ಮಹಿಳಾ ವಿಶ್ವಕಪ್: ತರಬೇತಿ ಶಿಬಿರಕ್ಕಾಗಿ 20 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ
20 ಆಟಗಾರರ ತರಬೇತಿ ಶಿಬಿರದ ತಂಡದಲ್ಲಿ ಇತ್ತೀಚಿನ ವೆಸ್ಟ್ ಇಂಡೀಸ್ ಪ್ರವಾಸದ ಆಟಗಾರ್ತಿಯರೂ ಸೇರಿದ್ದಾರೆ. ನಾಯಕಿ ಲಾರಾ ವೋಲ್ವಾರ್ಡ್ ಮತ್ತು ಆಲ್‌ರೌಂಡರ್‌ಗಳಾದ ಕ್ಲೋಯ್ ಟ್ರಯಾನ್ ಮತ್ತು ಮರಿಜಾನ್ನೆ ಕಪ್ ಈ ಶಿಬಿರದ ಭಾಗವಾಗಿಲ್ಲ. ಅವರು ಪ್ರಸ್ತುತ ದಿ ಹಂಡ್ರೆಡ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಡರ್ಬನ್: ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಮಹಿಳಾ ವಿಶ್ವಕಪ್ 2025ಕ್ಕೆ(Women’s ODI World Cup 2025) ಸಿದ್ಧತೆ ನಡೆಸಲು ರಾಷ್ಟ್ರೀಯ ತರಬೇತಿ ಶಿಬಿರಕ್ಕಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) 20 ಸದಸ್ಯರ ತಂಡವನ್ನು(South Africa) ಹೆಸರಿಸಿದೆ.ಆಗಸ್ಟ್ 25 ರಿಂದ ಸೆಪ್ಟೆಂಬರ್ ವರೆಗೆ ಡರ್ಬನ್‌ನಲ್ಲಿ ನಡೆಯಲಿರುವ ಈ ಶಿಬಿರವು ಪಾಕಿಸ್ತಾನ ಪ್ರವಾಸಕ್ಕೆ ಅಭ್ಯಾಸವಾಗಿಯೂ ಕಾರ್ಯನಿರ್ವಹಿಸಲಿದೆ.
ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಸೆಪ್ಟೆಂಬರ್ 16 ರಿಂದ 22 ರವರೆಗೆ ಲಾಹೋರ್‌ನಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ವಿಶ್ವಕಪ್ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ.
20 ಆಟಗಾರರ ತರಬೇತಿ ಶಿಬಿರದ ತಂಡದಲ್ಲಿ ಇತ್ತೀಚಿನ ವೆಸ್ಟ್ ಇಂಡೀಸ್ ಪ್ರವಾಸದ ಆಟಗಾರ್ತಿಯರೂ ಸೇರಿದ್ದಾರೆ. ನಾಯಕಿ ಲಾರಾ ವೋಲ್ವಾರ್ಡ್ ಮತ್ತು ಆಲ್‌ರೌಂಡರ್‌ಗಳಾದ ಕ್ಲೋಯ್ ಟ್ರಯಾನ್ ಮತ್ತು ಮರಿಜಾನ್ನೆ ಕಪ್ ಈ ಶಿಬಿರದ ಭಾಗವಾಗಿಲ್ಲ. ಅವರು ಪ್ರಸ್ತುತ ದಿ ಹಂಡ್ರೆಡ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಶಿಬಿರದಲ್ಲಿ ಮಾಜಿ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಕೂಡ ಸೇರಿದ್ದಾರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯನ್ನು ಹಿಂಪಡೆದು ಮತ್ತೆ ತಂಡದ ಒರ ಆಡಲು ನಿರ್ಧರಿಸಿದ್ದಾರೆ.
ತಂಡ
ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಲಾರಾ ಗುಡಾಲ್, ಅಯಂಡಾ ಹ್ಲುಬಿ, ಸಿನಾಲೋ ಜಫ್ತಾ, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಜ್-ಮಾರಿ ಮಾರ್ಕ್ಸ್, ಕರಾಬೊ ಮೆಸೊ, ನಾನ್‌ಕುಲುಲೆಕೊ ಮ್ಲಾಬಾ, ಲುಯೆಝು ನಾಯ್ಡು, ಲುಯೆಝ್ ನ್ಯುಕ್ ನಂದುಮಿಸೊ ಶಾಂಗಸೆ, ಮಿಯಾನೆ ಸ್ಮಿತ್, ಫಾಯೆ ಟುನ್ನಿಕ್ಲಿಫ್, ಡೇನ್ ವ್ಯಾನ್ ನೀಕೆರ್ಕ್.