ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neha Sangwan suspended: ಕುಸ್ತಿಪಟು ನೇಹಾಗೆ 2 ವರ್ಷ ನಿಷೇಧ

Neha Sangwan: ಭಾರತದ ಮಹಿಳಾ ತಂಡ ಏಳು ಪದಕಗಳನ್ನು ಗೆದ್ದು ಜಪಾನ್ ನಂತರ ರನ್ನರ್ ಅಪ್ ಸ್ಥಾನ ಗಳಿಸಿತು. ನೇಹಾ ನಿಸ್ಸಂದೇಹವಾಗಿಯೂ ಪ್ರಬಲ ಪದಕ ಸ್ಪರ್ಧಿಯಾಗಿದ್ದರು ಮತ್ತು ಚಿನ್ನ ಗೆಲ್ಲುವ ಮೂಲಕ ಭಾರತ ತಂಡ ಚಾಂಪಿಯನ್‌ಶಿಪ್ ಗೆಲ್ಲಲು ಸಹಾಯ ಮಾಡಬಹುದಿತ್ತು.

ಅಧಿಕ ತೂಕ; ಕುಸ್ತಿಪಟು ನೇಹಾಗೆ 2 ವರ್ಷ ನಿಷೇಧ

Abhilash BC Abhilash BC Aug 26, 2025 12:35 PM

ನವದೆಹಲಿ: ಅಧಿಕ ತೂಕದ ಕಾರಣಕ್ಕಾಗಿ ಇತ್ತೀಚೆಗೆ ನಡೆದ U-20 ವಿಶ್ವ ಚಾಂಪಿಯನ್‌ಶಿಪ್‌ನಿಂದ ಅನರ್ಹಗೊಂಡಿದ್ದ ಕುಸ್ತಿಪಟು ನೇಹಾ ಸಾಂಗ್ವಾನ್(Neha Sangwan) ಅವರನ್ನು ಹಿರಿಯ ವಿಶ್ವ ಚಾಂಪಿಯನ್‌ಶಿಪ್ ತಂಡದಿಂದ ಕೈಬಿಡಲಾಯಿತು ಮತ್ತು ಅವರ "ಸ್ಥಿರ ತೂಕ ನಿರ್ವಹಣಾ ಸಮಸ್ಯೆಗಳಿಗಾಗಿ" ರಾಷ್ಟ್ರೀಯ ಒಕ್ಕೂಟವು ಎರಡು ವರ್ಷಗಳ ಕಾಲ ಅಮಾನತುಗೊಳಿಸಿದೆ(Neha Sangwan suspended). ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯು ಕ್ರೊಯೇಶಿಯದ ಝಾಗ್ರೆಬ್‌ನಲ್ಲಿ ಸೆಪ್ಟಂಬರ್ 13ರಿಂದ 21ರವರೆಗೆ ನಡೆಯಲಿದೆ.

ಹರಿಯಾಣ ಮೂಲದ ನೇಹಾ, ಕಳೆದ ವಾರ ಬಲ್ಗೇರಿಯಾದ ಸಮೋಕೋವ್‌ನಲ್ಲಿ ನಡೆದ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಅನುಮತಿಸಲಾದ ಮಿತಿಗಿಂತ ಸುಮಾರು 600 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಹೀಗಾಗಿ ಆಯೋಜಕರು ಆಕೆಯನ್ನು ಅನರ್ಹಗೊಳಿಸಿದರು. ಇದರಿಂದ ಪಂದ್ಯಾವಳಿಯ ಆ ತೂಕ ವಿಭಾಗದಲ್ಲಿ ಭಾರತೀಯ ಪ್ರಾತಿನಿಧ್ಯ ಇಲ್ಲದೆ ಹೋಯಿತು.

ಭಾರತದ ಮಹಿಳಾ ತಂಡ ಏಳು ಪದಕಗಳನ್ನು ಗೆದ್ದು ಜಪಾನ್ ನಂತರ ರನ್ನರ್ ಅಪ್ ಸ್ಥಾನ ಗಳಿಸಿತು. ನೇಹಾ ನಿಸ್ಸಂದೇಹವಾಗಿಯೂ ಪ್ರಬಲ ಪದಕ ಸ್ಪರ್ಧಿಯಾಗಿದ್ದರು ಮತ್ತು ಚಿನ್ನ ಗೆಲ್ಲುವ ಮೂಲಕ ಭಾರತ ತಂಡ ಚಾಂಪಿಯನ್‌ಶಿಪ್ ಗೆಲ್ಲಲು ಸಹಾಯ ಮಾಡಬಹುದಿತ್ತು. ಭಾರತವು 140 ಅಂಕಗಳನ್ನು ಗಳಿಸಿದರೆ, ಜಪಾನ್ 165 ಅಂಕಗಳನ್ನು ಪಡೆಯಿತು.