ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 2nd Test: ದ್ವಿತೀಯ ಟೆಸ್ಟ್‌ಗೂ ಮುನ್ನ ಟೀಮ್‌ ಇಂಡಿಯಾ ಸೇರಿದ ಯುವ ಸ್ಪಿನ್ನರ್‌

ಬ್ರಾರ್ ಜೊತೆಗೆ, ಚಂಡೀಗಢದ ಯುವ ವೇಗಿ ಜಗಜಿತ್ ಸಿಂಗ್ ಸಂಧು ಕೂಡ ಅತಿಥಿ ಬೌಲರ್ ಆಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡರು. ಇದು ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ತಂಡವು ತಮ್ಮ ತರಬೇತಿಯನ್ನು ತೀವ್ರಗೊಳಿಸುವ ಉದ್ದೇಶವನ್ನು ಮತ್ತಷ್ಟು ಸೂಚಿಸುತ್ತದೆ.

ಬರ್ಮಿಂಗ್‌ಹ್ಯಾಮ್‌: ಜುಲೈ 2 ರಿಂದ ಬರ್ಮಿಂಗ್‌ಹ್ಯಾಮ್‌ನ(Birmingham) ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ(Edgbaston) ನಡೆಯಲಿರುವ ಇಂಗ್ಲೆಂಡ್‌ ಎದುರಿನ ಟೆಸ್ಟ್‌(IND vs ENG 2nd Test) ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾಕ್ಕೆ ನೂತನ ಸ್ಪಿನ್‌ ಬೌಲರ್‌ ಒಬ್ಬರು ಎಂಟ್ರಿಕೊಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ್ದ ಎಡಗೈ ಸ್ಪಿನ್ ಹರ್‌ಪ್ರೀತ್ ಬ್ರಾರ್ ಅವರು ಅತಿಥಿ ನೆಟ್ ಬೌಲರ್ ಆಗಿ ಭಾರತದ ಕ್ಯಾಂಪ್‌ ಸೇರಿದ್ದಾರೆ. ಭಾರತದ ನಾಯಕ ಮತ್ತು ಪಂಜಾಬ್ ಮೂಲದ ಶುಭಮನ್ ಗಿಲ್ ಅವರ ಕೋರಿಕೆಯ ಮೇರೆಗೆ ಅವರನ್ನು ತಂಡವನ್ನು ಸೇರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬ್ರಾರ್ ನೆಟ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಇದು ಮುಂಬರುವ ಟೆಸ್ಟ್‌ಗಾಗಿ ಭಾರತದ ಸ್ಪಿನ್ ಯೋಜನೆಗಳ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಹೆಡಿಂಗ್ಲಿಯಲ್ಲಿ ತಂಡದ ಹೀನಾಯ ಸೋಲಿನ ನಂತರ.

"ನನ್ನ ಪತ್ನಿ ಸ್ವಿಂಡನ್‌ನಿಂದ ಬಂದವರು. ಇದು ಬರ್ಮಿಂಗ್ಹ್ಯಾಮ್‌ಗೆ ಬಹಳ ಹತ್ತಿರದಲ್ಲಿದೆ, ಇದು 1-1.5 ಗಂಟೆಗಳ ಡ್ರೈವ್ ದೂರದಲ್ಲಿದೆ. ನಾನು ಶುಭ್‌ಮನ್ (ಗಿಲ್) ಜತೆ ಮಾತನಾಡುತ್ತಿದ್ದೆ, ಅವರು ನನಗೆ ಸಂದೇಶ ಕಳುಹಿಸಿದರು. ಹಾಗಾಗಿ ಬರ್ಮಿಂಗ್ಹ್ಯಾಮ್‌ಗೆ ಹೋಗಿ ಅಭ್ಯಾಸ ಮಾಡೋಣ ಎಂದು ನಾನು ಭಾವಿಸಿದೆ" ಎಂದು ಬ್ರಾರ್ ಬಿಸಿಸಿಐ ವೀಡಿಯೊದಲ್ಲಿ ಹೇಳಿದರು.



ಇದನ್ನೂ ಓದಿ ENG vs IND: ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಹಿನ್ನೋಟ; ಐತಿಹಾಸಿಕ ಗೆಲುವಿಗೆ ಭಾರತ ಕಾತರ

ಬ್ರಾರ್ ಜೊತೆಗೆ, ಚಂಡೀಗಢದ ಯುವ ವೇಗಿ ಜಗಜಿತ್ ಸಿಂಗ್ ಸಂಧು ಕೂಡ ಅತಿಥಿ ಬೌಲರ್ ಆಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡರು. ಇದು ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ತಂಡವು ತಮ್ಮ ತರಬೇತಿಯನ್ನು ತೀವ್ರಗೊಳಿಸುವ ಉದ್ದೇಶವನ್ನು ಮತ್ತಷ್ಟು ಸೂಚಿಸುತ್ತದೆ.

ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ವಿಶ್ರಾಂತಿ ಪಡೆಯುವುದು ಬಹುತೇಕ ಖಚಿತವಾಗಿದ್ದು, ಇವರ ಸ್ಥಾನಕ್ಕೆ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ಒಂದು ಲೆಕ್ಕಾಚಾರದ ಪ್ರಕಾರ ಎಡಗೈ ಪೇಸರ್‌ ಅರ್ಷದೀಪ್‌ ಸಿಂಗ್‌ ಆಡಲಿದ್ದಾರೆ.