ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Open 2025: ಯುಎಸ್‌ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.2 ಆಟಗಾರ್ತಿ ಪೌಲಾ ಬಡೋಸಾ

Paula Badosa: ಕಳೆದ ಕೆಲವು ತಿಂಗಳಿನಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಬಡೋಸಾ ಕೊನೆಯ ಬಾರಿಗೆ ವಿಂಬಲ್ಡನ್‌ನಲ್ಲಿ ಆಡಿದ್ದರು. ಅಲ್ಲಿ ಅವರು ಮೊದಲ ಸುತ್ತಿನ ಸೋಲನ್ನು ಅನುಭವಿಸಿದರು. ಬಡೋಸಾ ಬ್ರಿಟನ್‌ನ ಜ್ಯಾಕ್ ಡ್ರೇಪರ್ ಅವರೊಂದಿಗೆ ಟೂರ್ನಮೆಂಟ್‌ನ ಮಿಶ್ರ ಡಬಲ್ಸ್ ಸ್ಪರ್ಧೆಯಿಂದಲೂ ಹಿಂದೆ ಸರಿಯಬೇಕಾಯಿತು.

ನ್ಯೂಯಾರ್ಕ್‌: ಮಾಜಿ ನಂ.2 ಆಟಗಾರ್ತಿ, ಸ್ಪೇನ್‌ನ ಪೌಲಾ ಬಡೋಸಾ(Paula Badosa) ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ವರ್ಷಾಂತ್ಯದ ಯುಎಸ್‌ ಓಪನ್‌(US Open) ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಪಂದ್ಯಾವಳಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಬಡೋಸಾ ಹಿಂದೆ ಸರಿದ ಕಾರಣ ಸ್ವಿಟ್ಜರ್ಲೆಂಡ್‌ನ ಜಿಲ್ ಟೀಚ್‌ಮನ್ (Jil Teichmann) ಆಗಸ್ಟ್ 24 ರಂದು ಪ್ರಾರಂಭವಾಗುವ ಯುಎಸ್ ಓಪನ್‌ನ ಮುಖ್ಯ ಸುತ್ತಿಗೆ ಪ್ರವೇಶಿಸಲಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಬಡೋಸಾ ಕೊನೆಯ ಬಾರಿಗೆ ವಿಂಬಲ್ಡನ್‌ನಲ್ಲಿ ಆಡಿದ್ದರು. ಅಲ್ಲಿ ಅವರು ಮೊದಲ ಸುತ್ತಿನ ಸೋಲನ್ನು ಅನುಭವಿಸಿದರು. ಬಡೋಸಾ ಬ್ರಿಟನ್‌ನ ಜ್ಯಾಕ್ ಡ್ರೇಪರ್ ಅವರೊಂದಿಗೆ ಟೂರ್ನಮೆಂಟ್‌ನ ಮಿಶ್ರ ಡಬಲ್ಸ್ ಸ್ಪರ್ಧೆಯಿಂದಲೂ ಹಿಂದೆ ಸರಿಯಬೇಕಾಯಿತು.

ವಿಶ್ವದ ಅಗ್ರಮಾನ್ಯ ಟೆನಿಸಿಗರ ಅಖಾಡವಾಗಿರುವ ಯುಎಸ್‌ ಓಪನ್‌ ಯುಎಸ್‌ ಓಪನ್‌ ಆಗಸ್ಟ್‌ 24ರಂದು ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿದೆ. ವಿಶ್ವ ನಂ.1 ಟೆನಿಸ್‌ ಆಟಗಾರ ಜಾನಿಕ್‌ ಸಿನ್ನರ್‌, ಕಾರ್ಲೊಸ್‌ ಅಲ್ಕರಾಜ್‌, ಸಲಬೆಂಕಾ, ಜೋಕೊ, ಸ್ವಿಯಾಟೆಕ್‌ ಮತ್ತು ಕೊಕೊ ಗಾಫ್‌ ಈ ಬಾರಿಯ ನೆಚ್ಚಿನ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.

ದಾಖಲೆಯ 789 ಕೋ. ರೂ. ಬಹುಮಾನ

ಈ ವರ್ಷದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌(US Open) ಟೆನಿಸ್‌ ಕೂಟದಲ್ಲಿ ದಾಖಲೆಯ ಪ್ರಶಸ್ತಿ ಮೊತ್ತವನ್ನು ಪ್ರಕಟಿಸಲಾಗಿದೆ. ಒಟ್ಟು ಬಹುಮಾನ ಮೊತ್ತ 90 ಮಿಲಿಯನ್‌ ಡಾಲರ್‌(789 ಕೋಟಿ ರೂ.) ತಲುಪಿದೆ. ಇದು ಟೆನಿಸ್‌ ಇತಿಹಾಸದಲ್ಲೇ ಗರಿಷ್ಠ ಬಹುಮಾನ ಮೊತ್ತವಾಗಿದೆ ಎಂದು ಅಮೆರಿಕ ಟೆನಿಸ್‌ ಸಂಸ್ಥೆ ತಿಳಿಸಿದೆ. ಕಳೆದ ವರ್ಷ 2024ರಲ್ಲಿ 75 ಮಿಲಿಯನ್‌ ಡಾಲರ್‌(629 ಕೋ. ರೂ.) ನೀಡಲಾಗಿತ್ತು.

ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಚಾಂಪಿಯನ್‌ಗಳು ತಲಾ 5 ಮಿಲಿಯನ್ ಡಾಲರ್‌(43.85 ಕೋಟಿ ರೂ.)ಗಳನ್ನು ಪಡೆಯಲಿದ್ದಾರೆ. ಇದು ಹಿಂದಿನ ವರ್ಷದ 3.6 ಮಿಲಿಯನ್ ಡಾಲರ್ ಪಾವತಿಗಿಂತ 39 ಪ್ರತಿಶತದಷ್ಟು ಹೆಚ್ಚಾಗಿದೆ. ರನ್ನರ್-ಅಪ್‌ಗೆ 2.5 ಮಿಲಿಯನ್ ಡಾಲರ್(21 ಕೋಟಿ ರೂ.) ನೀಡಲಾಗುವುದು. ಸೆಮಿಫೈನಲಿಸ್ಟ್‌ಗಳು 1.26 ಮಿಲಿಯನ್ ಡಾಲರ್(11 ಕೋಟಿ ರೂ.) ಗಳಿಸುತ್ತಾರೆ. ಇದು 2024 ಕ್ಕೆ ಹೋಲಿಸಿದರೆ ಮತ್ತೊಂದು ಗಮನಾರ್ಹ ಏರಿಕೆಯಾಗಿದೆ.

ಇದನ್ನೂ ಓದಿ Ons Jabeur: ದೈಹಿಕ ಯೋಗಕ್ಷೇಮದತ್ತ ಗಮನಹರಿಸಲು ಟೆನಿಸ್‌ನಿಂದ ಬ್ರೇಕ್‌ ಪಡೆದ ಒನ್ಸ್‌ ಜಬೇರ್‌