ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದಂತೆ ಶ್ರೀಲಂಕಾ ತಂಡಕ್ಕೂ ಗಾಯದ ಹೊಡೆತ; ಸ್ಟಾರ್‌ ಆಟಗಾರರು ಅಲಭ್ಯ

Sri Lanka vs india Test: ಮೊದಲ ಪಂದ್ಯವನ್ನಾಡಲು ಭಾರತೀಯ ಆಟಗಾರರು ಈಗಾಗಲೇ ಗಾಲೆಗೆ ತಲುಪಿದ್ದಾರೆ. ಬುಧವಾರ ಗಾಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದು ಗುರುವಾರದಿಂದ ಟೆಸ್ಟ್​ ಸರಣಿಗೆ ಮತ್ತೆ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಕೂಡ ಗಾಲೆಯಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

kusal mendis and pathum nissanka

ಕೊಲಂಬೊ, ಆ.11: ಭಾರತ ವಿರುದ್ಧದ ಟೆಸ್ಟ್​ ಸರಣಿಗೆ (Test Series) ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೂ ಗಾಯದ ಭೀತಿ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್​ಗಳಾದ ಕುಸಲ್​ ಮೆಂಡಿಸ್​ ಮತ್ತು ಪಥುಮ್​ ನಿಸ್ಸಂಕ ಗಾಯದಿಂದಾಗಿ ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಆಟಗಾರರ ಲಭ್ಯತೆಯ ಗೊಂದಲದಿಂದಲೇ ಸರಣಿಗೆ ಶ್ರೀಲಂಕಾ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಾಗಿದೆ.

ಕುಸಲ್​ ಮೆಂಡಿಸ್​ ಮತ್ತು ಪಥುಮ್​ ನಿಸ್ಸಂಕ ಇಬ್ಬರೂ ಇನ್ನೂ ಫಿಟ್​ ಆಗಿಲ್ಲ ಎನ್ನಲಾಗಿದೆ. ಅವರಿಬ್ಬರ ಗೈರಿನಲ್ಲಿ ಲಂಕಾ ಆಯ್ಕೆಗಾರರು, ಅನುಭವಿ ವಿಕೆಟ್​ ಕೀಪರ್​-ಬ್ಯಾಟರ್​ ನಿರೋಶನ್​ ಡಿಕ್​ವೆಲ್ಲಾಗೆ ಅವಕಾಶ ಕಲ್ಪಿಸಲು ಬಯಸಿದ್ದಾರೆ. ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಕೂಡ ಆಗಿದ್ದ ಕುಸಲ್​ ಮೆಂಡಿಸ್​ ಗೈರಿನಲ್ಲಿ ಆಯ್ಕೆಗಾರರು, 22 ವರ್ಷದ ಅಂಜಲ ಬಂಡಾರಗಿಂತ ಡಿಕ್​ವೆಲ್ಲಾಗೆ ಆದ್ಯತೆ ನೀಡಲಿದ್ದಾರೆ ಎನ್ನಲಾಗಿದೆ.

ನಿಸ್ಸಂಕ ಗೈರಿನಲ್ಲಿ ನಿಶಾನ್​ ಮಧುಷ್ಕ ಅಗ್ರ ಕ್ರಮಾಂಕದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಮಧುಷ್ಕ ಭಾರತ ತಂಡದ ಅಭ್ಯಾಸ ಪಂದ್ಯದಲ್ಲಿ ಲಂಕಾ ಇಲೆವೆನ್​ ಪರ ಅವಳಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಭಾರತವೂ ಕೂಡ ಗಾಯದ ಸಮಸ್ಯೆಯ ಕಾರಣ ಅನುಭವಿ ಆಟಗಾರರ ಸೇವೆ ಕಳೆದುಕೊಂಡಿದೆ. ಜಸ್‌ಪ್ರೀತ್‌ ಬುಮ್ರಾ, ಸಾಯಿ ಸುದರ್ಶನ್‌ ತಂಡಕ್ಕೆ ಆಯ್ಕೆಯಾದರೂ ಆ ಬಳಿಕ ಫಿಟ್‌ ಆಗದ ಕಾರಣ ಹೊರಬಿದ್ದರು.

ಗಾಲೆ ತಲುಪಿದ ಭಾರತ ತಂಡ

ಮೊದಲ ಪಂದ್ಯವನ್ನಾಡಲು ಭಾರತೀಯ ಆಟಗಾರರು ಈಗಾಗಲೇ ಗಾಲೆಗೆ ತಲುಪಿದ್ದಾರೆ. ಬುಧವಾರ ಗಾಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದು ಗುರುವಾರದಿಂದ ಟೆಸ್ಟ್​ ಸರಣಿಗೆ ಮತ್ತೆ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಕೂಡ ಗಾಲೆಯಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

ಮತ್ತೆ ಗುಜರಾತ್ ಟೈಟಾನ್ಸ್ ಸೇರಲು ಮುಂದಾದ ಹಾರ್ದಿಕ್ ಪಾಂಡ್ಯ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಬಾಕಿ ಇರುವುದರಿಂದ, ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಈ ಸರಣಿ ಗೆಲುವು ಅನಿವಾರ್ಯವಾಗಿದೆ. ಸದ್ಯ ಭಾರತವು 48.15% ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 41.67% ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಆರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ 58.33% ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ.

ಶ್ರೀಲಂಕಾ ವಿರುದ್ಧ ಭಾರತ 2-0 ಅಂತರದಲ್ಲಿ ಸರಣಿ ಗೆದ್ದರೆ, ಅಂಕಗಳ ಶೇಕಡಾವಾರು 57.58 ಕ್ಕೆ ಏರುತ್ತದೆ. ಸರಣಿಯಿಂದ ಗಳಿಸಿದ 24 ಅಂಕಗಳು 11 ಟೆಸ್ಟ್‌ಗಳ ನಂತರ ಅವರ ಸಂಖ್ಯೆಯನ್ನು 76 ಕ್ಕೆ ಏರಿಸುತ್ತದೆ. ಸೋಲು ಕಂಡ ಶ್ರೀಲಂಕಾದ ಗೆಲುವಿನ ಶೇಕಡಾವಾರು ಪ್ರಮಾಣವು 27.78 ಕ್ಕೆ ಇಳಿಯುತ್ತದೆ.