ನವದೆಹಲಿ, ಆ.6: ಬಿಡಬ್ಲ್ಯುಎಫ್ ವಿಶ್ವ ಟೂರ್‌ನಲ್ಲಿ ತನ್ನ ಮಿಂಚಿನ ಓಟವನ್ನು ಮುಂದುವರಿಸಿದ ಹದಿಹರೆಯದ ತಾನ್ವಿ ಶರ್ಮಾ, ಗುರುವಾರ ಅಸಾನ್‌ನಲ್ಲಿ ನಡೆದ ಕೊರಿಯಾ ಮಾಸ್ಟರ್ಸ್ 2026 ರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ದೇಶದವರೇ ಆದ ಶ್ರೀಯಾನ್ಶಿ ವಲಿಶೆಟ್ಟಿ ವಿರುದ್ಧ ಮೂರು ಪಂದ್ಯಗಳ ಕಠಿಣ ಹೋರಾಟದ ಮೂಲಕ 21-16, 17-21, 21-13 ಅಂತರದಲ್ಲಿ ಜಯಗಳಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿಯೂ ಭಾರತದವರೇ ಆಗಿರುವ ರಕ್ಷಿತಾ ರಾಮರಾಜ್ ಅವರನ್ನು ಎದುರಿಸಲಿದ್ದಾರೆ.
ರಕ್ಷಿತಾ ರಾಮರಾಜ್ ಅವರು ಜಪಾನ್‌ನ ಮನಾಮಿ ಸುಯಿಜು ಅವರನ್ನು 22-20, 21-10 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು. ಪಂದ್ಯಾವಳಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ತನ್ವಿ, 36 ನಿಮಿಷಗಳಲ್ಲಿ ಚೀನಾದ ಯುವಾನ್ ಅಂಕಿ ವಿರುದ್ಧ 21-16, 21-15 ಅಂತರದಲ್ಲಿ ಕ್ಲಿನಿಕಲ್ ಗೆಲುವು ಸಾಧಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿದರು.
ಸದ್ಯ ಮಹಿಳಾ ಸಿಂಗಲ್ಸ್‌ನಲ್ಲಿ ದೇಶದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ತಾನ್ವಿ ಶರ್ಮಾ ಇತ್ತೀಚೆಗೆ ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಆಗಸ್ಟ್ 17 ರಿಂದ ಪ್ರಾರಂಭವಾಗುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ವಿ ಭಾಗವಹಿಸುವುದಿಲ್ಲ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಮತ್ತು ಉನ್ನತಿ ಹೂಡಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಭಾರತಕ್ಕೆ ಕಠಿಣ ಡ್ರಾ
ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಡ್ರಾಗಳು ಪ್ರಕಟಗೊಂಡಿದೆ. ಭಾರತದ ಪ್ರಮುಖ ಶಟ್ಲರ್‌ಗಳು ಕಠಿಣ ಡ್ರಾವನ್ನು ಎದುರಿಸಿದ್ದಾರೆ. ಕನ್ನಡಿಗ ಆಯುಷ್ ಶೆಟ್ಟಿ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ಚೀನಾದ ವಿಶ್ವ ಚಾಂಪಿಯನ್ ಶಿ ಯುಕಿಯಿಂದ ಕಠಿಣ ಪರೀಕ್ಷೆಯನ್ನು ಎದುರಿಸಲಿದ್ದಾರೆ.
'ಹಿರಿಯ ಆಟಗಾರರನ್ನು ಗೌರವಿಸಿ': ಗಂಭೀರ್, ಆಯ್ಕೆದಾರರಿಗೆ ಅಜಿಂಕ್ಯ ರಹಾನೆ ಸೂಚನೆ
ಪಿ.ವಿ ಸಿಂಧು ತಮ್ಮ ಮೊದಲ ಸುತ್ತಿನಲ್ಲಿ ವಿಶ್ವದ 141 ನೇ ಶ್ರೇಯಾಂಕದ ಐರ್ಲೆಂಡ್‌ನ ಸೋಫಿಯಾ ನೊಬೆಲ್ ಅವರನ್ನು ಎದುರಿಸಲಿದ್ದಾರೆ. ವಿಶ್ವ ನಂ. 1 ದ. ಕೊರಿಯಾದ ಆನ್ ಸೆ ಯಂಗ್ ಮತ್ತು ಸಿಂಧು ಡ್ರಾದ ಒಂದೇ ಭಾಗದಲ್ಲಿದ್ದು, ಇವರಿಬ್ಬರು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಇದೆ.
ಪುರುಷರ ಡಬಲ್ಸ್ನಲ್ಲಿ 5ನೇ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿ ಮೊದಲ ಸುತ್ತಿನಲ್ಲಿ ಬೈ ಪಡೆದಿದೆ. 2ನೇ ಸುತ್ತಿನಲ್ಲಿ ಇಂಡೋನೇಷ್ಯಾದ ರಿಯಾನ್ ಇಂದ್ರ&ನಿಕೋಲೈಸ್ ಜಾಕ್ವಿನ್ ಸವಾಲು ಎದುರಾಗಲಿದೆ.