ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೆಲುವಿನ ರುಚಿ ಕಂಡ ಟೀಂ ಇಂಡಿಯಾ: ಸೆಮೀಸ್ ಆಸೆ ಜೀವಂತ

ಗೆಲುವಿನ ರುಚಿ ಕಂಡ ಟೀಂ ಇಂಡಿಯಾ: ಸೆಮೀಸ್ ಆಸೆ ಜೀವಂತ

image-1216f4b2-228d-4c13-9a79-310b1f993f87.jpg
ಅಬುಧಾಬಿ: T20 ವಿಶ್ವಕಪ್‌ನಲ್ಲಿ ಭಾರತವು ಅಂತಿಮವಾಗಿ ಗೆಲುವಿನ ರುಚಿ ಕಂಡಿತು. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್‌ಗಳಿಂದ ಅಫ್ಘಾನಿಸ್ತಾನ ವನ್ನು (ಭಾರತ ವಿರುದ್ಧ ಅಫ್ಘಾನಿ ಸ್ತಾನ) ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 210 ರನ್ ಗಳಿಸಿತು ಮತ್ತು ಉತ್ತರವಾಗಿ ಅಫ್ಘಾನ್ ತಂಡ 144 ರನ್ ಗಳಿಸಿತು. ಟೀಂ ಇಂಡಿಯಾ ಗೆಲುವಿನಲ್ಲಿ ರೋಹಿತ್ ಶರ್ಮಾ ಗರಿಷ್ಠ 74 ರನ್, ಕೆಎಲ್ ರಾಹುಲ್ ಕೂಡ 69 ರನ್ ಗಳ ಇನಿಂಗ್ಸ್ ಆಡಿದರು. ಬ್ಯಾಟ್ಸ್‌ಮನ್‌ಗಳ ನಡುವೆ 140 ರನ್‌ಗಳ ಜೊತೆಯಾಟವಿತ್ತು. ಟಿ 20 ವಿಶ್ವಕಪ್ ಇತಿಹಾಸ ದಲ್ಲಿ ಭಾರತದ ಅತಿದೊಡ್ಡ ಆರಂಭಿಕ ಪಾಲುದಾರಿಕೆಯಾಗಿದೆ. ರೋಹಿತ್-ರಾಹುಲ್ ಹೊರತುಪಡಿಸಿ, ಹಾರ್ದಿಕ್ ಪಾಂಡ್ಯ ಔಟಾಗದೆ 35 ಮತ್ತು ರಿಷಬ್ ಪಂತ್ 27 ರನ್ ಗಳಿಸಿದರು. ಬೌಲಿಂಗ್​ನಲ್ಲಿ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದರು. ಅಶ್ವಿನ್ 4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ಈ ಭಾರೀ ಅಂತರದ ಗೆಲುವಿನ ಬೆನ್ನಲ್ಲೇ ಭಾರತ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಕನಸು ಜೀವಂತವಾಗಿರಿಸಿದೆ. ನಿನ್ನೆಯ ಪಂದ್ಯದಲ್ಲಿ ಭಾರತ 211 ರನ್ ಗಳ ಬೃಹತ್ ಗೆಲುವಿನ ಗುರಿ ನಿಗದಿಪಡಿಸಿತ್ತು. ಆಫ್ಘನ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಕೆಳ ಕ್ರಮಾಂಕದಲ್ಲಿ ನಾಯಕ ಮೊಹಮ್ಮದ್ ನಬಿ 35, ಕರೀಂ ಜನತ್ ಔಟಾಗದೇ 42 ರನ್ ಗಳಿಸಿ ಆಧಾರವಾದರು. ಅಂತಿಮವಾಗಿ ಬಾಂಗ್ಲಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು.