ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ ಸೆಮೀಸ್, ಫೈನಲ್‌ಗೆ ಭಾರತವೇ ಆತಿಥ್ಯ

T20 World Cup 2026: ಮೊದಲ ಸೆಮಿಫೈನಲ್‌ ಪಂದ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಬುಧವಾರ ನಡೆಯಲಿದೆ. ಈ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಲಿದೆ. ಎರಡೆನೇ ಸೆಮಿಫೈನಲ್‌ ಪಂದ್ಯ ಗುರುವಾರ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯಲಿದೆ.

T20 World Cup 2026

ಕೋಲ್ಕತ್ತಾ: ಮಾ.3: ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌(T20 World Cup 2026)ನ ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯ ಭಾರತದಲ್ಲೇ ನಡೆಯಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡ ಟೂರ್ನಿಯಿಂದ ಹೊರಬಿದ್ಧ ಕಾರಣ ಪಂದ್ಯಗಳ ಆತಿಥ್ಯ ಭಾರತಕ್ಕೆ ಸಿಕ್ಕಿದೆ.

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದ್ದರಿಂದ ಟೂರ್ನಿಯ ಎಡರೂ ಸೆಮಿಫೈನಲ್ ಹಾಗೂ ಫೈನಲ್‌ಗೆ ಭಾರತವೇ ಆತಿಥ್ಯ ವಹಿಸಲಿದೆ. ಐಸಿಸಿ ಹೈಬ್ರಿಡ್ ನಿಯಮದ ಪ್ರಕಾರ, ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಿದ್ದರೆ ಆ ಪಂದ್ಯ ಕೊಲಂಬೊದಲ್ಲಿ ನಡೆಯಬೇಕಿತ್ತು. ಲಂಕಾ ಸೆಮೀಸ್ ತಲುಪಿ, ಭಾರತದ ಹೊರತಾಗಿ ಬೇರೊಂದು ತಂಡದ ವಿರುದ್ಧ ಆಡಬೇಕಿದ್ದರೂ ಆ ಪಂದ್ಯ ಕೂಡಾ ಕೊಲಂಬೋದಲ್ಲಿ ನಡೆಯುತ್ತಿತ್ತು.

ಆದರೆ ಲಂಕಾ ಮತ್ತು ಪಾಕ್ ತಂಡಗಳು ನಾಕೌಟ್ ತಲುಪದ ಕಾರಣ ಸೆಮಿ ಫೈನಲ್ ಆತಿಥ್ಯ ಕೊಲಂಬೊದ ಕೈತಪ್ಪಿದೆ. ಮಾ.4ರಂದು ಮೊದಲ ಸೆಮಿಫೈನಲ್ ಕೋಲ್ಕತಾದಲ್ಲಿ, ಮಾ.5ಕ್ಕೆ ಎರಡನೇ ಸೆಮಿಫೈನಲ್‌ಗೆ ಮುಂಬೈನಲ್ಲಿ ನಡೆಯಲಿದೆ. ಮಾ.8ರಂದು ಅಹಮದಾಬಾದ್‌ ನಲ್ಲಿ ಫೈನಲ್ ನಡೆಯಲಿದೆ, ಒಂದು ವೇಳೆ ಪಾಕ್ ಫೈನಲ್ ಗೇರಿದ್ದರೆ ಕೊಲಂಬೊದಲ್ಲಿ ಫೈನಲ್ ನಡೆಯುತ್ತಿತ್ತು.

ಮೊದಲ ಸೆಮಿಫೈನಲ್‌ ಪಂದ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಬುಧವಾರ ನಡೆಯಲಿದೆ. ಈ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಲಿದೆ. ಎರಡೆನೇ ಸೆಮಿಫೈನಲ್‌ ಪಂದ್ಯ ಗುರುವಾರ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯಲಿದೆ. ಫೈನಲ್‌ ಪಂದ್ಯ ಅಹಮಾದಾಬಾದ್‌ನಲ್ಲಿ ನಡೆಯಲಿದೆ.

ಚಿನ್ನಸ್ವಾಮಿಯಲ್ಲೇ ಐಪಿಎಲ್ ಪಂದ್ಯ ಆಡುವ ಸುಳಿವು ನೀಡಿದ ಆರ್‌ಸಿಬಿ

ಭಾರತವು ಭಾನುವಾರ ವೆಸ್ಟ್‌ ಇಂಡೀಸ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 6ನೇ ಬಾರಿಗೆ ಸೆಮಿ-ನಲ್ ಪ್ರವೇಶ ಪಡೆಯಿತು. ಆ ಮೂಲಕ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಈ ಹಿಂದೆ ಆರು ಬಾರಿ ನಾಕೌಟ್ ಪ್ರವೇಶಿಸಿ ಮಾಡಿದ್ದ ಸಾಧನೆಯನ್ನು ಟೀಮ್ ಇಂಡಿಯಾ ಸರಿಗಟ್ಟಿತು.

ದಾಖಲೆ ಸರಿಗಟ್ಟಿದ ಭಾರತ

ಭಾರತ ಪುರುಷರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ನ 2007, 2014, 2016, 2022 ಮತ್ತು 2024ರಲ್ಲಿ ಈ ಹಿಂದೆ 5 ಸಲ ನಾಲ್ಕರ ಘಟ್ಟ ಪ್ರವೇಶಿಸಿತ್ತು. ಪಾಕಿಸ್ತಾನವು 6 ಬಾರಿ (2007, 2009, 2010, 2012, 2021, 2022) ಮತ್ತು ಇಂಗ್ಲೆಂಡ್ 6 ಬಾರಿ (2010, 2016, 2021, 2022, 2024, 2026) ಸೆಮಿ ಫೈನಲ್ ಅರ್ಹತೆ ಪಡೆದಿದ್ದವು. ಇದೀಗ ಭಾರತ 2026ರ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿ ಆ ಎರಡೂ ತಂಡಗಳ ದಾಖಲೆ ಸರಿಗಟ್ಟಿವೆ.