ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asian Shooting Championships: 25 ಮೀಟರ್ ಏರ್ ಪಿಸ್ತೂಲ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಮನು ಭಾಕರ್

ಚೀನಾದ ಶೂಟರ್‌ಗಳಾದ ಯುಯು ಜಾಂಗ್ ಮತ್ತು ಜಿಯಾರುಯಿಕ್ಸುವಾನ್ ಕ್ಸಿಯಾವೊ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು. ಮಾಜಿ ಶೂಟರ್‌ಗಳು 39 ಅಂಕಗಳೊಂದಿಗೆ ಸಮಬಲ ಸಾಧಿಸಿದ ಕಾರಣ ಫಲಿತಾಂಶ ನಿರ್ಣಯಕ್ಕೆ ಶೂಟ್-ಆಫ್‌ ಮೊರೆ ಹೋಗಲಾಯಿತು. ಇಲ್ಲಿ ಜಾಂಗ್ 4-3 ರಿಂದ ಮೇಲುಗೈ ಸಾಧಿಸಿದರು.

ಪುರುಷರ 50 ಮೀಟರ್ ರೈಫಲ್ (3ಪಿ)ನಲ್ಲಿ ಚಿನ್ನ ಗೆದ್ದ ಐಶ್ವರಿ ಪ್ರತಾಪ್‌

Abhilash BC Abhilash BC Aug 25, 2025 3:04 PM

ಕಜಕಿಸ್ತಾನ: ಸೋಮವಾರ ಇಲ್ಲಿನ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತೆ ಭಾರತೀಯ ಶೂಟರ್ ಮನು ಭಾಕರ್(Manu Bhaker) ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯಿಂದ ವಂಚಿತರಾದರು. ಎಂಟು ಮಹಿಳೆಯರ ಫೈನಲ್‌ನಲ್ಲಿ ಭಾಕರ್ ಅವರ ಸಹ ಆಟಗಾರ್ತಿ ಇಶಾ ಸಿಂಗ್(Esha Singh) 18 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ಭಾಕರ್(25) ಅಂಕಗಳನ್ನು ಗಳಿಸಿದರು. ಆದರೆ ಒಲಿಂಪಿಯನ್ ಶೂಟರ್ ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್ ಪುರುಷರ 50 ಮೀಟರ್ ರೈಫಲ್ (3ಪಿ) ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಚೀನಾದ ಶೂಟರ್‌ಗಳಾದ ಯುಯು ಜಾಂಗ್ ಮತ್ತು ಜಿಯಾರುಯಿಕ್ಸುವಾನ್ ಕ್ಸಿಯಾವೊ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು. ಮಾಜಿ ಶೂಟರ್‌ಗಳು 39 ಅಂಕಗಳೊಂದಿಗೆ ಸಮಬಲ ಸಾಧಿಸಿದ ಕಾರಣ ಫಲಿತಾಂಶ ನಿರ್ಣಯಕ್ಕೆ ಶೂಟ್-ಆಫ್‌ ಮೊರೆ ಹೋಗಲಾಯಿತು. ಇಲ್ಲಿ ಜಾಂಗ್ 4-3 ರಿಂದ ಮೇಲುಗೈ ಸಾಧಿಸಿದರು. ವಿಯೆಟ್ನಾಂನ ಥು ವಿನ್ ಟ್ರಿನ್ (29) ಕಂಚಿನ ಪದಕ ಜಯಿಸಿದರು. ಮಹಿಳೆಯರ 25 ಮೀಟರ್ ಪಿಸ್ತೂಲ್ ಅರ್ಹತೆಯಲ್ಲಿ ಇಶಾ ಅಗ್ರಸ್ಥಾನ ಪಡೆದರು. ಆದರೆ ಫೈನಲ್‌ನಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಇದನ್ನೂ ಓದಿ ಏಷ್ಯನ್ ಶೂಟಿಂಗ್: ಕಂಚು ಗೆದ್ದ ಮನು ಭಾಕರ್

ಭಾಕರ್, ಇಶಾ ಮತ್ತು ಸಿಮ್ರಾನ್‌ಪ್ರೀತ್ ಕೌರ್ ಬ್ರಾರ್ ಅವರನ್ನೊಳಗೊಂಡ ಭಾರತೀಯ ತ್ರಿವಳಿ ತಂಡವು ಒಟ್ಟು 1749 ಅಂಕಗಳೊಂದಿಗೆ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿತು.

ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಚಿನ್ನದ ಪದಕ ಗೆದ್ದರು, ಅರ್ಹತಾ ಸುತ್ತಿನ ಟಾಪರ್ ಚೀನಾದ ಝಾವೋ ವೆನ್ಯು ಅವರನ್ನು 0.5 ಅಂಕಗಳಿಂದ ಹಿಂದಿಕ್ಕಿದರು.

24 ವರ್ಷದ, ಎರಡು ಬಾರಿಯ ಒಲಿಂಪಿಯನ್‌, ತೋಮರ್ 2023 ರಲ್ಲಿ ಚಾಂಗ್‌ವಾನ್‌ನಲ್ಲಿ ಜಯಗಳಿಸಿದ ನಂತರ ಇದು ಅವರ ಎರಡನೇ ವೈಯಕ್ತಿಕ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನವಾಗಿದೆ. ಕಳೆದ ವರ್ಷ ಅವರು ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಮತ್ತು ಈಗಾಗಲೇ ಅವರು ಮೂರು ವೈಯಕ್ತಿಕ ವಿಶ್ವಕಪ್ ಚಿನ್ನದ ಪದಕಗಳನ್ನು ಹೊಂದಿದ್ದಾರೆ.