ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Temba Bavuma: ಭಾರತವನ್ನು ಮಣಿಸಿ ವಿಶೇಷ ದಾಖಲೆ ಬರೆದ ಸೋಲಿಲ್ಲದ ಸರದಾರ ಟೆಂಬ ಬವುಮಾ

ಪ್ರವಾಸಿ ತಂಡದ ಪರ ಸೈಮನ್ ಹಾರ್ಮರ್ ನಾಲ್ಕು ವಿಕೆಟ್ ಕಬಳಿಸಿದರು. ಮಾರ್ಕೊ ಜಾನ್ಸೆನ್ ಮತ್ತು ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್‌ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಆತಿಥೇಯರ ಪರ ಗರಿಷ್ಠ ಸ್ಕೋರ್ ಗಳಿಸಿದ ವಾಷಿಂಗ್ಟನ್ ಸುಂದರ್ ಅವರ ನಿರ್ಣಾಯಕ ವಿಕೆಟ್ ಅನ್ನು ಉಪನಾಯಕ ಐಡೆನ್ ಮಾರ್ಕ್ರಾಮ್ ಕಿತ್ತರು. ಸುಂದರ್‌ 31 ರನ್‌ ಗಳಿಸಿದರು.

ಕೋಲ್ಕತಾ ಟೆಸ್ಟ್‌ ಗೆದ್ದು ವಿಶೇಷ ದಾಖಲೆ ಬರೆದ ಟೆಂಬ ಬವುಮಾ

ಕೋಲ್ಕತಾ: ಭಾರತ ವಿರುದ್ಧದ ಮೊದಲ ಟೆಸ್ಟ್‌(India vs South Africa 1st Test) ಪಂದ್ಯದಲ್ಲಿ 30 ರನ್‌ ಗೆಲುವು ಸಾಧಿಸಿಸುವಲ್ಲಿ ಮಹತ್ವದ ಪಾತ್ರವಹಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬ ಬವುಮಾ(Temba Bavuma) ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. 15 ವರ್ಷಗಳಲ್ಲಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ದಕ್ಷಿಣ ಆಫ್ರಿಕಾದ ನಾಯಕ ಎನಿಸಿಕೊಂಡರು. ಒಟ್ಟಾರೆಯಾಗಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಕೊನೆಯ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್. ಸ್ಮಿತ್ ನಾಯಕತ್ವದಲ್ಲಿ, ದಕ್ಷಿಣ ಆಫ್ರಿಕಾವು 2010ರಲ್ಲಿ ನಾಗ್ಪುರದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಭಾರತವನ್ನು ಇನ್ನಿಂಗ್ಸ್ ಮತ್ತು ಆರು ರನ್‌ಗಳಿಂದ ಸೋಲಿಸಿತ್ತು. ಈಡನ್ ಗಾರ್ಡನ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಕೊನೆಯ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ. ಅವರ ನಾಯಕತ್ವದಲ್ಲಿ, ದಕ್ಷಿಣ ಆಫ್ರಿಕಾ 1996 ರಲ್ಲಿ ಭಾರತವನ್ನು 329 ರನ್‌ಗಳಿಂದ ಸೋಲಿಸಿತ್ತು.

ದಕ್ಷಿಣ ಆಫ್ರಿಕಾ ಈ ಹಿಂದೆ 2004 ಮತ್ತು 2010 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡಿತು ಆದರೆ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದ ಬವುಮಾ, ಇದುವರೆಗೆ ಒಟ್ಟು 11 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ, ತಂಡ 10 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾದ ನಾಯಕನಾಗಿ ಅವರು ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.

ಶುಕ್ರವಾರ ಆರಂಭಗೊಂಡ ಟೆಸ್ಟ್‌ ಪಂದ್ಯ ಕೇವಲ ಮೂರೇ ದಿನಕ್ಕೆ ಕೊನೆಗೊಂಡಿತು. ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 159ರನ್‌ಗೆ ಆಲೌಟ್‌ ಆದರೆ, ಭಾರತ 189ರನ್‌ ಗಳಿಸಿತು. 30 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಹರಿಣ ಪಡೆ ನಾಯ ಟೆಂಬ ಬವುಮಾ ಅಜೇಯ ಅರ್ಧಶತಕದ ನೆರವಿನಿಂದ 153 ರನ್‌ ಗಳಿಸಿ ಭಾರತಕ್ಕೆ 124 ರನ್‌ಗಳ ಗುರಿ ನೀಡಿತು. ಗುರಿ ಹಿಂಬಾಲಿಸಿದ ಭಾರತ ಕೇವಲ 93 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.

ಇದನ್ನೂ ಓದಿ IND vs SA: 15 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಪಂದ್ಯ ಜಯಿಸಿದ ದಕ್ಷಿಣ ಆಫ್ರಿಕಾ

ಪ್ರವಾಸಿ ತಂಡದ ಪರ ಸೈಮನ್ ಹಾರ್ಮರ್ ನಾಲ್ಕು ವಿಕೆಟ್ ಕಬಳಿಸಿದರು. ಮಾರ್ಕೊ ಜಾನ್ಸೆನ್ ಮತ್ತು ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್‌ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಆತಿಥೇಯರ ಪರ ಗರಿಷ್ಠ ಸ್ಕೋರ್ ಗಳಿಸಿದ ವಾಷಿಂಗ್ಟನ್ ಸುಂದರ್ ಅವರ ನಿರ್ಣಾಯಕ ವಿಕೆಟ್ ಅನ್ನು ಉಪನಾಯಕ ಐಡೆನ್ ಮಾರ್ಕ್ರಾಮ್ ಕಿತ್ತರು. ಸುಂದರ್‌ 31 ರನ್‌ ಗಳಿಸಿದರು.