ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶತಕ ಕಂಡು ಭಾವುಕರಾದ ಅಭಿಷೇಕ್‌ ಶರ್ಮ ತಾಯಿಯನ್ನು ಅಪ್ಪಿಕೊಂಡ ಕಾವ್ಯಾ ಮಾರನ್

Kavya Maran: ಪ್ರತಿ ಹೈದರಾಬಾದ್‌ ಪಂದ್ಯದ ವೇಳೆ ಕಾವ್ಯಾ ಮಾರನ್ ಕಾಣಿಸಿಕೊಳ್ಳುತ್ತಾರೆ. ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಕುರಿತ ಮೀಮ್ಸ್‌ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತದೆ.

ಅಭಿಷೇಕ್‌ ಶರ್ಮ ತಂದೆ-ತಾಯಿಗೆ ಧನ್ಯವಾದ ತಿಳಿಸಿದ ಕಾವ್ಯಾ ಮಾರನ್

Profile Abhilash BC Apr 13, 2025 1:41 PM

ಹೈದರಾಬಾದ್‌: ಸತತ ಸೋಲಿನಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಶನಿವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಬೃಹತ್‌ ಮೊತ್ತದ ಗುರಿಯನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿ 8 ವಿಕೆಟ್‌ ಅಂತರದ ಗೆಲುವು ಸಾಧಿಸಿ ಮತ್ತೆ ಹೆಲುವಿನ ಹಳಿಗೆ ಮರಳಿದೆ. ಗೆಲುವಿಗೆ ಪ್ರಮುಖ ಕಾರಣರಾದ ಅಭಿಷೇಕ್‌ ಶರ್ಮಾ(Abhishek Sharma) ಶತಕ ಬಾರಿಸುತ್ತಿದ್ದಂತೆ ತಂಡದ ಸಹ ಮಾಲಕಿ ಕಾವ್ಯಾ ಮಾರನ್(Kavya Maran) ಕೂಡ ಸಂಭ್ರಮಾಚಾರಣೆ ಮಾಡಿದ್ದಾರೆ. ತಮ್ಮ ಪಕ್ಕದಲ್ಲೇ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅಭಿಷೇಕ್‌ ಶರ್ಮ ಅವರ ತಾಯಿ(abhishek sharma mother)ಯನ್ನು ಬಿಗಿದಪ್ಪಿಕೊಂಡು. ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಆಟಗಾರರು ಮಾತ್ರವದಲ್ಲದೆ ಅವರ ಕುಟುಂಬ ಸದಸ್ಯರನ್ನು ಉತ್ತಮ ರೀತಿಯಲ್ಲಿ ಕಾಣುವ ನಿಮ್ಮ ಈ ಗುಣ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಪ್ರತಿ ಹೈದರಾಬಾದ್‌ ಪಂದ್ಯದ ವೇಳೆ ಕಾವ್ಯಾ ಮಾರನ್ ಕಾಣಿಸಿಕೊಳ್ಳುತ್ತಾರೆ. ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಕುರಿತ ಮೀಮ್ಸ್‌ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತದೆ.



ಕಾವ್ಯಾ ಮಾರನ್ ಅವರು ಸನ್ ಗ್ರೂಪ್​ನ ಮುಖ್ಯಸ್ಥ ಕಲಾನಿದಿ ಮಾರನ್ ಅವರ ಏಕೈಕ ಪುತ್ರಿ. ಓದಿದ್ದು ಚೆನ್ನೈನ ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ. ಬ್ರಿಟನ್​ನ ವಾರ್ವಿಕ್ ಬಿಸಿನೆಸ್ ಸ್ಕೂಲ್​ನಲ್ಲಿ ಎಂಬಿಎ ಮಾಡಿದ್ದಾರೆ. ಅಪ್ಪನ ಬಿಸಿನೆಸ್ ಸಾಮ್ರಾಜ್ಯಕ್ಕೆ ಇವರೇ ಮುಂದಿನ ವಾರಸುದಾರೆ. 2018ರಲ್ಲಿ ಇವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಸಿಇಒ ಆಗಿ ನೇಮಕ ಮಾಡಲಾಯಿತು. ಅಲ್ಲಿಂದೀಚೆ ಈ 32 ವರ್ಷದ ಹುಡುಗಿ ದೇಶದ ಕ್ರಿಕೆಟ್ ಪ್ರೇಮಿಗಳ ಮನಸೂರೆ ಮಾಡಿದ್ದಾಳೆ. ಕಾವ್ಯಾ ಮಾರನ್ ಅವರ ತಾಯಿ ಕಾವೇರಿ ಕೊಡಗಿನವರು.



ಅಭಿಷೇಕ್‌ ಶರ್ಮಾ ಕೂಡ ತಮ್ಮ ಶತಕವನ್ನು ವಿಶೇಷವಾಗಿ ಸಂಭ್ರಮಿಸಿದ್ದರು. ಚೀಟಿಯೊಂದನ್ನು ಪ್ರದಶರಿಸುವ ಮೂಲಕ 'ದಿಸ್‌ ಒನ್‌ ಇಸ್‌ ಫಾರ್‌ ಆರೆಂಜ್‌ ಆರ್ಮಿ' (ಇದು ಸನ್‌ರೈಸರ್ಸ್‌ ಹೈದರಾಬಾದ್‌ ಅಭಿಮಾನಿಗಳಿಗಾಗಿ ) ಎಂದು ಬರೆದಿದ್ದರು. ಈ ಮೂಲಕ ತಮ್ಮ ಶತಕವನ್ನು ತಂಡದ ಅಭಿಮಾನಿಗಳಿಗೆ ಅರ್ಪಿಸಿದ್ದರು.

ಇದನ್ನೂ ಓದಿ IPL 2025: ಸೋಲಿಗೆ ಕಾರಣ ಕೇಳಿದರೆ ಜೋರಾಗಿ ನಕ್ಕ ನಾಯಕ ಅಯ್ಯರ್‌

ಈ ಋತುವಿನಲ್ಲಿ ಮಂಕಾಗಿದ್ದ ಅಭಿಷೇಕ್ ಶರ್ಮಾ ಪಂಜಾಬ್‌ ವಿರುದ್ಧ ಸಿಕ್ಸರ್‌, ಬೌಂಡರಿಗಳ ಮಳೆಗರೆದು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು. 40 ಎಸೆತಗಳಿಂದ ಶತಕ ಪೂರೈಸಿದರು. ಓಟ್ಟು 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 141 ರನ್‌ ಬಾರಿಸಿದರು.