ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Smriti Mandhana Wedding: ನ.23ಕ್ಕೆ ಸ್ಮೃತಿ ಮಂಧಾನ ಮದುವೆ; ವೈರಲ್‌ ಆದ ಆಮಂತ್ರಣ ಪತ್ರ

smriti mandhana wedding card: ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪಲಾಶ್‌, ‘ಸ್ಮೃತಿ ಸದ್ಯದಲ್ಲೇ ಇಂದೋರ್‌ನ ಸೊಸೆ ಆಗಲಿದ್ದಾರೆ’ ಎಂದು ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಪಲಾಶ್‌ ಮುಚ್ಚಲ್ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ

ನ.23ಕ್ಕೆ ಪ್ರಿಯಕರನ ಜತೆ ಹಸೆಮಣೆ ಏರಲು ಸಜ್ಜಾದ ಸ್ಮೃತಿ ಮಂಧಾನ

ಮುಂಬಯಿ: ಟೀಮ್‌ ಇಂಡಿಯಾದ ಸ್ಟಾರ್‌ ಮಹಿಳಾ ಕ್ರಿಕೆಟರ್‌ ಸ್ಮೃತಿ ಮಂಧಾನ(smriti mandhana) ಹಾಗೂ ಚಲನಚಿತ್ರ ನಿರ್ಮಾಪಕ ಪಾಲಶ್‌ ಮುಚ್ಚಲ್‌(Palash Muchhal) ವಿವಾಹ(Smriti Mandhana Wedding) ನವೆಂಬರ್‌ 23 ರಂದು ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಜೋಡಿ ವಿವಾಹ ದಿನಾಂಕ ಅಧಿಕೃತವಾಗಿ ಪ್ರಕಟಿಸದಿದ್ದರೂ ಸಾಮಾಜಿಕ ಜಾಲತಾಣಲ್ಲಿ ಆಮಂತ್ರಣ ಪತ್ರಿಕೆಯ ಫೋಟೊಗಳು ವೈರಲ್‌ ಆಗಿದೆ.

ಸ್ಮೃತಿ- ಪಲಾಶ್‌ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ನೋಡಿ ಅವರ ಅಭಿಮಾನಿಗಳು ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪಲಾಶ್‌, ‘ಸ್ಮೃತಿ ಸದ್ಯದಲ್ಲೇ ಇಂದೋರ್‌ನ ಸೊಸೆ ಆಗಲಿದ್ದಾರೆ’ ಎಂದು ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು.

ಪುರುಷರ ಕ್ರಿಕೆಟ್‌ನ ಐಕಾನ್‌ ವಿರಾಟ್‌ ಕೊಹ್ಲಿ ಆಗಿದ್ದರೆ, ಮಹಿಳಾ ಕ್ರಿಕೆಟ್‌ ಪಾಲಿಗೆ ಅದು ಸ್ಮೃತಿ ಮಂಧನಾ. ಕ್ರಿಕೆಟ್‌ ಲೋಕದಲ್ಲಿ ಅವರು ಕ್ರಷ್‌ ಎಂದೇ ಹೆಸರುವಾಸಿ. ಮಹಾರಾಷ್ಟ್ರದ ಸಾಂಗ್ಲಿಯ ಸ್ಮೃತಿ ತಮ್ಮ ಸಹೋದರ ಕ್ರಿಕೆಟ್‌ ಆಡುವುದನ್ನು ನೋಡುತ್ತಾ ತಾವೂ ಬ್ಯಾಟ್, ಬಾಲ್‌ ಹಿಡಿದು ಮೈದಾನಕ್ಕೆ ಇಳಿದವರು.

ಇದನ್ನೂ ಓದಿ Women's Player of the Month award: ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಮಂಧಾನ ನಾಮ ನಿರ್ದೇಶನ

2013ರಲ್ಲಿ ತಮ್ಮ 16ನೇ ವರ್ಷದಲ್ಲೇ ಭಾರತ ಪರ ಆಡಲು ಶುರುವಿಟ್ಟ ಸ್ಮೃತಿ ಈಗ ವಿಶ್ವ ಕ್ರಿಕೆಟ್‌ನಲ್ಲೇ ಪ್ರಮುಖ ಬ್ಯಾಟರ್‌. ಚೊಚ್ಚಲ ವಿಶ್ವಕಪ್‌ ಗೆಲುವಿನಲ್ಲಿ ಸ್ಮೃತಿ ಕೊಡುಗೆ ಅತ್ಯಮೂಲ್ಯ. 9 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕ ಸೇರಿ 434 ರನ್‌ ಗಳಿಸಿರುವ ಸ್ಮೃತಿ ಟೂರ್ನಿಯ 2ನೇ ಗರಿಷ್ಠ ಸ್ಕೋರರ್‌.



ಪಲಾಶ್‌ ಮುಚ್ಚಲ್ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಟಿ ಸೀರಿಸ್‌, ಜೀ ಮ್ಯೂಸಿಕ್‌ಗಾಗಿ ಸುಮಾರು 40ಕ್ಕೂ ಅಧಿಕ ಮ್ಯೂಸಿಕ್ ವಿಡಿಯೋಗಳನ್ನು ಪಾಲಾಶ್ ಕಂಪೋಸ್ ಮಾಡಿದ್ದಾರೆ. 'ಡಿಶ್ಕಿಯಾವೂನ್', 'ಬೂತ್‌ನಾಥ್ ರಿಟರ್ಟ್ಸ್' ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ. ಅಭಿಷೇಕ್ ಬಚ್ಚನ್ - ದೀಪಿಕಾ ಪಡುಕೋಣೆ ನಟನೆಯ 'ಖೇಲೀಂ ಹಮ್ ಜೀ ಜಾನ್ ಸೇ' ಚಿತ್ರದ ಸಣ್ಣ ಪಾತ್ರದಲ್ಲಿ ಪಾಲಾಶ್ ಮಿಂಚಿದ್ದರು.