ಮುಂಬಯಿ, ಎ.16: 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಎನ್ನುವಂತೆ ಐಪಿಎಲ್(MI vs PBKS)ನ ಇದುವರೆಗಿನ ಇತಿಹಾಸದಲ್ಲೇ ಶ್ರೇಯಸ್ ಅಯ್ಯರ್(Shreyas Iyer) ಅವರು ಫೀಲಿಂಗ್ ನಡೆಸುವ ಮೂಲಕ ಇದೀಗ ಎಲ್ಲರ ಗಮನಸೆಳೆದಿದ್ದಾರೆ. ಗುರುವಾರ ನಡೆದ ಮುಂಬೈ ಇಂಡಿಯನ್ಸ್(MI vs PBKS) ಎದುರಿನ ಪಂದ್ಯದಲ್ಲಿ ಅಯ್ಯರ್ ಅಸಾಮಾನ್ಯ ಫೀಲ್ಡಿಂಗ್ ಮೂಲಕ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪನತಗೊಳಿಸಿರು. ಅಯ್ಯರ್ ಅವರ ಈ ಕ್ಯಾಚ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಾರ್ಕೊ ಜಾನ್ಸೆನ್ ಎಸೆದ 18 ಓವರ್‌ನ ಮೂರನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್‌ಗೆ ಬಾರಿಸಿದ ಚೆಂಡನ್ನು ಬೌಂಡರಿ ಲೈನ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಹಕ್ಕಿಯಂತೆ ಹಿಮ್ಮುಖವಾಗಿ ಹಾರಿ ಕ್ಯಾಚ್ ಹಿಡುದು ಆ ಬಳಿಕ ಬೌಂಡರಿ ಲೈನ್‌ನ ಒಳಗಡೆ ಇದ್ದ ಜೇವಿಯರ್ ಬಾರ್ಟ್ಲೆಟ್‌ಗೆ ಚೆಂಡೆಸೆದರು. ಈ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಯ್ಯರ್ ಅವರ ಈ ಅಸಾಮಾನ್ಯ ಫೀಲ್ಡಿಂಗ್ ಕಂಡು ದಿಗ್ಭ್ರಮೆಗೊಂಡರು. ತಕ್ಷಣ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಆರಂಭಿಕ ಆಘಾತ ಎದುರಿಸಿದರೂ, ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಕ್ವಿಂಟನ್ ಡಿ ಕಾಕ್ ಬಾರಿಸಿದ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್ ಬಾರಿಸಿತು.
ಬಿರುಸಿನ ಬ್ಯಾಟಿಂಗ್ ನಡೆಸಿದ ಡಿ ಕಾಕ್ 60 ಎಸೆತಗಳಿಂದ 7 ಸಿಕ್ಸರ್ ಮತ್ತು 8 ಬೌಂಡರಿ ನೆರವಿನಿಂದ 112 ರನ್ ಬಾರಿಸಿದರು. ಇವರನ್ನು ಹೊರತುಪಡಿಸಿ ತಂಡದ ಪರ ಮಿಂಇದ ಮತೋರ್ವ ಬ್ಯಾಟರ್ ನಮನ್ ಧೀರ್(50) ಅರ್ಧಶತಕ ಬಾರಿಸಿದರು. ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿಯೂ ವಿಫಲರಾದರು. ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿದರು. ಒಟ್ಟಾರೆ ತಂಡದ ಪರ ಎರಡಂಕಿ ಮೊತ್ತ ಕಲೆಹಾಕಿದ್ದು ಕೇವಲ ಮೂವರು ಮಂದಿ ಮಾತ್ರ. ಪಂಜಾಬ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ 22 ರನ್‌ಗೆ 3 ವಿಕೆಟ್ ಕಿತ್ತು ಮಿಂಚಿದರು.
MI vs PBKS: ಇನ್ನೆರಡು ಪಂದ್ಯಕ್ಕೆ ರೋಹಿತ್ ಗೈರು; ಖಚಿತಪಡಿಸಿದ ನಾಯಕ ಪಾಂಡ್ಯ
ಉಭಯ ಆಡುವ ಬಳಗ
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್(ವಿ.ಕೀ.), ರಿಯಾನ್ ರಿಕೆಲ್ಟನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ಶೆರ್ಫೇನ್ ರುದರ್‌ಫೋರ್ಡ್, ನಮನ್ ಧೀರ್, ಮಯಾಂಕ್ ರಾವತ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ.
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್(ವಿ.ಕೀ.), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್(ನಾಯಕ), ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.