ನ್ಯೂಯಾರ್ಕ್: ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್ ಟೆನಿಸ್ ಪಂದ್ಯಾವಳಿಯಾಗಿರುವ ಯುಎಸ್ ಓಪನ್‌ನಲ್ಲಿ(US Open 2025) ಅಗ್ರ ಆಟಗಾರರಾದ ನೋವಾಕ್ ಜೊಕೋವಿಕ್(Djokovic), ಅರಿನಾ ಸಬಲೆಂಕಾ(Sabalenka ), ಜಾಸ್ಮಿನ್ ಪೌಲಿನಿ, ಜೆಸ್ಸಿಕಾ ಪೆಗುಲಾ ಗೆಲುವಿನ ಶುಭಾರಂಭ ಕಂಡಿದ್ದಾರೆ. ಆದರೆ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್(Daniil Medvedev) ಮೊದಲ ಸುತ್ತಿನಲ್ಲಿ ಸೋಲಿನ ಆಘಾತ ಕಂಡು ಟೂರ್ನಿಯಿಂದ ಹೊರಬಿದಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೋ, ಲರ್ನರ್ ಟಿಯೆನ್‌ರನ್ನು 6-1, 7-6(3), 6-2 ಸೆಟ್‌ಗಳಿಂದ ಸೋಲಿಸಿ, ದಾಖಲೆಯ 25 ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲುವಿನ ಓಟವನ್ನು ಮುಂದುವರಿಸಿದರು. 38 ವರ್ಷದ ಜೊಕೋ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ತನ್ನ 80 ನೇ ಗೆಲುವನ್ನು ಖಚಿತಪಡಿಸಿಕೊಳ್ಳಲು ದೈಹಿಕ ಸಮಸ್ಯೆಗಳ ಮೂಲಕ ಹೋರಾಡಿದರು.
ಈ ಗೆಲುವಿನೊಂದಿಗೆ ಜೊಕೊವಿಕ್ ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಸತತ 75 ಆರಂಭಿಕ ಸುತ್ತಿನ ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರಲ್ಲಿ 55 ಗೆಲುವುಗಳು ನೇರ ಸೆಟ್‌ಗಳಲ್ಲಿ ಬಂದಿದೆ.
ಮೆಡ್ವೆಡೇವ್ ಔಟ್
13ನೇ ಶ್ರೇಯಾಂಕದ ರಷ್ಯಾದ ಅನುಭವಿ ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಅವರು ಶ್ರೇಯಾಂಕ ರಹಿತ ಆಟಗಾರ ಫ್ರಾನ್ಸ್‌ನ ಬೆಂಜಮಿನ್ ಬೊಂಝಿ ವಿರುದ್ಧ 5 ಸೆಟ್‌ಗಳ ಮ್ಯಾರಥ್ಯಾನ್ ಹೋರಾಟ ನಡೆಸಿದರೂ ಸೋಲು ಕಂಡರು. 3 ಗಂಟೆ 45 ನಿಮಿಷಗಳ ಹೋರಾಟದಲ್ಲಿ ಬೊಂಝಿ 6-3, 7-5, 6-7(5), 0-6, 6-4 ಸೆಟ್‌ಗಳಿಂದ ಪಂದ್ಯವನ್ನು ವಶಪಡಿಸಿಕೊಂಡರು.
ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಅರಿನಾ ಸಬಲೆಂಕಾ ಸ್ವಿಟ್ಜರ್ಲೆಂಡ್‌ನ ರೆಬೆಕಾ ಮಸರೋವಾ ಅವರನ್ನು 7-5, 6-1 ಅಂತರದಿಂದ ಸೋಲಿಸುವ ಮೂಲಕ ತಮ್ಮ ಯುಎಸ್ ಓಪನ್ ಪ್ರಶಸ್ತಿ ರಕ್ಷಣೆಯನ್ನು ಅದ್ಭುತವಾಗಿ ಆರಂಭಿಸಿದರು.
ಆತಿಥೇಯ ದೇಶದ ಜೆಸ್ಸಿಕಾ ಪೆಗುಲಾ ಅವರು ಮಾಯರ್ ಶೆರೀಫ್ ವಿರುದ್ಧ 6-0, 6-4ನೇರ ಸೆಟ್‌ಗಳಿಂದ ಗೆದ್ದರು. ಮತ್ತೊಂದು ಪಂದ್ಯದಲ್ಲಿ ಜಾಸ್ಮಿನ್ ಪೌಲಿನಿ avru ಡೆಸ್ಟನೀ ಐವಾರನ್ನು 6-2, 7-6(7-4) ಅಂತರದಿಂದ ಮಣಿಸಿದರು.
ಇದನ್ನೂ ಓದಿ US Open 2025: ಯುಎಸ್ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.2 ಆಟಗಾರ್ತಿ ಪೌಲಾ ಬಡೋಸಾ