸಿದ್ದರು. ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರು ನಾಯಕರಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಅದರ ನಂತರದ ಸರಣಿಗಳಲ್ಲಿ ಶ್ರೇಯಸ್ ಅವರಿಗೆ ನಾಯಕತ್ವ ಸಿಗಲಿದೆ ಎನ್ನಲಾಗಿದೆ.
ಇದನ್ನೂ ಓದಿ ಅನಾರೋಗ್ಯದಿಂದ ಬಳಲುತ್ತಿರುವ ಶುಭಮನ್ ಗಿಲ್ ದುಲೀಪ್ ಟ್ರೋಫಿಯಿಂದ ಔಟ್?