ಕೊಲಂಬೊ, ಜ.1: ಮುಂಬರುವ ಐಸಿಸಿ ಅಂಡರ್-19 ವಿಶ್ವಕಪ್(ICC U19 World Cup 2026) ಪಂದ್ಯಾವಳಿಗೆ ಶ್ರೀಲಂಕಾ(Sri Lanka squadU19 World Cup) ತನ್ನ ತಂಡವನ್ನು ಪ್ರಕಟಿಸಿದೆ. ಜನವರಿ 15 ರಿಂದ ಪ್ರಾರಂಭವಾಗಲಿರುವ ಈ ಟೂರ್ನಿಗಾಗಿ 15 ಸದಸ್ಯರ ತಂಡವನ್ನು ಹೆಸರಿಸಲಾಗಿದೆ. ಜಿಂಬಾಬ್ವೆ ಮತ್ತು ನಮೀಬಿಯಾ ಪಂದ್ಯಾವಳಿಯನ್ನು ಆಯೋಜಿಸಲಿವೆ.
ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಶ್ರೀಲಂಕಾ ತಂಡವು ಜಪಾನ್, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ಜತೆಗೆ ಗ್ರೂಪ್ 'ಸಿ' ನಲ್ಲಿ ಸ್ಥಾನ ಪಡೆದಿದೆ. ಜನವರಿ 17 ರಂದು ಜಪಾನ್ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಜನವರಿ 19 ರಂದು ಐರ್ಲೆಂಡ್ ವಿರುದ್ಧ ಮುಖಾಮುಖಿಯಾಗಲಿದ್ದಾರೆ. ಇದರ ನಂತರ, ಜ. 23 ರಂದು ತಮ್ಮ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.
ಗಮನಾರ್ಹವಾಗಿ, ಆಸ್ಟ್ರೇಲಿಯಾ ಪಂದ್ಯಾವಳಿಯ ಹಾಲಿ ಚಾಂಪಿಯನ್ ಆಗಿದ್ದು, 2024 ರಲ್ಲಿ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು. ಮೂರೂ ಪಂದ್ಯಗಳು ವಿಂಡ್‌ಹೋಕ್‌ನ ನಮೀಬಿಯಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡವನ್ನು ವಿಮತ್ ದಿನ್ಸಾರ ಮುನ್ನಡೆಸಲಿದ್ದಾರೆ. ಕವಿಜಾ ಗಮಗೆ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.
ತಂಡದಲ್ಲಿ ಹಲವು ಉದಯೋನ್ಮುಖ ಆಟಗಾರರು ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆಯಲ್ಲಿ ಸಮತೋಲಿತ ತಂಡವನ್ನು ರೂಪಿಸಲಾಗಿದೆ. ಶ್ರೀಲಂಕಾ U19 ಕ್ರಿಕೆಟ್ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ ಧೋನಿ, ಮೆಸ್ಸಿ ಸೇರಿ ಈ ವರ್ಷ ನಿವೃತ್ತಿ ಹೇಳಲಿರುವ ಕ್ರೀಡಾ ದಿಗ್ಗಜರು
ಜನವರಿ 1 ರಂದು ನಮೀಬಿಯಾಕ್ಕೆ ಪ್ರಯಾಣ ಬೆಳೆಸಿರುವ ಲಂಕಾ ತಂಡ ಪಂದ್ಯಾವಳಿಗೆ ಮುಂಚಿತವಾಗಿಯೇ ತಯಾರಿ ಆರಂಭಿಸಲಿದ್ದಾರೆ. ಕಳೆದ ತಿಂಗಳು, ಶ್ರೀಲಂಕಾ ತಂಡವು ಯುಎಇಯಲ್ಲಿ ನಡೆದ U19 ಏಷ್ಯಾ ಕಪ್ 2025 ರಲ್ಲಿ ಉತ್ತಮ ಪ್ರದರ್ಶನ ನೀಡಿ, ಸೆಮಿಫೈನಲ್ ತಲುಪಿತ್ತು ಅಲ್ಲಿ ಭಾರತ ವಿರುದ್ಧ ಸೋತಿತ್ತು.
ಶ್ರೀಲಂಕಾ ತಂಡ
ವಿಮತ್ ದಿನಸಾರ (ನಾಯಕ), ಕವಿಜಾ ಗಮಗೆ (ಉಪನಾಯಕ), ದಿಮಂತ ಮಹಾವಿತಾನ, ವಿರಣ್ ಚಾಮುದಿತ, ದುಲ್ನಿತ್ ಸಿಗೇರ, ಚಾಮಿಕಾ ಹೀಂತಿಗಾಲ, ಆಡಮ್ ಹಿಲ್ಮಿ, ಚಾಮರಿಂದ ನೇತ್ಸರ, ಸೇಥ್ಮಿಕಾ ಸೆನೆವಿರತ್ನೆ, ಕುಗತಸ್ ಮಥುಲನ್, ರಸಿತ್ ನಿಮ್ಸರ, ವಿಘ್ನೇಶ್ವರನ್ ಆಕಾಶ್, ಜೀವಂತ ಶ್ರೀರಾಮ್, ಸೆನುಜಾ ವೆಕುನಗೋಡ, ಮಲಿಂತ ಸಿಲ್ವ.