Vaibhav Suryavanshi: ಜಿತೇಶ್ ಶರ್ಮಾ ನೇತೃತ್ವದ ಭಾರತದ ರೈಸಿಂಗ್ ಏಷ್ಯಾಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ
ಸೂರ್ಯವಂಶಿ ಮಾತ್ರವಲ್ಲದೆ, ರೈಸಿಂಗ್ ಏಷ್ಯಾ ಕಪ್ ತಂಡದಲ್ಲಿ ಐಪಿಎಲ್ 2025 ರಲ್ಲಿ ಸಂಚಲನ ಮೂಡಿಸಿದ ಹಲವಾರು ಭರವಸೆಯ ಆಟಗಾರರಾದ ನೆಹಾಲ್ ವಾಧೇರಾ, ನಮನ್ ಧೀರ್, ಅಶುತೋಷ್ ಶರ್ಮಾ, ಗುರ್ಜಪ್ನೀತ್ ಸಿಂಗ್ ಮತ್ತು ವಿಜಯ್ ಕುಮಾರ್ ವೈಶಾಕ್. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಭಾರತದ ಹಿರಿಯ ಟಿ20ಐ ತಂಡದ ಭಾಗವಾಗಿರುವ ನಾಯಕ ಜಿತೇಶ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ.
                                ರೈಸಿಂಗ್ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆದ ಸೂರ್ಯವಂಶಿ -
                                
                                Abhilash BC
                            
                                Nov 4, 2025 12:32 PM
                            ನವದೆಹಲಿ: ಭಾರತದ 14 ವರ್ಷದ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ(Vaibhav Suryavanshi) ಅವರನ್ನು ಮುಂಬರುವ ರೈಸಿಂಗ್ ಏಷ್ಯಾ ಕಪ್‌ಗಾಗಿ( Asia Cup Rising Stars) 15 ಸದಸ್ಯರ ಇಂಡಿಯಾ ಎ ತಂಡದಲ್ಲಿ ಹೆಸರಿಸಲಾಗಿದೆ. ಇದು ಅವರ ಗಮನಾರ್ಹ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ದೊಡ್ಡ ಮುನ್ನಡೆಯಾಗಿದೆ. ಬಿಸಿಸಿಐ ಮಂಗಳವಾರ ತಂಡವನ್ನು ಪ್ರಕಟಿಸಿದ್ದು, ಜಿತೇಶ್ ಶರ್ಮಾ(Jitesh Sharma) ಅವರನ್ನು ತಂಡದ ನಾಯಕರನ್ನಾಗಿ ಮತ್ತು ನಮನ್ ಧೀರ್ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ.
ಐಪಿಎಲ್ 2025 ರ ಋತುವಿನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಸೂರ್ಯವಂಶಿ, ಇದೀಗ ಮೊದಲ ಬಾರಿಗೆ ಸೀನಿಯರ್ ಮಟ್ಟದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಅಂಡರ್-19 ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಸೂರ್ಯವಂಶಿ ಅಮೋಘ ಶತಕ ಬಾರಿಸಿ ಮಿಂಚಿದ್ದರು. ಐಪಿಎಲ್‌ನಲ್ಲಿ ಆಡಿದ, ಏಳು ಪಂದ್ಯಗಳಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ 252 ರನ್‌ಗಳನ್ನು ಗಳಿಸಿದ್ದರು.
ಸೂರ್ಯವಂಶಿ ಮಾತ್ರವಲ್ಲದೆ, ರೈಸಿಂಗ್ ಏಷ್ಯಾ ಕಪ್ ತಂಡದಲ್ಲಿ ಐಪಿಎಲ್ 2025 ರಲ್ಲಿ ಸಂಚಲನ ಮೂಡಿಸಿದ ಹಲವಾರು ಭರವಸೆಯ ಆಟಗಾರರಾದ ನೆಹಾಲ್ ವಾಧೇರಾ, ನಮನ್ ಧೀರ್, ಅಶುತೋಷ್ ಶರ್ಮಾ, ಗುರ್ಜಪ್ನೀತ್ ಸಿಂಗ್ ಮತ್ತು ವಿಜಯ್ ಕುಮಾರ್ ವೈಶಾಕ್. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಭಾರತದ ಹಿರಿಯ ಟಿ20ಐ ತಂಡದ ಭಾಗವಾಗಿರುವ ನಾಯಕ ಜಿತೇಶ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ ಮತ್ತು ಶೇಕ್ ರಶೀದ್ ಅವರನ್ನು ಪಂದ್ಯಾವಳಿಗೆ ಸ್ಟ್ಯಾಂಡ್‌ಬೈ ಆಟಗಾರರಾಗಿದ್ದಾರೆ.
8 ತಂಡಗಳ ಪೈಪೋಟಿ
ಟೂರ್ನಿಯಲ್ಲಿ 8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಎ ತಂಡಗಳ ಜತೆಗೆ ಯುಎಇ, ಓಮನ್ ತಂಡಗಳಿದ್ದರೆ, ಎ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಎ ತಂಡಗಳ ಜತೆಗೆ ಹಾಂಕಾಂಗ್ ತಂಡ ಸ್ಥಾನ ಪಡೆದಿದೆ. ಭಾರತ-ಪಾಕಿಸ್ತಾನ ಎ ತಂಡಗಳು ನವೆಂಬರ್ 16ಕ್ಕೆ ಮುಖಾಮುಖಿಯಾಗಲಿವೆ.
ಇದನ್ನೂ ಓದಿ India vs Pakistan: ನವೆಂಬರ್ 16ಕ್ಕೆ ಮತ್ತೆ ಭಾರತ-ಪಾಕಿಸ್ತಾನ ಕ್ರಿಕೆಟ್ ಮುಖಾಮುಖಿ
ನ.14ಕ್ಕೆ ಯುಎಇ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ನ.18ರ ಕೊನೇ ಲೀಗ್ ಪಂದ್ಯದಲ್ಲಿ ಓಮನ್ ವಿರುದ್ಧ ಆಡಲಿದೆ. ಗುಂಪಿನ ಅಗ್ರ 2 ತಂಡಗಳು ನ.21ರಂದು ನಡೆಯಲಿರುವ ಸೆಮಿಫೈನಲ್ ಪ್ರವೇಶಿಸಲಿವೆ. ನ.23ರಂದು ಫೈನಲ್ ನಡೆಯಲಿದೆ. ಪಂದ್ಯಾವಳಿ ಕತಾರ್‌ನಲ್ಲಿ ನಡೆಯಲಿದೆ.
ಭಾರತ ತಂಡ
ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್, ಸೂರ್ಯಾಂಶ್ ಶೆಡ್ಜ್, ಜಿತೇಶ್ ಶರ್ಮಾ (ನಾಯಕ), ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಕ್, ಯುದ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ಸುಯಾಶ್ ಶರ್ಮಾ.
ಸ್ಟ್ಯಾಂಡ್-ಬೈ: ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ, ಶೇಕ್ ರಶೀದ್.