ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Final: ಆರ್‌ಸಿಬಿ-ಪಂಜಾಬ್‌ ಫೈನಲ್‌ ಪಂದ್ಯಕ್ಕೂ ಮುನ್ನ ನಿರ್ದೇಶಕ ರಾಜಮೌಳಿ ಭಾವನಾತ್ಮಕ ಪೋಸ್ಟ್‌

RCB vs PBKS Final: ಉಭಯ ತಂಡಗಳು ಟೂರ್ನಿಯಲ್ಲಿ ತೋರಿದ ಪ್ರದರ್ಶನ ಗಮನಿಸಿದರೆ ಎರಡೂ ತಂಡಗಳು ಬಲಿಷ್ಠ. ಆರ್‌ಸಿಬಿ ತಂಡವಾಗಿ ಆಡಿದರೆ, ಪಂಜಾಬ್‌ನ ಸಾಮರ್ಥ್ಯ ಬಲಿಷ್ಠ ಬ್ಯಾಟಿಂಗ್‌. ಹೀಗಾಗಿ ಫೈನಲ್‌ನಲ್ಲೂ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು.

ಮುಂಬಯಿ: ಇದುವರೆಗೂ ಐಪಿಎಲ್‌(IPL Final 2025) ಟ್ರೋಫಿ ಗೆಲ್ಲದ ತಂಡಗಳಾದ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌(RCB vs PBKS) ಇಂದು(ಜೂ.3) ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಸಹಜವಾಗಿಯೇ ಒಂದು ತಂಡದ ಕಪ್‌ ಬರಗಾಲ ನೀಗಲಿದೆ. ಯಾರೇ ಗೆದ್ದರೂ ಮೊದಲ ಸಲ ಚಾಂಪಿಯನ್‌ ಆಗಲಿದ್ದಾರೆ. ಫೈನಲ್‌ ಪಂದ್ಯಕ್ಕೂ ಮುನ್ನ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ(SS Rajamouli) ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಫಲಿತಾಂಶ ಏನೇ ಆದರೂ ನನಗೆ ನೋವನ್ನುಂಟು ಮಾಡಲಿದೆ ಎಂದಿದ್ದಾರೆ.

ಅಯ್ಯರ್‌ ಮತ್ತು ಕೊಹ್ಲಿಯ ಫೋಟೊವನ್ನು ಹಂಚಿಕೊಂಡು ಟ್ವೀಟ್‌ ಮಾಡಿರುವ ರಾಜಮೌಳಿ, ‘ಶ್ರೇಯಸ್‌ ಅಯ್ಯರ್‌... ಈ ವ್ಯಕ್ತಿ ದೆಹಲಿ ತಂಡಕ್ಕೆ ಕ್ಯಾಪ್ಟನ್‌ ಆದಾಗ ಆ ತಂಡವನ್ನು ಫೈನಲ್‌ಗೆ ಕರೆದೊಯ್ಯತ್ತಾನೆ... ಆದರೆ ತಂಡದಿಂದ ಕೈಬಿಡಲಾಗುತ್ತದೆ. ಇವರ ನಾಯಕತ್ವದಲ್ಲಿ ಕೋಲ್ಕತ್ತ ಕಪ್‌ ಗೆದ್ದಿದೆ. ಆದರೂ ತಂಡದಿಂದ ಕೈಬಿಡಲಾಗುತ್ತದೆ... 11 ವರ್ಷಗಳ ನಂತರ ಪಂಜಾಬ್ ಅನ್ನು ಫೈನಲ್‌ಗೆ ತಲುಪಿಸಿದ್ದಾರೆ. ಟ್ರೋಪಿ ಗೆಲ್ಲುವುದಕ್ಕೆ ಇವರು ಅರ್ಹರು. ವಿರಾಟ್‌ ಕೊಹ್ಲಿ... ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ... ಸಾವಿರಾರು ರನ್‌ ಸಿಡಿಸಿದ್ದಾರೆ... ಕೊಹ್ಲಿ ಕೂಡ ಕಪ್‌ ಗೆಲ್ಲಲ್ಲು ಅರ್ಹರು’ ಅಂತಿಮವಾಗಿ ಫಲಿತಾಂಶ ಏನೇ ಆದರೂ ನೋವನ್ನುಂಟು ಮಾಡಲಿದೆ’ ಎಂದು ಹೇಳಿದ್ದಾರೆ.



ಉಭಯ ತಂಡಗಳು ಟೂರ್ನಿಯಲ್ಲಿ ತೋರಿದ ಪ್ರದರ್ಶನ ಗಮನಿಸಿದರೆ ಎರಡೂ ತಂಡಗಳು ಬಲಿಷ್ಠ. ಆರ್‌ಸಿಬಿ ತಂಡವಾಗಿ ಆಡಿದರೆ, ಪಂಜಾಬ್‌ನ ಸಾಮರ್ಥ್ಯ ಬಲಿಷ್ಠ ಬ್ಯಾಟಿಂಗ್‌. ಹೀಗಾಗಿ ಫೈನಲ್‌ನಲ್ಲೂ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು. ಇನ್ನೊಂದೆಡೆ ಇಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಇಲ್ಲಿ ಈ ಬಾರಿ ನಡೆದ 8 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 200+ ರನ್‌ ದಾಖಲಾಗಿವೆ. ಹೀಗಾಗಿ ಫೈನಲ್‌ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು.

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ, ಮಯಾಂಕ್‌ ಅಗರ್ವಾಲ್‌, ರಜತ್‌ ಪಾಟೀದಾರ್‌ (ನಾಯಕ), ಲಿವಿಂಗ್‌ಸ್ಟೋನ್‌/ಡೇವಿಡ್‌, ಜಿತೇಶ್‌ ಶರ್ಮ, ರೋಮಾರಿಯೊ ಶೆಫರ್ಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ಜೋಶ್‌ ಹೇಜಲ್‌ವುಡ್‌.

ಇದನ್ನೂ ಓದಿ RCB vs PBKS Final: ಪಂಜಾಬ್‌ ಗೆಲುವಿನ ಸುಳಿವು ನೀಡಿತೇ ಫೋಟೋಶೂಟ್‌?

ಇಂಪ್ಯಾಕ್ಟ್‌ ಆಟಗಾರ: ಸುಯಶ್‌ ಶರ್ಮ.

ಪಂಜಾಬ್‌ ಕಿಂಗ್ಸ್‌: ಪ್ರಿಯಾನ್ಸ್‌ ಆರ್ಯ, ಜೋಶ್‌ ಇಂಗ್ಲಿಸ್‌, ಶ್ರೇಯಸ್‌ ಅಯ್ಯರ್‌ (ನಾಯಕ), ನೇಹಲ್‌ ವಧೇರಾ, ಮಾರ್ಕಸ್‌ ಸ್ಟೋಯ್ನಿಸ್‌, ಶಶಾಂಕ್‌ ಸಿಂಗ್‌, ಅಜ್ಮತುಲ್ಲಾ ಓಮರ್ಜಾಯಿ, ಜೇಮಿಸನ್‌, ವೈಶಾಖ್‌, ಅರ್ಶ್‌ದೀಪ್‌ ಸಿಂಗ್‌, ಯಜುವೇಂದ್ರ ಚಹಲ್‌.

ಇಂಪ್ಯಾಕ್ಟ್‌ ಆಟಗಾರ: ಪ್ರಭ್‌ಸಿಮ್ರನ್‌ ಸಿಂಗ್‌.