ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು; ಎರಡನೇ ಪಂದ್ಯಕ್ಕೆ ಅನುಮಾನ

ಕೋಲ್ಕತಾ ಟೆಸ್ಟ್‌ನ ಎರಡನೇ ದಿನವಾದ ಶನಿವಾರ ಬ್ಯಾಟಿಂಗ್‌ ನಡೆಸುವ ವೇಳೆ ಗಿಲ್‌ ಅವರ ಕುತ್ತಿಗೆ ಉಳುಕು ಸಂಭವಿಸಿತ್ತು. ನೋವಿನಿಂದ ನರಳಿದ ಅವರು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದರು. ಬಳಿಕ ಫೀಲ್ಡಿಂಗ್‌ಗೂ ಆಗಮಿಸಿರಲಿಲ್ಲ. ಬಳಿಕ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು; ಎರಡನೇ ಪಂದ್ಯಕ್ಕೆ ಅನುಮಾನ

ಕೋಲ್ಕತಾ: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌(Shubman Gill) ಅವರು ನವೆಂಬರ್ 22 ರಿಂದ 26 ರವರೆಗೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ(India vs South Africa) ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗಿಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಭಾನುವಾರ ದೃಢಪಡಿಸಿದೆ.

ಕೋಲ್ಕತಾ ಟೆಸ್ಟ್‌ನ ಎರಡನೇ ದಿನವಾದ ಶನಿವಾರ ಬ್ಯಾಟಿಂಗ್‌ ನಡೆಸುವ ವೇಳೆ ಗಿಲ್‌ ಅವರ ಕುತ್ತಿಗೆ ಉಳುಕು ಸಂಭವಿಸಿತ್ತು. ನೋವಿನಿಂದ ನರಳಿದ ಅವರು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದರು. ಬಳಿಕ ಫೀಲ್ಡಿಂಗ್‌ಗೂ ಆಗಮಿಸಿರಲಿಲ್ಲ. ಬಳಿಕ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಿಸಿಸಿಐ ಮೂಲಗಳ ಪ್ರಕಾರ, ಗಿಲ್ ಫಿಟ್ ಆಗಲು ಕೆಲವು ದಿನಗಳು ಬೇಕಾಗುತ್ತದೆ, ಮತ್ತು ಆ ಕಾರಣದಿಂದಾಗಿ, ಅವರು ಎರಡನೇ ಟೆಸ್ಟ್‌ನಲ್ಲಿ ಭಾಗವಹಿಸದಿರಬಹುದು ಎನ್ನಲಾಗಿದೆ.

"ಗಿಲ್‌ಗೆ ಔಷಧಿಗಳನ್ನು ನೀಡಲಾಗಿದೆ, ಆದರೆ ಅವರು ಫಿಟ್ ಆಗಲು ಕೆಲವು ದಿನಗಳು ಬೇಕಾಗುತ್ತದೆ. ಇದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಅವರು ಭಾಗವಹಿಸುವುದು ಅನುಮಾನ" ಎಂದು ರೆವ್‌ಸ್ಪೋರ್ಟ್ಜ್ ವರದಿ ಮಾಡಿದೆ.

ಎರಡನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ ಹೋಯಿತು. ದಕ್ಷಿಣ ಆಫ್ರಿಕಾ ತಂಡವು 60 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ನಾಯಕ ತೆಂಬಾ ಬವುಮಾ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಕನಿಷ್ಠ 20 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ಬವುಮಾ 78 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 29 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸ್ಯದದ ಸ್ಥಿತಿ ನೋಡುವಾಗ ಭೋಜನ ವಿರಾಮಕ್ಕೂ ಮುನ್ನವೇ ಪಂದ್ಯ ಮುಕ್ತಾಯ ಕಾಣುವ ಸಾಧ್ಯತೆ ಇದೆ. ಶನಿವಾರ ಭಾರತ ಪರ ಮಾರಕ ದಾಳಿ ನಡೆಸಿದ ರವೀಂದ್ರ ಜಡೇಜಾ 29 ರನ್ ನೀಡಿ 4 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 2 ಹಾಗೂ ಅಕ್ಷರ್ ಪಟೇಲ್ ಒಂದು ವಿಕೆಟ್ ಕಿತ್ತರು.

ಇದನ್ನೂ ಓದಿ IND vs SA: ಎರಡನೇ ದಿನ ಸ್ಪಿನ್ನರ್‌ಗಳ ಮ್ಯಾಜಿಕ್, ದಕ್ಷಿಣ ಆಫ್ರಿಕಾಗೆ ಕಹಿ, ಭಾರತಕ್ಕೆ ಸಿಹಿ!

ಎರಡನೇ ದಿನದಾಟದ ವೇಳೆ ಪಿಚ್ ಸಾಕಷ್ಟು ಟರ್ನ್ ಹಾಗೂ ಬೌನ್ಸ್ ಕಾಣುತಿತ್ತು. ಇದರ ಲಾಭ ಪಡೆದ ಹರಿಣಗಳ ಬೌಲರ್‌ಗಳು, ಭಾರತ ದೊಡ್ಡ ಮೊತ್ತ ಕಲೆಹಾಕಲು ಅವಕಾಶ ನೀಡಲಿಲ್ಲ. ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ 39 ರನ್ ಗಳಿಸಿದ್ದೇ ಟೀಂ ಇಂಡಿಯಾ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 29, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ತಲಾ 27 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಸರ್ವಪತನ ಕಂಡಿತು.