Mysuru News: ಕಾಲುವೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು
Three children Drowned: ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಬಳಿ ಘಟನೆ ನಡೆದಿದೆ. ಚಾಮರಾಜ ಎಡದಂಡೆ ಕಾಲುವೆಯಲ್ಲಿ ಬಾಲಕರು ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಶವಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
-
Prabhakara R
Oct 20, 2025 9:56 PM
ಮೈಸೂರು: ಕಾಲುವೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ (Mysuru News) ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ. ಚಾಮರಾಜ ಎಡದಂಡೆ ಕಾಲುವೆಯಲ್ಲಿ ಬಾಲಕರು ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಮೃತ ಬಾಲಕರನ್ನು ಆಯಾನ್(16), ಆಜಾನ್(13) ಹಾಗೂ ಲುಕ್ಮಾನ್(14) ಎಂದು ಗುರುತಿಸಲಾಗಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಶವಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಜಿಟಿ ಮಾಲ್‌ನ ಮೂರನೇ ಮಹಡಿಯಿಂದ ಕೆಳಬಿದ್ದು ಯುವಕ ಸಾವು
ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ (Magadi Road) ಜಿಟಿ ಮಾಲ್‌ನ (GT Mall) ಮೂರನೇ ಮಹಡಿಯಿಂದ ಕೆಳಗಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದೀಪಾವಳಿ (Deepavali) ಹಬ್ಬದ ದಿನವೇ ಜಿಟಿ ಮಾಲ್‌ನಲ್ಲಿ ಈ ದುರಂತ (Tragedy) ಸಂಭವಿಸಿದೆ. ರಾಜಧಾನಿಯ (Bengaluru) ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಮಾಲ್‌ನ ಮೂರನೇ ಫ್ಲೋರ್ನಿಂದ ವ್ಯಕ್ತಿ ಕೆಳಗೆ (Death) ಬಿದ್ದಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಮಾಗಡಿ ರೋಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಳಿಕ ಜಿಟಿ ಮಾಲ್ಗೆ ಇಂದು ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ. ಪೊಲೀಸರು ಮಾಲ್‌ನ ಗೇಟ್ ಕ್ಲೋಸ್ ಮಾಡಿಸಿದ್ದಾರೆ. ಮಾಲ್ ಮಧ್ಯದಲ್ಲಿ ಮೃತದೇಹ ಬಿದ್ದಿದ್ದು, ಸ್ಥಳಕ್ಕೆ ಸೋಕೋ ಟೀಮ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಲ್ಗೆ ಬಂದಿದ್ದ ವ್ಯಕ್ತಿ ಆಯ ತಪ್ಪಿ ಬಿದ್ದರೇ ಅಥವಾ ತಾನೇ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾದರೇ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಇದನ್ನು ಓದಿ: Road accident: ಮೂರು ಬಸ್ಸುಗಳ ನಡುವೆ ಭೀಕರ ಅಪಘಾತ, ಮೂವರು ಸಾವು, 30 ಮಂದಿಗೆ ಗಾಯ
ಸೀನಿಯರ್ ಕಿರುಕುಳ, ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮತ್ತೊಂದು ಘೋರ ದುರಂತ ಘಟನೆ ನಡೆದಿದೆ. ಸೀನಿಯರ್ ವಿದ್ಯಾರ್ಥಿ ನೀಡುವ ಕಿರುಕುಳ (Harassment) ತಡೆಯಲಾರದೆ ಬೆಂಗಳೂರಿನ ಬಾಗಲೂರಿನ ಪಿಜಿಯಲ್ಲಿ ಬಿಬಿಎ ವಿದ್ಯಾರ್ಥಿನಿಯೊಬ್ಬಳು ತಾನು ವಾಸಿಸುತ್ತಿದ್ದ ಪಿಜಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಸನಾ ಪರ್ವೀನ್ ಎಂದು ಗುರುತಿಸಲಾಗಿದೆ.
ಸನಾ ಸಾವಿಗೆ ಆಕೆ ಓದುತ್ತಿದ್ದ ಕಾಲೇಜಿನ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಸನಾ ಕುಟುಂಬದವರಿಂದ ರಿಫಾಸ್ ಎನ್ನುವ ವಿದ್ಯಾರ್ಥಿಯ ವಿರುದ್ಧ ಆರೋಪ ಕೇಳಿ ಬಂದಿದೆ. ಸನಾ ಪರ್ವೀನ್ ಓದುತ್ತಿದ್ದ ಕಾಲೇಜಿನಲ್ಲಿ ರಿಫಾಸ್ ಸಹ ಓದುತ್ತಿದ್ದ. ಈತ ಪಾಸ್ ಔಟ್ ಆಗಿದ್ದರೂ ಸನಾಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.
ರಿಫಾಸ್ ಮೂಲತಃ ಕೇರಳ ವಿದ್ಯಾರ್ಥಿಯಾಗಿದ್ದು ಕಳೆದ 10 ತಿಂಗಳ ಹಿಂದೆ ಪರ್ವೀನ್‌ಗೆ ಸಾಕಷ್ಟು ಕಿರುಕುಳ ನೀಡಿದ್ದಾನೆ. ಪಾಸ್ ಔಟ್ ಆದ ನಂತರ ಕೂಡ ಈಕೆ ಓದುತ್ತಿದ್ದ ಕಾಲೇಜಿಗೆ ಬಂದು ಹೋಗಿ ಮಾಡುತ್ತಿದ್ದ. ಪಿಜಿ ಬಳಿಗೆ ಬಂದು ಸಾಕಷ್ಟು ಹಿಂಸೆ ಕೊಡುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಈ ಸಂಬಂಧ ಕಾಲೇಜಿನಲ್ಲಿ ಕೆಲವು ಘಟನೆಗಳು ನಡೆದಿವೆ ಎಂದು ಸನಾ ಸ್ನೇಹಿತೆಯರು ತಿಳಿಸಿದ್ದಾರೆ. ಈ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.