ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಸ್ಥಾನ್‌ ವಿರುದ್ಧ ಕರ್ನಾಟಕಕ್ಕೆ 4 ವಿಕೆಟ್‌ ಗೆಲುವು

ಚೇಸಿಂಗ್‌ ವೇಳೆ ನಾಯಕ ಸ್ಮರಣ್ ರವಿಚಂದ್ರನ್ ಅಜೇಯ 25 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೃಷ್ಣನ್ ಶ್ರೀಜಿತ್ 33 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ರಾಜ್ಯ ತಂಡ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿತು. ಅನುಭವಿಗಳಾದ ಕರುಣ್‌ ನಾಯರ್‌ ಮತ್ತು ಮನೀಷ್‌ ಪಾಂಡೆಯನ್ನು ಕೈಬಿಟ್ಟಿತು.

Syed Mushtaq Ali Trophy

ಮುಂಬಯಿ, ನ.24: ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ 4 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಈ ಗೆಲುವು ಸಾಧಿಸಿದರೂ ತಂಡದ ನಕೌಟ್‌ ಪ್ರವೇಶದ ಸಾಧ್ಯತೆ ಕ್ಷೀಣವಾಗಿದೆ.

ಮಂಗಳವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ ತಂಡ ಹಿಮಾಂಶು ನೆಹ್ರಾ ಅವರ ಅರ್ಧಶತಕದ ನೆರವಿನಿಂದ 113 ಗಳಿಸಿತು. ಕರ್ನಾಟಕ ಪರ ಶಿಖರ್ ಶೆಟ್ಟಿ 4 ವಿಕೆಟ್‌ ಕಿತ್ತು ಮಿಂಚಿದರು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಕರ್ನಾಟಕ 6 ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ನಾಯಕ ಸ್ಮರಣ್ ರವಿಚಂದ್ರನ್ ಅಜೇಯ 25 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೃಷ್ಣನ್ ಶ್ರೀಜಿತ್ 33 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ರಾಜ್ಯ ತಂಡ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿತು. ಅನುಭವಿಗಳಾದ ಕರುಣ್‌ ನಾಯರ್‌ ಮತ್ತು ಮನೀಷ್‌ ಪಾಂಡೆಯನ್ನು ಕೈಬಿಟ್ಟಿತು. ರಾಜಸ್ಥಾನ್‌ ಪರ ಮಾನವ್‌ ಮತ್ತು ರಾಹುಲ್‌ ಚಹಾರ್‌ ತಲಾ ಎರಡು ವಿಕೆಟ್‌ ಕಿತ್ತರು.

IND vs UAE: 28 ಎಸೆತಗಳಲ್ಲಿ ವೇಗದ ಲಿಸ್ಟ್‌ ಎ ಶತಕ ಬಾರಿಸಿದ ವೈಭವ್‌ ಸೂರ್ಯವಂಶಿ!

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ತಂಡಕ್ಕೆ ಶಿಖರ್ ಶೆಟ್ಟಿ ಘಾತಕ ಬೌಲಿಂಗ್‌ ದಾಳಿ ಮೂಲಕ ಇನ್ನಿಲ್ಲದಂತೆ ಕಾಡಿದರು. 4 ಓವರ್‌ಗೆ 26 ರನ್‌ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್‌ ಉಡಾಯಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್‌ ನೀಡಿದ ಶ್ರೀಶ ಆಚಾರ್ 2 ವಿಕೆಟ್‌ ಕೆಡವಿದರು.

ತಂಡದ ಪರ ಏಕೈಕ ಬ್ಯಾಟಿಂಗ್‌ ಹೋರಾಟ ನಡೆಸಿದ ಹಿಮಾಂಶು ನೆಹ್ರಾ ಅರ್ಧಶತ ಬಾರಿಸಿದರು. ಆದರೆ ತಂಡದ ಸೋಲಿನಿಂದ ಅರ್ಧಶತಕ ವ್ಯರ್ಥವಾಯಿತು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಅವರು 22 ಎಸೆತಗಳಲ್ಲಿ ತಲಾ 4 ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿ 53 ರನ್‌ ಗಳಿಸಿದರು. ಉಳಿದಂತೆ ಅಭಿಜೀತ್ ತೋಮರ್ 25 ರನ್‌ ಗಳಿಸಿದರು.