ನವದೆಹಲಿ, ಜ.1: ವಿಶ್ವ ಫುಟ್‌ಬಾಲ್ ಫೆಡರೇಷನ್‌ನ (ಫಿಫಾ) ರೆಫ್ರಿಗಳ(FIFA Referees) ಪಟ್ಟಿಗೆ ಒಬ್ಬ ಮಹಿಳೆ ಸೇರಿ ಭಾರತದ ಇನ್ನೂ ಮೂವರನ್ನು ಸೇರಿಸಲಾಗಿದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ತಿಳಿಸಿದೆ. ಒಟ್ಟು 5 ಮಂದಿ ಭಾರತೀಯರು(FIFA Match Officials 2026) ಸ್ಥಾನ ಪಡೆದರು. ಗುಜರಾತ್‌ನ ರಚನಾ ಕುಮಾರಿ ಅವರು ಫಿಫಾದ ಮಹಿಳಾ ರೆಫ್ರಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪುದುಚೇರಿಯ ಅಶ್ವಿನ್ ಕುಮಾರ್ ಮತ್ತು ದೆಹಲಿಯ ಆದಿತ್ಯ ಪುರಕಾಯಸ್ಥ ಅವರೂ ರೆಫ್ರಿಗಳ ಪಟ್ಟಿಗೆ ಸೇರಿದ್ದಾರೆ.
ಇದಕ್ಕೂ ಮುನ್ನ ಮುರಳೀಧರನ್ ಪಾಂಡುರಂಗನ್ (ಪುದುಚೇರಿ) ಮತ್ತು ಪೀಟರ್ ಕ್ರಿಸ್ಟೋಫರ್ (ಮಹಾರಾಷ್ಟ್ರ) ಅವರನ್ನು ಸಹಾಯಕ ರೆಫರಿಗಳಾಗಿ ಸೇರಿಸಿಕೊಳ್ಳಲಾಗಿತ್ತು. ಅಶ್ವಿನ್ ಮತ್ತು ಆದಿತ್ಯ ಮಲೇಷ್ಯಾದ ಕೌಲಾಲಂಪುರದಲ್ಲಿ ತಮ್ಮ AFC ರೆಫರಿ ಅಕಾಡೆಮಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. 2026 ರ ಫಿಫಾ ಪಟ್ಟಿಯಲ್ಲಿ ಭಾರತದ 19 ಪಂದ್ಯ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ.
2026 ರ FIFA ಅಂತರಾಷ್ಟ್ರೀಯ ಪಂದ್ಯ ಅಧಿಕಾರಿಗಳ ಪಟ್ಟಿಯಲ್ಲಿ ಭಾರತೀಯರು
ರೆಫರಿಗಳು: ವೆಂಕಟೇಶ್ ಆರ್, ಹರೀಶ್ ಕುಂದು, ಸೆಂಥಿಲ್ ನಾಥನ್ ಸೇಕರನ್, ಕ್ರಿಸ್ಟಲ್ ಜಾನ್, ಅಶ್ವಿನ್ ಕುಮಾರ್, ಆದಿತ್ಯ ಪುರಕಾಯಸ್ಥ, ರಂಜಿತಾ ದೇವಿ ಟೆಕ್ಚಾಮ್, ರಚನಾ ಹಸ್ಮುಖಭಾಯ್ ಕಮಾನಿ.
ಸಹಾಯಕ ರೆಫರಿಗಳು: ವೈರಮುತ್ತು ಪರಶುರಾಮನ್, ಸುಮಂತ ದತ್ತಾ, ಅರುಣ್ ಶಶಿಧರನ್ ಪಿಳ್ಳೈ, ಉಜ್ಜಲ್ ಹಲ್ಡರ್, ಮುರಳೀಧರನ್ ಪಾಂಡುರಂಗನ್, ದೀಪೇಶ್ ಮನೋಹರ್ ಸಾವಂತ್, ಸೌರವ್ ಸರ್ಕಾರ್, ಕ್ರಿಸ್ಟೋಫರ್ ಪೀಟರ್, ರಿಯೋಹ್ಲಾಂಗ್ ಧಾರ್ ಮತ್ತು ಎಲಂಗ್ಬಾಮ್ ದೇಬಾಲಾ ದೇವಿ.
ಫುಟ್ಸಾಲ್ ರೆಫರಿ: ವಿಶಾಲ್ ಮಹೇಂದ್ರಭಾಯಿ ವಾಜಾ.
2026ರ ವಿಶ್ವ ಕ್ರೀಡಾ ಕ್ಯಾಲೆಂಡರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಮುಖವಾಗಿ ಸ್ಥಾನ ಪಡೆದಿದೆ. 48 ತಂಡಗಳೊಂದಿಗೆ ನಡೆಯುವ ಈ ವಿಶ್ವಕಪ್ ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
FIFA World Cup 2026: ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಬ್ರೆಜಿಲ್, ಆಸ್ಟ್ರೇಲಿಯಾ
ವಿಜೇತ ತಂಡವು ₹452.06 ಕೋಟಿ ಬಹುಮಾನ ಪಡೆಯಲಿದೆ. ಟೂರ್ನಿಯು ಒಟ್ಟು ₹5,921 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. 2022ರಲ್ಲಿ ಕತಾರ್‌ನಲ್ಲಿ ನಡೆದ ಕೊನೆಯ ಟೂರ್ನಿಗಿಂತ ಶೇ 50ರಷ್ಟು (₹3,978 ಕೋಟಿ) ಬಹುಮಾನ ಮೊತ್ತ ಹೆಚ್ಚಳವಾಗಿದೆ.
ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು
ಅಮೆರಿಕ, ಮೆಕ್ಸಿಕೊ, ಕೆನಡಾ (ಆತಿಥೇಯ ರಾಷ್ಟ್ರವಾಗಿ ನೇರ ಅರ್ಹತೆ).
ಆಫ್ರಿಕಾ ಖಂಡ: ಅಲ್ಜೀರಿಯಾ, ಕೇಪ್ ವರ್ಡೆ, ಈಜಿಪ್ಟ್, ಘಾನಾ, ಮೊರಾಕೊ, ಟುನೀಶಿಯಾ.
ಏಷ್ಯಾ ಖಂಡ: ಆಸ್ಟ್ರೇಲಿಯಾ, ಇರಾನ್, ಜಪಾನ್, ಜೋರ್ಡಾನ್, ದಕ್ಷಿಣ ಕೊರಿಯಾ, ಉಜ್ಬೇಕಿಸ್ತಾನ್.
ಓಷಿಯಾನಿಯಾ: ನ್ಯೂಜಿಲೆಂಡ್.
ದಕ್ಷಿಣ ಅಮೆರಿಕಾ: ಅರ್ಜೆಂಟೀನಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ಪರಾಗ್ವೆ, ಉರುಗ್ವೆ.