ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದಿನಿಂದ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್; ಭಾರತಕ್ಕೆ ಯುಎಇ ಎದುರಾಳಿ

Asia Cup U19: ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ತಂಡದಲ್ಲಿ ಭಾರತ, ಪಾಕಿಸ್ತಾ, ಯುನೈಟೆಸಡ್‌ ಅರಬ್‌ ಎಮಿರೇಟ್ಸ್‌ ಮತ್ತು ಮಲೇಷ್ಯಾ ತಂಡಗಳು ಸ್ಥಾನ ಪಡೆದರೆ. ಬಿ ತಂಡದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ.

U19 Men's Asia Cup 2025

ದುಬೈ, ಡಿ.12: ಅಂಡರ್‌-19 ಏಷ್ಯಾಕಪ್‌(Asia Cup U19 2025) ಟೂರ್ನಿಗೆ ಇಂದು(ಡಿ.12) ಅಧಿಕೃತ ಚಾಲನೆ ಸಿಗಲಿದೆ. ಡಿಸೆಂಬರ್ 21 ರವರೆಗೆ ಪಂದ್ಯಾವಳಿ ನಡೆಯಲಿದೆ. ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಭಾರತ ತಂಡದವರು ಹಸ್ತಲಾಘವ ಮಾಡುವರೇ ಎಂಬ ಕುತೂಹಲ ಕೂಡ ಗರಿಗೆದರಿದೆ. ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಇಂದು ನಡೆಯುವ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಎದುರಿಸಲಿದೆ. ಭಾನುವಾರ ಪಾಕಿಸ್ತಾನದ ಎದುರು ಕಣಕ್ಕಿಳಿಯಲಿದೆ.

ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ತಂಡದಲ್ಲಿ ಭಾರತ, ಪಾಕಿಸ್ತಾ, ಯುನೈಟೆಸಡ್‌ ಅರಬ್‌ ಎಮಿರೇಟ್ಸ್‌ ಮತ್ತು ಮಲೇಷ್ಯಾ ತಂಡಗಳು ಸ್ಥಾನ ಪಡೆದರೆ. ಬಿ ತಂಡದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ.

ಆಯುಷ್ ಅವರು ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘವಾಗಿ ಆಡಿದ್ದರು. ಎರಡು ಶಕತ ಮತ್ತು ಒಂದು ಅರ್ಧಶತಕ ಗಳಿಸಿದ್ದರು. ಸೂರ್ಯವಂಶಿ ಅವರು ಈ ಟೂರ್ನಿಯ ಇತಿಹಾಸದಲ್ಲಿಯೇ ಶತಕ ಗಳಿಸಿದ ಕಿರಿಯ ವಯಸ್ಸಿನ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.ಇದೀಗ ಏಷ್ಯಾ ಕಪ್‌ನಲ್ಲೂ ಅದೇ ಫಾರ್ಮ್‌ ಮುಂದುವರೆಸುವ ಭರವಸೆಯಿದೆ.

ಇದನ್ನೂ ಓದಿ ಭಾರತ ವಿರುದ್ಧ ಗೆದ್ದು ದಾಖಲೆ ಬರೆದ ದಕ್ಷಿಣ ಆಫ್ರಿಕಾ; ವಿಶ್ವದ ಮೊದಲ ತಂಡ

ಭಾರತ ಅಂಡರ್-19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್, ಯುವರಾಜ್ ಗೋಹಿಲ್, ಕಾನಿಷ್ಕ್ ಚೌಹಾಣ್, ಖಿಲಾನ್ ಎ ಪಟೇಲ್, ನಮನ್ ಪುಷ್ಪಕ್, ಡಿ ದೀಪೇಶ್, ಹೆನಿಲ್ ಸಿಂಗ್ ಪಟೇಲ್, ಕಿಶನ್ ಕುಮಾರ್ ಸಿಂಗ್ (ಫಿಟ್‌ನೆಸ್‌), ಉದ್ಧವ್ ಮೋಹನ್ ಮತ್ತು ಐರಾನ್ ಜಾರ್ಜ್

ಭಾರತ ತಂಡ

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ),ವೈಭವ್ ಸೂರ್ಯವಂಶಿ, ವೇದಾಂತ ತ್ರಿವೇದಿ, ಅಭಿಗ್ಯಾನ್ ಕುಂದು (ವಿಕೆಟ್‌ಕೀಪರ್), ಹರವಂಶ್ ಸಿಂಗ್ (ವಿಕೆಟ್‌ಕೀಪರ್), ಯುವರಾಜ್ ಗೋಹಿಲ್, ಕನಿಷ್ಕ ಚೌಹಾಣ, ಖಿಲಾನ್ ಎ ಪಟೇಲ್, ನಮನ್ ಪುಷ್ಪಕ್, ಡಿ. ದೀಪೇಶ್, ಹೆನಿಲ್ ಪಟೇಲ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಆ್ಯರನ್ ಜಾರ್ಜ್.

ನೇರ ಪ್ರಸಾರ: ಸೋನಿ ನೆಟ್‌ವರ್ಕ್

ಪಂದ್ಯ ಆರಂಭ: ಬೆಳಗ್ಗೆ 10:30ಕ್ಕೆ

ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

ಡಿಸೆಂಬರ್ 12, 2025:

ಮೊದಲ ಪಂದ್ಯ, ಗುಂಪು ಎ – ಭಾರತ U19 vs UAE U19, ಐಸಿಸಿ ಅಕಾಡೆಮಿ ಮೈದಾನ

2ನೇ ಪಂದ್ಯ, ಗುಂಪು ಎ- ಪಾಕಿಸ್ತಾನ U19 vs ಮಲೇಷ್ಯಾ U19, ಸೆವೆನ್ಸ್ ಕ್ರೀಡಾಂಗಣ, ದುಬೈ

ಡಿಸೆಂಬರ್ 13, 2025

3ನೇ ಪಂದ್ಯ, ಗುಂಪು ಬಿ – ಅಫ್ಘಾನಿಸ್ತಾನ U19 vs ಬಾಂಗ್ಲಾದೇಶ U19, ಐಸಿಸಿ ಅಕಾಡೆಮಿ ಮೈದಾನ, ದುಬೈ

4ನೇ ಪಂದ್ಯ, ಗುಂಪು ಬಿ- ಶ್ರೀಲಂಕಾ U19 vs ನೇಪಾಳ U19 , ಸೆವೆನ್ಸ್ ಕ್ರೀಡಾಂಗಣ, ದುಬೈ

ಡಿಸೆಂಬರ್ 14, 2025

5ನೇ ಪಂದ್ಯ, ಗುಂಪು ಎ – ಭಾರತ U19 vs ಪಾಕಿಸ್ತಾನ U19, ಐಸಿಸಿ ಅಕಾಡೆಮಿ ಮೈದಾನ

6ನೇ ಪಂದ್ಯ, ಗುಂಪು ಎ – ಯುಎಇ U19 vs ಮಲೇಷ್ಯಾ ಯು19, ಸೆವೆನ್ಸ್ ಕ್ರೀಡಾಂಗಣ, ದುಬೈ

ಡಿಸೆಂಬರ್ 15, 2025

7ನೇ ಪಂದ್ಯ, ಗುಂಪು ಬಿ – ಅಫ್ಘಾನಿಸ್ತಾನ U19 vs ಶ್ರೀಲಂಕಾ U19, ಐಸಿಸಿ ಅಕಾಡೆಮಿ ಮೈದಾನ, ದುಬೈ:

8ನೇ ಪಂದ್ಯ, ಗುಂಪು ಬಿ – ಬಾಂಗ್ಲಾದೇಶ U19 vs ನೇಪಾಳ U19, ಸೆವೆನ್ಸ್ ಕ್ರೀಡಾಂಗಣ, ದುಬೈ

ಡಿಸೆಂಬರ್ 16, 2025

9ನೇ ಪಂದ್ಯ, ಗುಂಪು ಎ –ಪಾಕಿಸ್ತಾನ U19 vs ಯುಎಯಿ U19, ಐಸಿಸಿ ಅಕಾಡೆಮಿ ಮೈದಾನ, ದುಬೈ

10ನೇ ಪಂದ್ಯ, ಗುಂಪು ಎ – ಭಾರತ U19 vs ಮಲೇಷ್ಯಾ U19, ಸೆವೆನ್ಸ್ ಕ್ರೀಡಾಂಗಣ, ದುಬೈ

ಡಿಸೆಂಬರ್ 17, 2025

11ನೇ ಪಂದ್ಯ, ಗುಂಪು ಬಿ – ಬಾಂಗ್ಲಾದೇಶ U19 vs ಶ್ರೀಲಂಕಾ U19, ಐಸಿಸಿ ಅಕಾಡೆಮಿ ಮೈದಾನ, ದುಬೈ

12ನೇ ಪಂದ್ಯ, ಗುಂಪು ಬಿ – ಅಫ್ಘಾನಿಸ್ತಾನ U19 vs ನೇಪಾಳ U19, ಸೆವೆನ್ಸ್ ಕ್ರೀಡಾಂಗಣ, ದುಬೈ

ಡಿಸೆಂಬರ್ 19, 2025

ಸೆಮಿಫೈನಲ್ 1 – ಐಸಿಸಿ ಅಕಾಡೆಮಿ ಮೈದಾನ, ದುಬೈ: ಎ1 vs ಬಿ2

ಸೆಮಿಫೈನಲ್ 2 – ದಿ ಸೆವೆನ್ಸ್ ಕ್ರೀಡಾಂಗಣ, ದುಬೈ: ಬಿ1 vs ಎ2

ಭಾನುವಾರ, ಡಿಸೆಂಬರ್ 21, 2025

ಫೈನಲ್