ಮುಂಬಯಿ: ಕೋಲ್ಕತ್ತಾ ನೈಟ್ ರೈಡರ್ಸ್(KKR) ತಂಡವು 2026 ರ ಐಪಿಎಲ್(IPL 2026)ಗೆ ಮುಂಚಿತವಾಗಿ ನ್ಯೂಜಿಲ್ಯಾಂಡ್ ತಂಡದ ಮಾಜಿ ವೇಗಿ ಟಿಮ್ ಸೌಥಿ(Tim Southee) ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. 2025 ರ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸೌಥಿ, ಇಂಗ್ಲೆಂಡ್‌ನ ಟೆಸ್ಟ್ ತಂಡದ ಬೌಲಿಂಗ್ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಭಿಷೇಕ್ ನಾಯರ್ ನೇತೃತ್ವದ ಕೆಕೆಆರ್ ಕೋಚಿಂಗ್ ಗುಂಪಿಗೆ ಸೌಥಿ ಸೇರಿದ್ದಾರೆ. ಗುರುವಾರವಷ್ಟೇ ಫ್ರಾಂಚೈಸಿ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿತ್ತು. 36 ವರ್ಷ ವಯಸ್ಸಿನ ಸೌಥಿ 2021, 2022 ಮತ್ತು 2023 ರಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ತಾನು ಆಡಿದ ತಂಡಕ್ಕೆ ಕೋಚ್ ಆಗಿ ಮತ್ತೆ ಅದೇ ಪ್ರಾಂಚೈಸಿ ಜತೆ ನಂಟು ಮುಂದುವರಿಸಿದ್ದಾರೆ.
ಸೌಥಿ 700 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಕೆಟ್‌ಗಳು, 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮತ್ತು 2019 ರ ODI ವಿಶ್ವಕಪ್ ಫೈನಲ್ ಮತ್ತು 2021 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
"ಈ ಬಾರಿ ಕೋಚಿಂಗ್ ಹುದ್ದೆಯಲ್ಲಿ ಟಿಮ್ ಸೌಥಿ ಅವರನ್ನು ಕೆಕೆಆರ್ ಕುಟುಂಬಕ್ಕೆ ಮರಳಿ ಸ್ವಾಗತಿಸಲು ನಮಗೆ ಸಂತೋಷವಾಗಿದೆ. ಅವರ ಅಪಾರ ಅನುಭವ ಮತ್ತು ತಾಂತ್ರಿಕ ಪರಿಣತಿಯು ನಮ್ಮ ಬೌಲಿಂಗ್ ಘಟಕವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವರ ನಾಯಕತ್ವದ ಗುಣಗಳು ಮತ್ತು ಶಾಂತ ವಿಧಾನವು ಅವರನ್ನು ನಮ್ಮ ಯುವ ಬೌಲರ್‌ಗಳಿಗೆ ಆದರ್ಶ ಮಾರ್ಗದರ್ಶಕರನ್ನಾಗಿ ಮಾಡುತ್ತದೆ" ಎಂದು ಸಿಇಒ ವೆಂಕಿ ಮೈಸೂರು ಹೇಳಿದರು.
"ಮೂರು ಬಾರಿಯ ಚಾಂಪಿಯನ್‌ಗಳೊಂದಿಗಿನ ತನ್ನ ಒಡನಾಟದ ಸ್ವಾಭಾವಿಕ ವಿಸ್ತರಣೆಯಂತೆ ಈ ನಡೆ ಕಂಡುಬಂದಿದೆ ಎಂದು ಸೌಥಿ ಹೇಳಿದರು.
ಇದನ್ನೂ ಓದಿ ಜೂನಿಯರ್ ಹಾಕಿ ವಿಶ್ವಕಪ್; 18 ಸದಸ್ಯರನ್ನೊಳಗೊಂಡ ಭಾರತ ತಂಡ ಪ್ರಕಟ
"ಕೆಕೆಆರ್ ಯಾವಾಗಲೂ ನನಗೆ ಮನೆಯಂತೆ ಭಾಸವಾಗುತ್ತಿದೆ, ಮತ್ತು ಈ ಹೊಸ ಪಾತ್ರದಲ್ಲಿ ಮರಳಲು ಇದು ಗೌರವವಾಗಿದೆ. ಫ್ರಾಂಚೈಸಿ ಅದ್ಭುತ ಸಂಸ್ಕೃತಿ, ಉತ್ಸಾಹಭರಿತ ಅಭಿಮಾನಿಗಳು ಮತ್ತು ಉತ್ತಮ ಆಟಗಾರರ ಗುಂಪನ್ನು ಹೊಂದಿದೆ. ಬೌಲರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಮತ್ತು ಐಪಿಎಲ್ 2026 ರಲ್ಲಿ ತಂಡವು ಯಶಸ್ಸನ್ನು ಸಾಧಿಸಲು ಸಹಾಯ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಸೌಥಿ ಹೇಳಿದರು.
ಕೆಕೆಆರ್ ಜೊತೆಗಿನ ತನ್ನ ಹೊಸ ಪಾತ್ರದ ಬಗ್ಗೆ ಮಾತಡಿದ ವ್ಯಾಟ್ಸನ್, "ಕೋಲ್ಕತ್ತಾ ನೈಟ್ ರೈಡರ್ಸ್‌ನಂತಹ ಐಕಾನಿಕ್ ಫ್ರಾಂಚೈಸಿಯ ಭಾಗವಾಗಿರುವುದು ಒಂದು ದೊಡ್ಡ ಗೌರವ. ಕೆಕೆಆರ್ ಅಭಿಮಾನಿಗಳ ಉತ್ಸಾಹ ಮತ್ತು ತಂಡದ ಶ್ರೇಷ್ಠತೆಯ ಬದ್ಧತೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ಕೋಲ್ಕತ್ತಾಗೆ ಮತ್ತೊಂದು ಪ್ರಶಸ್ತಿಯನ್ನು ತರಲು ಸಹಾಯ ಮಾಡಲು ಕೋಚಿಂಗ್ ಗುಂಪು ಮತ್ತು ಆಟಗಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ" ಎಂದು ಅವರು ಹೇಳಿದರು.