ವಿಶಾಖಪಟ್ಟಣಂ, ಡಿ. 5: ಭಾರತ ಮತ್ತು ದಕ್ಷಿಣ ಆಫ್ರಿಕಾ(India vs South Africa 3rd ODI) ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಶನಿವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಸರಣಿ ನಿರ್ಣಾಯಕ ಪಂದ್ಯವಾದ ಕಾರಣ ಈ ಪಂದ್ಯ ಹೈವೋಲ್ಟೇನ್‌ನಿಂದ ಕೂಡಿರುವ ನಿರೀಕ್ಷೆಯಿದೆ. ಸಂಜೆಯ ವೇಳೆ ಇಬ್ಬನಿ ಕಾಟ ಇರುವ ಕಾರಣ ಟಾಸ್ ಪಾತ್ರ ನಿರ್ಣಾಯಕ.
2021-22ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ದ್ವಿಪಕ್ಷೀಯ ಪ್ರವಾಸದಲ್ಲಿ ಭಾರತ ಕೊನೆಯ ಬಾರಿಗೆ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಸೋತಿತ್ತು. ಆದರೆ, 1986-87ರಲ್ಲಿ ಪಾಕಿಸ್ತಾನ ತಂಡ ಟೆಸ್ಟ್‌ನಲ್ಲಿ 1-0 ಮತ್ತು ಏಕದಿನದಲ್ಲಿ 5-1 ಅಂತರದಿಂದ ಸೋತ ನಂತರ ಭಾರತ ಪ್ರವಾಸದ ಎರಡೂ ಸರಣಿಗಳನ್ನು ಸೋತಿಲ್ಲ. ಇದೀಗ ದಕ್ಷಿಣ ಆಫ್ರಿಕಾ ತಂಡವು ಅಪರೂಪದ ಡಬಲ್ ಸಾಧನೆ ಮಾಡುವ ಅವಕಾಶದೊಂದಿಗೆ ವಿಶಾಖಪಟ್ಟಣದಲ್ಲಿ ಕಣಕ್ಕಿಳಿಯಲಿದೆ. ಭಾರತ ಕೊನೆಯ ಬಾರಿಗೆ ಮಾರ್ಚ್ 2023 ರಲ್ಲಿ ಇಲ್ಲಿ ಆಡಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 117 ರನ್‌ಗಳಿಗೆ ಆಲೌಟ್ ಆಗಿತ್ತು.
ಟಾಸ್ ಗೆದ್ದವರು ಅರ್ಧ ಪಂದ್ಯ ಗೆದ್ದಂತೆ
ಭಾರತದಲ್ಲಿ ಏಕದಿನ ಪಂದ್ಯಗಳಲ್ಲಿ ಇಬ್ಬನಿ ದೊಡ್ಡ ಪಾತ್ರ ವಹಿಸುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿತ್ತು. ಚೇಸಿಂಗ್ ನಡೆಸುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ಭಾರತ 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಸತತ 20 ಟಾಸ್ ಸೋಲು ಕಂಡಿದೆ. ಈ ಮಧ್ಯೆ ಹಲವು ನಾಯಕರು ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆದರೂ ಟಾಸ್ ಗೆಲುವಿನ ಲಕ್ ಮಾತ್ರ ಒಲಿದಿಲ್ಲ.
ಇದನ್ನೂ ಓದಿ ವಿಶಾಖಪಟ್ಟಣಂ ಪಿಚ್ ಯಾರಿಗೆ ಸಹಕಾರಿ?; ಸಾಂಭವ್ಯ ಆಡುವ ಬಳಗ ಹೀಗಿದೆ
10 ವರ್ಷದ ಬಳಿಕ ಸರಣಿ ಗೆಲುವಿನ ವಿಶ್ವಾಸದಲ್ಲಿ ಬವುಮಾ ಪಡೆ
ದಕ್ಷಿಣ ಆಫ್ರಿಕಾ ಆಫ್ರಿಕಾ ತಂಡ ಭಾರತದಲ್ಲಿ 10 ವರ್ಷಗಳ ಬಳಿಕ ಏಕದಿನ ಸರಣಿ ಗೆಲುವಿನ ಮೇಲೆ ಕಣಿಟ್ಟಿದೆ. ಕೊನೆಯ ಬಾರಿಗೆ ಹರಿಣ ಪಡೆ 2015-16ರಲ್ಲಿ 5 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದು ಬೀಗಿತ್ತು. ಇದಾದ ಬಳಿಕ ಸರಣಿ ಗೆದ್ದಿರಲಿಲ್ಲ.
ಬೌಲಿಂಗ್ ಚಿಂತೆ
ಭಾರತದ ಬ್ಯಾಟಿಂಗ್ ವಿಭಾಗದ ತುಂಬಾನೆ ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ ಸತತ ಶತಕ, ಮಧ್ಯಮ ಕ್ರಮಾಂಕದಲ್ಲಿ ನಾಯಕ ರಾಹುಲ್ ಬಿರುಸಿನ ಆಟ, ಕಳೆದ ಪಂದ್ಯದ ಶತಕ ವೀರ ಋತುರಾಜ್ ಗಾಯಕ್ವಾಡ್ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಸದ್ಯಕ್ಕೆ ತಂಡಕ್ಕೆ ಹಿನ್ನಡೆಯಾಗುತ್ತಿರುವುದು ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಮಿ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಪ್ರಸಿದ್ಧ್ ಕೃಷ್ಣ ದುಬಾರಿಯಾಗುತ್ತಿದ್ದಾರೆ. ಹರ್ಷಿತ್ ರಾಣಾ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಅರ್ಶದೀಪ್ ಸಿಂಗ್ ಅಡ್ಡಿಯಿಲ್ಲ. ಈ ಪಂದ್ಯಕ್ಕೆ ಪ್ರಸಿದ್ಧ್ ಕೃಷ್ಣ ಕೈಬಿಟ್ಟು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅವರಿಗೆ ತವರಿನ ಪಂದ್ಯ ಕೂಡ ಹೌದು.