ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಂಡೀಗಢಕ್ಕೆ ಮಣಿದ ಕರ್ನಾಟಕ; ನಾಕೌಟ್ ರೇಸ್‌ಗೆ ಹಿನ್ನಡೆ

SMAT 2026: ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಚಂಡೀಗಢಕ್ಕೆ ನಾಯಕ ಶಿವಂ ಭಾಂಬ್ರಿ(52) ಅರ್ಧಶತಕ ಬಾರಿಸುವ ಮೂಲಕ ನೆರವಾದರು. ಅವರ ಈ ಬ್ಯಾಟಿಂಗ್‌ ನೆರವಿನಿಂದ ತಂಡವು ಇನ್ನೂ 37 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗೆ 96 ರನ್‌ ಬಾರಿಸಿ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

SMAT 2026

ಮುಂಬೈ, ನ.22: ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಂಡೀಗಢ ವಿರುದ್ಧ 7 ವಿಕೆಟ್‌ ಅಂತರದ ಹೀನಾಯ ಸೋಲು ಕಂಡಿತು. ಈ ಸೋಲಿನಿಂದಾಗಿ 'ಎ' ಗುಂಪಿನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶ ಬಹುತೇಕ ಕಳೆದುಕೊಂಡಿತು. ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ ತಂಡಕ್ಕೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಂಡೀಗಢ ಬೌಲರ್‌ಗಳ ದಾಳಿಗೆ ಗಡಗಡ ನಡುಗಿದ ರಾಜ್ಯದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ ಕಳೆದುಕೊಂಡು 17.5 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಸರ್ವಪತನ ಕಂಡಿತು.

ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಚಂಡೀಗಢಕ್ಕೆ ನಾಯಕ ಶಿವಂ ಭಾಂಬ್ರಿ(52) ಅರ್ಧಶತಕ ಬಾರಿಸುವ ಮೂಲಕ ನೆರವಾದರು. ಅವರ ಈ ಬ್ಯಾಟಿಂಗ್‌ ನೆರವಿನಿಂದ ತಂಡವು ಇನ್ನೂ 37 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗೆ 96 ರನ್‌ ಬಾರಿಸಿ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ಭಾರತ-ಪಾಕ್‌ ಪಂದ್ಯದ ಟಾಸ್ ವೇಳೆ ಹೈಡ್ರಾಮಾ!; ಮ್ಯಾಚ್ ರೆಫರಿ ನಿರ್ಧಾರ ಮರುಪರಿಶೀಲಿಸಿದ ಪಾಕ್‌ ನಾಯಕ

ಚೇಸಿಂಗ್‌ ವೇಳೆ ಚಂಡೀಗಢವೂ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಮನನ್‌ ವೋಹ್ರಾ (7) ಮತ್ತು ಅರ್ಜುನ್‌ ಆಜಾದ್‌ (0) ವಿಕೆಟ್‌ ಕಳೆದುಕೊಂಡಿತು. ಈ ಎರಡೂ ವಿಕೆಟ್‌ ಶ್ರೀಶ ಆಚಾರ್ ಪಾಲಾಯಿತು. ಆದರೆ ನಾಯಕ ಶಿವಂ ಭಾಂಬ್ರಿ ಮತ್ತು ಸಂಯಮ್ ಸೈನಿ ಉತ್ತಮ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅರ್ಧಶತಕದ ಬಳಿಕ ಭಾಂಬ್ರಿ ರನೌಟ್‌ ಆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಕರ್ನಾಟಕ ಪರ ಕರುಣ್‌ ನಾಯರ್‌ ಬಾರಿಸಿದ 25 ರನ್‌ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವಾಯಿತು. ಲವನಿತ್ ಸಿಸೋಡಿಯಾ(18) ರನ್‌ ಗಳಿಸಿದರು. ಅನುಭವಿ ಆಟಗಾರ ಮನೀಷ್‌ ಪಾಂಡೆ(14) ನಾಯಕ ಸ್ಮರಣ್ ರವಿಚಂದ್ರನ್(3), ಅನೀಶ್ವರ್‌ ಗೌತಮ್‌(2) ವಿಫಲರಾದರು.

ಚಂಡೀಗಢ ಪರ ಹಾರ್ದಿಕ್ ಚೌಧರಿ ಮತ್ತು ಭಾಗ್ಮೆಂದರ್ ಲಾಥರ್ ಉತ್ಕೃಷ್ಟ ಮಟ್ಟದ ಬೌಲಿಂಗ್‌ ಪ್ರದರ್ಶನ ತೋರಿದರು. ಹಾರ್ದಿಕ್ ಚೌಧರಿ ನಾಲ್ಕು ಓವರ್‌ಗೆ 17 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರೆ, ಭಾಗ್ಮೆಂದರ್ ಲಾಥರ್ 19 ರನ್‌ ವೆಚ್ಚದಲ್ಲಿ 3 ವಿಕೆಟ್‌ ಪಡೆದರು. ಉಳಿದಂತೆ ಜಗಜಿತ್ ಸಿಂಗ್ ಮತ್ತು ರೋಹಿತ್ ಧಾಂಡಾ ತಲಾ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ಕರ್ನಾಟಕ: 17.5 ಓವರ್‌ಗಳಲ್ಲಿ 95ರನ್‌ಗೆ ಆಲೌಟ್‌(ಕರುಣ್‌ ನಾಯರ್‌ 25, ಲವನಿತ್ ಸಿಸೋಡಿಯಾ 18, ಹಾರ್ದಿಕ್‌ ಚೌಧರಿ 17ಕ್ಕೆ 3, ಭಾಗ್ಮೆಂದರ್ ಲಾಥರ್ 19ಕ್ಕೆ 2, ಜಗಜಿತ್ ಸಿಂಗ್ 11ಕ್ಕೆ 2, ರೋಹಿತ್ ಧಾಂಡಾ 20ಕ್ಕೆ 2).

ಚಂಡೀಗಢ: 13.5 ಓವರ್‌ಗಳಲ್ಲಿ 3 ವಿಕೆಟ್‌ಗೆ 96(ಶಿವಂ ಭಾಂಬ್ರಿ 52, ಸಂಯಮ್ ಸೈನಿ ಅಜೇಯ 27, ಶ್ರೀಶ ಆಚಾರ್ 27ಕ್ಕೆ 2), ಪಂದ್ಯಶ್ರೇಷ್ಠ: ಹಾರ್ದಿಕ್‌ ಚೌಧರಿ.