IND vs PAK: ಪಾಕ್ ಪಂದ್ಯಕ್ಕೂ ಮುನ್ನ ಬ್ರಾಂಕೊ ಟೆಸ್ಟ್‌ಗೆ ಒಳಗಾದ ಟೀಮ್ ಇಂಡಿಯಾ ಆಟಗಾರರು
Bronco Test: ಭಾರತ ತಂಡದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಂಡ್ರಿಯನ್ ಲೆ ರೌಕ್ಸ್ ಮಾರ್ಗದರ್ಶನದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಶುಭಮನ್ ಗಿಲ್ ಸೇರಿ ಎಲ್ಲ ಆಟಗಾರರು ಬ್ರಾಂಕೊ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದರ ವಿಡಿಯೊವನ್ನು ಟೀಮ್ ಇಂಡಿಯಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

-

ದುಬೈ: ಏಷ್ಯಾಕಪ್ ಟಿ20(asia cup 2025) ಟೂರ್ನಿಯಲ್ಲಿ ಸೆ.14(ಭಾನುವಾರ)ರಂದು ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯಕ್ಕಾಗಿ ಉಭಯ ತಂಡಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಉನ್ನತ ಮಟ್ಟದ ಫಿಟ್ನೆಸ್‌ಗಾಗಿ ಬ್ರಾಂಕೊ ಟೆಸ್ಟ್(Bronco test)ಗೆ ಒಳಪಟ್ಟಿದ್ದಾರೆ.
ಭಾರತ ತಂಡದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಂಡ್ರಿಯನ್ ಲೆ ರೌಕ್ಸ್ ಮಾರ್ಗದರ್ಶನದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಶುಭಮನ್ ಗಿಲ್ ಸೇರಿ ಎಲ್ಲ ಆಟಗಾರರು ಬ್ರಾಂಕೊ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದರ ವಿಡಿಯೊವನ್ನು ಟೀಮ್ ಇಂಡಿಯಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಏನಿದು ಬ್ರಾಂಕೊ ಟೆಸ್ಟ್?
ಬ್ರಾಂಕೊ ಟೆಸ್ಟ್ 20, 40, 60 ಮೀಟರ್‌ಗಳ ಹಲವು ಷಟಲ್ ರನ್(ಎರಡು ಅಥವಾ ಹೆಚ್ಚಿನ ಬಿಂದುಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಓಡುವುದು) ಒಳಗೊಂಡಿತ್ತದೆ. ಇದರಲ್ಲಿ1,200ಮೀ. ಓಟವನ್ನು ವಿಶ್ರಾಂತಿ ಇಲ್ಲದೆ 6 ನಿಮಿಷಗಳ ಒಳಗೆ ಪೂರೈಸಬೇಕಾಗುತ್ತೆ. ಒಂದು ರೀತಿಯಲ್ಲಿ ಸೇನಾ ಮತ್ತು ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಓಡಿದಂತೆ.
ಇದನ್ನೂ ಓದಿ Asia Cup 2025: ಪಾಕ್ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ
ಏಶ್ಯ ಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿವಿಧ ಮಾದರಿಗಳಲ್ಲಿ 18 ಬಾರಿ ಮುಖಾಮುಖಿಯಾಗಿವೆ. ಭಾರತ 10 ಬಾರಿ ಗೆದ್ದರೆ, ಪಾಕಿಸ್ತಾನ ಆರು ಪಂದ್ಯಗಳಲ್ಲಿ ಜಯ ಗಳಿಸಿವೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.