ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ವಿರುದ್ಧ ಅರ್ಧಶತಕ ಬಾರಿಸಿ ಎರಡು ದಾಖಲೆ ಬರೆದ ಟಾಮ್‌ ಲ್ಯಾಥಮ್

Tom Latham: ನ್ಯೂಜಿಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅವರು, ಒಟ್ಟು 110 ಪಂದ್ಯಗಳ 195 ಇನ್ನಿಂಗ್ಸ್‌ಗಳಲ್ಲಿ 9,515 ರನ್‌ಗಳನ್ನು ಕಲೆಹಾಕಿದ್ದಾರೆ.

Tom Latham

ಕ್ರೈಸ್ಟ್‌ಚರ್ಚ್‌, ನ.27: ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಟಾಮ್ ಲ್ಯಾಥಮ್ ಅವರು ಮಾಜಿ ನಾಯಕ ಹಾಗೂ ಆಟಗಾರ ಬ್ರೆಂಡನ್ ಮೆಕಲಮ್ ಅವರ ರನ್ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿ, ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರು.

ನ್ಯೂಜಿಲೆಂಡ್ ತಂಡವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಮುನ್ನಡೆಸಿದ್ದ ಮೆಕಲಮ್, 2004 ರಿಂದ 2016 ರವರೆಗೆ 101 ಪಂದ್ಯಗಳನ್ನು ಆಡಿ, 176 ಇನ್ನಿಂಗ್ಸ್‌ಗಳಲ್ಲಿ 6,453 ರನ್‌ಗಳನ್ನು ಗಳಿಸಿದ್ದರು. ಲೇಥಮ್ ಅವರು ಇಲ್ಲಿಯವರೆಗೆ 97 ಪಂದ್ಯಗಳ 174 ಇನ್ನಿಂಗ್ಸ್‌ಗಳಲ್ಲಿ 6510* ರನ್‌ಗಳನ್ನು ಗಳಿಸಿದ್ದಾರೆ.

ಭಾರತದ ವಿರುದ್ಧದ ತವರು ಸರಣಿಯಲ್ಲಿ ಮೆಕಲಮ್ ಅವರ ಒಟ್ಟು ರನ್‌ಗಳ ಸಂಖ್ಯೆಯನ್ನು ಮೀರಿಸಲು ಲೇಥಮ್‌ಗೆ ನಾಲ್ಕು ರನ್‌ಗಳ ಅಗತ್ಯವಿತ್ತು. ಆದರೆ, ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿಯೂ ಅವರು ಖಾತೆ ತೆರೆಯಲು ವಿಫಲರಾದರು. ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ, ಲೇಥಮ್ ತಮ್ಮ ಎರಡನೇ ಎಸೆತದಲ್ಲಿ ಖಾತೆ ತೆರೆದರು. ನಂತರ ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಇನ್ನೂ ಎರಡು ರನ್‌ಗಳನ್ನು ಸೇರಿಸುವ ಮೂಲಕ, ಒಟ್ಟು 9 ಎಸೆತಗಳಲ್ಲಿ 4 ರನ್‌ಗಳನ್ನು ತಲುಪಿದರು. ಈ ಮೂಲಕ ದಾಖಲೆ ಬರೆದರು.

ಮೊದಲ 33 ಟೆಸ್ಟ್ ಪಂದ್ಯಗಳನ್ನು ವಿಭಿನ್ನ ಸ್ಥಳಗಳಲ್ಲಿ ಆಡಿ ದಾಖಲೆ ನಿರ್ಮಿಸಿದ ಜೈಸ್ವಾಲ್‌

ನ್ಯೂಜಿಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅವರು, ಒಟ್ಟು 110 ಪಂದ್ಯಗಳ 195 ಇನ್ನಿಂಗ್ಸ್‌ಗಳಲ್ಲಿ 9,515 ರನ್‌ಗಳನ್ನು ಕಲೆಹಾಕಿದ್ದಾರೆ. ಇವರ ನಂತರದ ಸ್ಥಾನಗಳಲ್ಲಿ ರಾಸ್ ಟೇಲರ್ ಮತ್ತು ಸ್ಟೀಫನ್ ಫ್ಲೆಮಿಂಗ್ ಇದ್ದು, ಅವರು ಕ್ರಮವಾಗಿ 7,683 ಮತ್ತು 7,172 ರನ್‌ಗಳನ್ನು ಗಳಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 3 ಸಾವಿರ ರನ್‌ಗಳನ್ನು ಪೂರೈಸಿದ ನ್ಯೂಜಿಲೆಂಡ್‌ನ ಎರಡನೇ ಬ್ಯಾಟರ್ ಎಂಬ ಹಿರಿಮೆಗೂ ಲ್ಯಾಥಮ್‌ ಪಾತ್ರರಾದರು. ಈ ವೇಳೆ ಅವರು ಕೇನ್ ವಿಲಿಯಮ್ಸನ್ ಅವರ ದಾಖಲೆಯನ್ನು ಹಿಂದಿದ್ದರು. ಪಂದ್ಯದಲ್ಲಿ ಲ್ಯಾಥಮ್‌ 59 ರನ್‌ ಗಳಿಸಿ ಅರ್ಧಶತಕ ಪೂರ್ತಿಗೊಳಿಸಿದರು.