ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತನ್ನ ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದರೂ ಸೂರ್ಯವಂಶಿಯ ಅಭಿಮಾನಿ ಎಂದ ಪ್ಯಾಟ್‌ ಕಮಿನ್ಸ್‌

IPL 2026: ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸೂರ್ಯವಂಶಿ ಕೇವಲ 37 ಎಸೆತಗಳಲ್ಲಿ 103 ರನ್ ಗಳಿಸಿದರು. 36 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಅಭಿಷೇಕ್ ಶರ್ಮಾ ನಂತರ ಎರಡನೇ ಅತಿ ವೇಗದ ಶತಕವಾಗಿದೆ.

Vaibhav Sooryavanshi and Pat Cummins

ಜೈಪುರ, ಎ.26: ಶನಿವಾರ ರಾತ್ರಿ ನಡೆದಿದ್ದ ಐಪಿಎಲ್‌(IPL 2026) ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 5 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮಣಿಸಿತು. 36 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ(Vaibhav Sooryavanshi) ನನ್ನ ಹೊಸ ನೆಚ್ಚಿನ ಆಟಗಾರ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ಹೇಳಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿನ್ಸ್‌, ನಾನು 15 ವರ್ಷದ ಸೂರ್ಯವಂಶಿಯ ಅವರ ಅಭಿಮಾನಿ ಎಂದು ಹೇಳಿದರು. "ಅವರು(ಸೂರ್ಯವಂಶಿ) ನನ್ನ ಹೊಸ ನೆಚ್ಚಿನ ಆಟಗಾರ ಎಂದು ನಾನು ಭಾವಿಸುತ್ತೇನೆ. ಅವರು ಚೆಂಡನ್ನು ತುಂಬಾ ಕಠಿಣವಾಗಿ ಹೊಡೆಯುತ್ತಾರೆ. ಇದನ್ನು ನೋಡಲು ಅದ್ಭುತವಾಗಿದೆ. ಇದು ಒಳ್ಳೆಯ ಮಜಾ ನೀಡುತ್ತದೆ. ನಿರ್ಭೀತಿಯಿಂದ ಅವರು ಆಡುವ ರೀತಿ ನನಗೆ ಇಷ್ಟವಾಗಿದೆ. ಅವರ ಕ್ರಿಕೆಟ್‌ ಭವಿಷ್ಯ ಉಜ್ವಲವಾಗಲಿ" ಎಂದು ಕಮ್ಮಿನ್ಸ್ ಹೇಳಿದರು. ಪಂದ್ಯದಲ್ಲಿ ಸೂರ್ಯವಂಶಿ ಅವರ ಕಮಿನ್ಸ್‌ ಮೊದಲ ಎಸೆತವನ್ನೇ ಸಿಕ್ಸರ್‌ ಬಾರಿಸಿದ್ದರು.



ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸೂರ್ಯವಂಶಿ ಕೇವಲ 37 ಎಸೆತಗಳಲ್ಲಿ 103 ರನ್ ಗಳಿಸಿದರು. 36 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಅಭಿಷೇಕ್ ಶರ್ಮಾ ನಂತರ ಎರಡನೇ ಅತಿ ವೇಗದ ಶತಕವಾಗಿದೆ. ಅವರ 12 ಸಿಕ್ಸರ್‌ಗಳು ಸೇರಿದ್ದ ಅವರ ಶತಕವು ರಾಜಸ್ಥಾನ ರಾಯಲ್ಸ್ ತಂಡವನ್ನು 228 ರನ್‌ಗಳಿಗೆ ಕೊಂಡೊಯ್ಯಲು ಸಹಾಯ ಮಾಡಿತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ಇನ್ನೂ 9 ಎಸೆತ ಬಾಕಿ ಇರುವಂತೆ 5 ವಿಕೆಟ್‌ಗೆ 229 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಲುಂಗಿ ಎನ್‌ಗಿಡಿ ಗಾಯದ ಬಗ್ಗೆ ಅಪ್ಡೇಟ್ ನೀಡಿದ ಐಪಿಎಲ್ ಮಂಡಳಿ

ಚೇಸಿಂಗ್‌ ವೇಳೆ ಅಭಿಷೇಕ್‌ 29 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ 57 ರನ್‌ ಸಿಡಿಸಿದರೆ, ಇಶಾನ್‌ 31 ಎಸೆತಗಳಲ್ಲಿ 74 ರನ್‌ ಸೂರೆಮಾಡಿದರು. ಅವರ ಇನಿಂಗ್ಸ್‌ನಲ್ಲಿ 11 ಬೌಂಡರಿ, 3 ಸಿಕ್ಸರ್ ಇದ್ದವು. ಹೆನ್ರಿಚ್‌ ಕ್ಲಾಸೆನ್‌ (29) ಹಾಗೂ ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ (36) 53 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ಡದ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 228 (ವೈಭವ್ ಸೂರ್ಯವಂಶಿ 103, ಧ್ರುವ್ ಜುರೇಲ್ 51, ಡೊನೊವನ್ ಫೆರಿರಾ 33; ಇಶಾನ್ ಮಾಲಿಂಗ 38ಕ್ಕೆ2). ಸನ್‌ರೈಸರ್ಸ್‌ ಹೈದರಾಬಾದ್‌: 18.3 ಓವರ್‌ಗಳಲ್ಲಿ 5 ವಿಕೆಟ್‌ಗೆ 229 (ಅಭಿಷೇಕ್‌ ಶರ್ಮಾ 57, ಇಶಾನ್‌ ಕಿಶನ್‌ 74, ನಿತೀಶ್‌ ಕುಮಾರ್‌ ರೆಡ್ಡಿ 36; ಜೋಫ್ರಾ ಆರ್ಚರ್‌ 34ಕ್ಕೆ2, ಬ್ರಿಜೇಶ್‌ ಶರ್ಮಾ 44ಕ್ಕೆ2).