ಲಂಡನ್, ಜು.8: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯ ಮೂರನೇ ಟಿ20ಐ ಪಂದ್ಯದಲ್ಲಿಯೂ ಭಾರತ ಹೀನಾಯ ಸೋಲು ಕಂಡಿತು. ಜುಲೈ 7 ರಂದು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಭಾರತ 125 ರನ್ ಅಂತರದಿಂದ ಆಂಗ್ಲರಿಗೆ ಶರಣಾಯಿತು. ಟಾಸ್ ಗೆಲುವಿನೊಂದಿಗೆ, ಶ್ರೇಯಸ್ ಅಯ್ಯರ್ ಧೋನಿ, ಕೊಹ್ಲಿ ಜತೆ ಎಲೈಟ್ ಪಟ್ಟಿ ಸೇರಿದರು.
ಅಯ್ಯರ್ ಅವರು ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಭಾರತದ ಟಿ20ಐ ನಾಯಕರೊಬ್ಬರು ಸತತವಾಗಿ ಅತಿ ಹೆಚ್ಚು ಟಾಸ್ ಗೆದ್ದ ನಾಯಕರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಜತೆ ಸೇರಿಕೊಂಡರು.
ಇದು ಅಯ್ಯರ್ ಅವರ ಸತತ ಐದನೇ ಟಾಸ್ ಗೆಲುವು. ಅವರು ಭಾರತದ T20I ನಾಯಕನಾಗಿ ಜಂಟಿ ಮೂರನೇ ಅತಿ ಹೆಚ್ಚು ಟಾಸ್ ಗೆದ್ದ ಸಾಧನೆಗೈದರು. ಆದರೆ ಎಲ್ಲ ಪಂದ್ಯಗಳನ್ನು ಸೋಲು ಕಂಡಿರುವುದು ವಿಪರ್ಯಾಸ.
ಭಾರತದ ನಾಯಕನೊಬ್ಬ ಸತತವಾಗಿ ಹೆಚ್ಚು ಟಾಸ್ ಗೆದ್ದಿರುವುದು (T20Is)
7 - ಎಂಎಸ್ ಧೋನಿ (ಮೇ 2010 - ಫೆಬ್ರವರಿ 2012)
6 - ವಿರಾಟ್ ಕೊಹ್ಲಿ (ಆಗಸ್ಟ್ 2019 - ಡಿಸೆಂಬರ್ 2019)
5 - ರೋಹಿತ್ ಶರ್ಮಾ (ಫೆಬ್ರವರಿ 2020 - ಫೆಬ್ರವರಿ 2022)
5 - ಎಂಎಸ್ ಧೋನಿ (ಸೆಪ್ಟೆಂಬರ್ 2007)
5* - ಶ್ರೇಯಸ್ ಅಯ್ಯರ್ (ಜೂನ್ 2026 - ಜುಲೈ 2026)
IND vs ENG: ಪವರ್‌ಪ್ಲೇನಲ್ಲಿ ಹರ್ಷಿತ್ ರಾಣಾಗೆ ಬ್ಯಾಟಿಂಗ್ ನೀಡಿದ್ದಕ್ಕೆ ದಿನೇಶ್ ಕಾರ್ತಿಕ್ ಆಕ್ರೋಶ!
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಭಾರತಕ್ಕೆ 202 ರನ್‌ಗಳ ಕಠಿಣ ಗುರಿ ನೀಡಿತು. ಆದರೆ ಭಾರತ 11.4 ಓವರ್‌ನಲ್ಲಿ 76 ರನ್‌ಗಳಿಗೆ ಸರ್ವಪತನವಾಯಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡಕ್ಕೆ ಸಾಲ್ಟ್ (70) ಹಾಗೂ ಜೋಸ್ ಬಟ್ಲರ್ (36) ಉತ್ತಮ ಆರಂಭ ಒದಗಿಸಿದರು.
ಆರಂಭಿಕ 10 ಓವರ್ ತನಕ ಹಿಡಿತ ಸಾಧಿಸಿದ ಭಾರತೀಯ ಬೌಲರ್‌ಗಳು ಆ ಬಳಿಕ ಲಯ ಕಳೆದುಕೊಂಡರು. ಕೊನೆಯ ಎಂಟು ಓವರ್‌ಗಳಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು 89 ರನ್ ಸೂರೆ ಮಾಡಿದರು. ಸ್ಪಿನ್ನರ್ ರವಿ ಬಿಷ್ಣೋಯಿ ಬದಲಿಗೆ ಸ್ಥಾನ ಪಡೆದ ಯುವ ವೇಗಿ ಪ್ರಿನ್ಸ್ ಯಾದವ್ (30ಕ್ಕೆ2) ಹಾಗೂ ಹರ್ಷಿತ್ ರಾಣಾ (40ಕ್ಕೆ2) ಪರಿಣಾಮಕಾರಿಯಾದರು. ಭಾರತ ಪರ ಸೂರ್ಯವಂಶಿ, ಕಿಶನ್ ಕೇವಲ ತಲಾ 13 ರನ್‌ಗಳಿದರೆ, ಅಭಿಷೇಕ್ ಶರ್ಮಾ, ಅಕ್ಷರ್ ತಲಾ 10 ಗಳಿಸಿದರು. ಉಳಿದಂತೆ ಯಾರೂ ಕೂಡ ಎರಡಂಕಿ ದಾಖಲಿಲ್ಲ.