ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ದೇವರೇ ಧನ್ಯವಾದಗಳು'; ವೆಸ್ಟ್ ಇಂಡೀಸ್ ವಿರುದ್ಧ ಸೋತ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅಚ್ಚರಿಯ ಹೇಳಿಕೆ

England vs West Indies: ಸ್ಪಿನ್ನರ್‌ಗಳಾದ ಗುಡಕೇಶ್‌ (33ಕ್ಕೆ 3) ಮತ್ತು ರೋಸ್ಟನ್ ಚೇಸ್ (29ಕ್ಕೆ 2) ಇಂಗ್ಲೆಂಡ್‌ ತಂಡವನ್ನು ಕಟ್ಟಿ ಹಾಕಲು ನೆರವಾದರು. ಇಂಗ್ಲೆಂಡ್‌ ಪರ ಫಿಲ್‌ ಸಾಲ್ಟ್‌ (30), ಜೇಕಬ್‌ ಬೆಥಲ್‌ (33) ಮತ್ತು ಸ್ಯಾಮ್‌ ಕರನ್‌ (ಔಟಾಗದೇ 43) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

Harry Brook

ಮುಂಬಯಿ, ಫೆ.12: ನೇಪಾಳ ವಿರುದ್ಧ ಸ್ವಲ್ಪದರಲ್ಲೇ ಸೋಲಿನಿಂದ ಪಾರಾಗಿದ್ದ ಇಂಗ್ಲೆಂಡ್‌ ತಂಡ ಬುಧವಾರ ನೆಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌(England vs West Indies) ವಿರುದ್ಧ 30 ರನ್‌ಗಳ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಬಳಿಕ ನಾಯಕ ಹ್ಯಾರಿ ಬ್ರೂಕ್‌ ಆಡಿದ ಮಾತು ಭಾರೀ ವೈರಲ್‌ ಆಗಿದೆ.

ಪಂದ್ಯದ ಬಳಿಕ ಮಾತನಾಡಿದ ಬ್ರೂಕ್‌, ಈ ಸೋಲಿನಿಂದ ಯಾವುದೇ ಬೇಸರವಾಗಿಲ್ಲ. ಆದರೆ ನೇಪಾಳ ವಿರುದ್ಧ ಸೋಲಿನಿಂದ ಪಾರಾದದ್ದು ನಿಜಕ್ಕೂ ಸಂತಸ ತಂದಿದೆ ಎಂದರು.

"ನೇಪಾಳ ವಿರುದ್ಧವೂ ಸೋತಿದ್ದರೆ, ನಾವು ಟಿ20 ವಿಶ್ವಕಪ್‌ನಿಂದ ಹೊರಬೀಳುವ ಅಂಚಿನಲ್ಲಿರುತ್ತಿದ್ದೆವು. ದೇವರಿಗೆ ಧನ್ಯವಾದಗಳು. ನಾವು ನಿನ್ನೆ ರಾತ್ರಿ ನೇಪಾಳ ವಿರುದ್ಧ ಗೆದ್ದೆವು, ಇಲ್ಲದಿದ್ದರೆ ನಾವು ಕಠಿಣ ಪರಿಸ್ಥಿತಿಯಲ್ಲಿರುತ್ತಿದ್ದೆವು. ಆದರೆ ನಾವು ಮುಂದೆ ಸ್ಕಾಟ್ಲೆಂಡ್ ಮತ್ತು ಇಟಲಿ ವಿರುದ್ಧ ಆಡುತ್ತೇವೆ ಎಂಬುದು ಸ್ಪಷ್ಟ, ಮತ್ತು ಹೌದು, ನಾವು ಹಿಂತಿರುಗಿ ಹೋಗಬೇಕು. ಆದರೆ ನಾವು ಹೇಗೆ ಹೋಗುತ್ತೇವೆ ಎಂದು ನೋಡಬೇಕು" ಎಂದು ಬ್ರೂಕ್ ಹೇಳಿದರು.

"ನಾನು ನಿರಾಶೆಗೊಂಡಿಲ್ಲ, ಸ್ವಲ್ಪ ಇಬ್ಬನಿ ಬೀಳುತ್ತದೆ ಮತ್ತು ಸ್ಪಿನ್ನರ್‌ಗಳು ಸ್ವಲ್ಪ ಹೆಚ್ಚು ಜಾರಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೆವು. ದುರದೃಷ್ಟವಶಾತ್, ಇಂದು ರಾತ್ರಿ ಅದು ಆಗಲಿಲ್ಲ" ಎಂದು ಬ್ರೂಕ್ ಹೇಳಿದರು.

ENG vs WI: ಶೆರ್ಫೆನ್‌ ಋದರ್‌ಫೋರ್ಡ್‌ ಫಿಫ್ಟಿ, ಇಂಗ್ಲೆಂಡ್‌ಗೆ ಶಾಕ್‌ ನೀಡಿದ ವೆಸ್ಟ್‌ ಇಂಡೀಸ್‌!

ಪಂದ್ಯದ ಬಗ್ಗೆ ಹೇಳುವುದಾದದರೆ, ಬುಧವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌, ಶೆರ್ಫೇನ್ (76) ಅವರ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 196 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಹೋರಾಟ ಮುಗಿಸಿತು. ಇದರೊಂದಿಗೆ ವಿಂಡೀಸ್‌ ಸತತ ಎರಡನೇ ಗೆಲುವು ದಾಖಲಿಸಿತು.

ಸ್ಪಿನ್ನರ್‌ಗಳಾದ ಗುಡಕೇಶ್‌ (33ಕ್ಕೆ 3) ಮತ್ತು ರೋಸ್ಟನ್ ಚೇಸ್ (29ಕ್ಕೆ 2) ಇಂಗ್ಲೆಂಡ್‌ ತಂಡವನ್ನು ಕಟ್ಟಿ ಹಾಕಲು ನೆರವಾದರು. ಇಂಗ್ಲೆಂಡ್‌ ಪರ ಫಿಲ್‌ ಸಾಲ್ಟ್‌ (30), ಜೇಕಬ್‌ ಬೆಥಲ್‌ (33) ಮತ್ತು ಸ್ಯಾಮ್‌ ಕರನ್‌ (ಔಟಾಗದೇ 43) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.