ಚೆನ್ನೈ, ಫೆ.25: ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ(T20 World Cup 2026) ಸೆಮಿಫೈನಲ್ ಸ್ಥಾನವನ್ನು ಜೀವಂತವಿರಿಸಿಕೊಳ್ಳುವ ಮಹತ್ವದ ಸೂಪರ್-8 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಗುರುವಾರ ಜಿಂಬಾಬ್ವೆ(IND vs ZIM) ವಿರುದ್ಧ ಸೆಣಸಾಡಲು ಸಜ್ಜಾಗಿದೆ. ಇತ್ತಂಡಗಳ ಈ ಕಾದಾಟ ಚೆನ್ನೈನ ಎಂ.ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಪಿಚ್, ಹವಾಮಾನ, ಸಂಭಾವ್ಯ ತಂಡದ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಚೆಪಾಕ್‌ನ ಪಿಚ್ ಸ್ಪಿನ್ ಮತ್ತು ನಿಧಾನಗತಿಯ ಬೌಲಿಂಗ್‌ಗೆ ಹೆಚ್ಚು ಸಹಕಾರಿ. ಹೀಗಿದ್ದರೂ ಬ್ಯಾಟ್ಸ್‌ಮನ್‌ಗಳಿಗೂ ಅನುಕೂಲಕರವಾಗಿದೆ. 170-180 ಸ್ಕೋರ್‌ಗಳು ಮೊದಲ ಇನಿಂಗ್ಸ್‌ನಲ್ಲಿ ಸುಲಭವಾಗಿ ಕಲೆಹಾಕಬಹುದು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಹೆಚ್ಚು ಹಿಡಿತ ಸಾಧಿಸಬಹುದು. ಚೇಸಿಂಗ್ ಕೊಂಚ ಕಷ್ಟಕರ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು.
ಹವಾಮಾನ ವರದಿ
ಚೆನ್ನೈನಲ್ಲಿ ಕ್ರಿಕೆಟ್‌ಗೆ ಹವಾಮಾನ ಮುನ್ಸೂಚನೆ ಉತ್ತಮವಾಗಿದ್ದು, ಆಕಾಶವು ಶುಭ್ರವಾಗಿದ್ದು, ಮಳೆ ಬೀಳುವ ಸಾಧ್ಯತೆ ಇಲ್ಲ. ಸಂಜೆ 7 ಗಂಟೆಗೆ ಆರಂಭವಾಗುವ ಪಂದ್ಯದ ಸಮಯದಲ್ಲಿ 26-29 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ನಿರೀಕ್ಷಿಸಬಹುದು. ಈ ಪ್ರದೇಶದಲ್ಲಿ ಆರ್ದ್ರತೆಯು ಶೇಕಡಾ 70 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.
ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ವಿಂಡೀಸ್, ಜಿಂಬಾಬ್ವೆ ವಿರುದ್ಧ ಭಾರತದ ಟಿ20 ಸಾಧನೆಯ ಇಣುಕು ನೋಟ
ಮುಖಾಮುಖಿ
ಒಟ್ಟು ಪಂದ್ಯ: 13
ಭಾರತ ಗೆಲುವು: 10
ಜಿಂಬಾಬ್ವೆ ಗೆಲುವು: 03
ಸಂಭಾವ್ಯ ತಂಡಗಳು
ಭಾರತ: ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿ.ಕೀ.), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಜಿಂಬಾಬ್ವೆ: ಬ್ರಿಯಾನ್ ಬೆನೆಟ್, ತಡಿವಾನಾಶೆ ಮರುಮಾನಿ (ವಿ.ಕೀ.), ರಿಯಾನ್ ಬರ್ಲ್, ಸಿಕಂದರ್ ರಝಾ (ನಾಯಕ), ತಶಿಂಗಾ ಮುಸೆಕಿವಾ, ಟೋನಿ ಮುನ್ಯೊಂಗಾ, ಡಿಯೋನ್ ಮೈಯರ್ಸ್, ಬ್ರಾಡ್ ಇವಾನ್ಸ್, ಗ್ರೇಮ್ ಕ್ರೀಮರ್, ರಿಚರ್ಡ್ ನಾಗರವಾ, ಬ್ಲೆಸ್ಸಿಂಗ್ ಮುಜರಬಾನಿ.
ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜೀಯೊ ಹಾಟ್‌ಸ್ಟಾರ್
ಪಂದ್ಯ ಆರಂಭ: ರಾತ್ರಿ 7ಕ್ಕೆ