ಚೆನ್ನೈ, ಫೆ.27: ಗುರುವಾರ ರಾತ್ರಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಸೂಪರ್-8 ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಜಿಂಬಾಬ್ವೆ(India vs Zimbabwe) ವಿರುದ್ಧ 72 ರನ್ ಭರ್ಜರಿ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಭಾರತ ತಂಡ, ಈ ಬಾರಿ ಟಿ20 ವಿಶ್ವಕಪ್(T20 World Cup)ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯ ಗೆದ್ದರೂ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಬೇಸರ ವ್ಯಕ್ತಪಡಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್, ಬೌಲಿಂಗ್‌ನಲ್ಲಿ ಸುಧಾರಣೆ ತರುವಂತೆ ಬೌಲರ್‌ಗಳಿಗೆ ಕರೆ ನೀಡಿದರು. ತಂಡವು ಉತ್ತಮ ದಿನವನ್ನು ಹೊಂದಿತ್ತು ಆದರೆ ಟಿ20 ವಿಶ್ವಕಪ್ ಸ್ಪರ್ಧೆಯ ಅಂತ್ಯದತ್ತ ಸಾಗುತ್ತಿರುವುದರಿಂದ ತಂಡದ ಬೌಲಿಂಗ್ ಬಿಗಿಗೊಳಿಸಬೇಕಿದೆ. ಎಂದು ಅವರು ಹೇಳಿದರು. ತಂಡ 184 ರನ್‌ಗಳನ್ನು ಬಿಟ್ಟುಕೊಟ್ಟಿತ್ತು.
"ನಾವು ಬೌಲಿಂಗ್‌ನಲ್ಲಿ ಸ್ವಲ್ಪ ಉತ್ತಮ ಪ್ರದರ್ಶನ ನೀಡಬೇಕಿತ್ತು. ವೆಸ್ಟ್ ಇಂಡೀಸ್ ವಿರುದ್ಧ ಆಡಲು ಹೋದಾಗ ನಮ್ಮ ಹಿಡಿತವನ್ನು ಬಿಗಿಗೊಳಿಸುತ್ತೇವೆ" ಎಂದು ಸೂರ್ಯಕುಮಾರ್ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು.
"ನಾನು ತಂಡದ ಬ್ಯಾಟ್ಸ್‌ಮನ್‌ಗಳಿಂದ, ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳಿಂದ ಯಾವುದೇ ಶ್ರೇಯಸ್ಸನ್ನು ಕಸಿದುಕೊಳ್ಳಲು ಬಯಸುವುದಿಲ್ಲ. ಅವರು ಸುಂದರವಾಗಿ ಬ್ಯಾಟಿಂಗ್ ಮಾಡಿದರು ಎಂದು ನಾನು ಭಾವಿಸುತ್ತೇನೆ. ಹೌದು, ವಿಕೆಟ್ ಚೆನ್ನಾಗಿತ್ತು, ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ, ಅವರು ಪವರ್‌ಪ್ಲೇನಲ್ಲಿ ತಮ್ಮದೇ ಆದ ಸಮಯವನ್ನು ತೆಗೆದುಕೊಂಡರು ಮತ್ತು ನಂತರ ಅವರು ತುಂಬಾ ಚುರುಕಾಗಿ ಬ್ಯಾಟಿಂಗ್ ಮಾಡಿದರು. ಶ್ರೇಯಸ್ಸು ಅವರಿಗೂ ಸಲ್ಲುತ್ತದೆ. ಆದರೆ ಬೌಲಿಂಗ್ ದೃಷ್ಟಿಕೋನದಿಂದ, ಆ ಉತ್ತಮ ಆಯ್ಕೆಯನ್ನು ತೆಗೆದುಕೊಳ್ಳಲು ನಾವು ಸ್ವಲ್ಪ ಬುದ್ಧಿವಂತರಾಗಬಹುದಿತ್ತು”ಎಂದು ಹೇಳಿದರು.
ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಅಕ್ಷರಶಃ ಅಬ್ಬರಿಸಿತು. ಸ್ಫೋಟಕ ಆಟವಾಡಿ 4 ವಿಕೆಟ್ ನಷ್ಟದಲ್ಲಿ 256 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿ ಗೆಲ್ಲಲು ಜಿಂಬಾಬ್ವೆ ಸಾಧ್ಯವಾಗದಿದ್ದರೂ ಕೊನೆವರೆಗೂ ಹೋರಾಡಿದ ತಂಡ 6 ವಿಕೆಟ್ ನಷ್ಟದಲ್ಲಿ 184 ರನ್ ಸಿಡಿಸಿತು.
ಜಸ್‌ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ದಾಖಲೆ ಮುರಿದ ಅರ್ಶ್‌ದೀಪ್
ಜಿಂಬಾಬ್ವೆ ಪರ ಬೆನೆಟ್ ಕೊನೆವರೆಗೂ ಏಕಾಂಗಿ ಹೋರಾಟ ನಡೆಸಿದರು. ಅವರು 59 ಎಸೆತಕ್ಕೆ ಔಟಾಗದೆ 97 ರನ್ ಗಳಿಸಿದರು. ಸಿಕಂದರ್ ರಝಾ 31 ರನ್ ಕೊಡುಗೆ ನೀಡಿದರು. ಅರ್ಶ್‌ದೀಪ್ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್‌ಗಳಲ್ಲಿ 256/4 (ಅಭಿಷೇಕ್ 55, ಹಾರ್ದಿಕ್ 50*, ತಿಲಕ್ 44*, ಇಶಾನ್ 38, ಸೂರ್ಯ 33, ಸಂಜು 24, ಸಿಕಂದರ್ 1-29), ಜಿಂಬಾಬ್ವೆ: 20 ಓವರ್‌ಗಳಲ್ಲಿ 184/6 (ಬೆನಟ್ 97*, ಸಿಕಂದರ್ 31, ಅರ್ಶ್‌ದೀಪ್ 3-24).