ಬೆಂಗಳೂರು, ಡಿ.24: ಈ ಬಾರಿಯ ವಿಜಯ್ ಹಜಾರೆ ಟ್ರೋಫಿ(Vijay Hazare)ಯಲ್ಲಿ ಮೊದಲ ದಿನವೇ ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ಶತಕಗಳ ಸುರಿಮಳೆಯೇ ಹರಿದಿದೆ. 14 ವರ್ಷದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಬಾರಿಸಿದ ಇನ್ನೇನು ಕೆಲವೇ ಗಂಟೆಗಳ ಹೊತ್ತಿಗೆ ಸಕಿಬುಲ್ ಗನಿ(Sakibul Gani) 32 ಎಸೆತಗಳಲ್ಲಿ ಮತ್ತು ಇಶಾನ್ ಕಿಶನ್ 33 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು.
ಬಿಹಾರ ತಂಡದ ನಾಯಕ ಸಕಿಬುಲ್ ಗನಿ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ದಾಖಲಿಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು. 26 ವರ್ಷದ ಗನಿ ರಾಂಚಿಯ ಜೆಎಸ್‌ಸಿಎ ಓವಲ್ ಮೈದಾನದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಈ ಸಾಧನೆ ಮಾಡಿದರು.
ಗನಿ ಕೇವಲ 32 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. 2024 ರಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ 35 ಎಸೆತಗಳಲ್ಲಿ ಶತಕ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಗನಿಗೂ ಮುನ್ನ ತನ್ನದೇ ತಂಡದ ಸಹ ಆಟಗಾರ ವೈಭವ್ ಸೂರ್ಯವಂಶಿ 32 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಗನಿ, 40 ಎಸೆತಗಳಲ್ಲಿ 128* ರನ್ ಗಳಿಸಿ ಅಜೇಯರಾಗಿ ಉಳಿದರು. ಬಿಹಾರ ತಂಡವು ನಿಗದಿತ 50 ಓವರ್‌ಗಳಲ್ಲಿ 574/6 ದಾಖಲೆಯ ಮೊತ್ತವನ್ನು ಗಳಿಸಲು ಕಾರಣರಾದರು. ಸೂರ್ಯವಂಶಿ 190 ರನ್ ಬಾರಿಸಿದರು.
ಇದನ್ನೂ ಓದಿ ಕುಡಿತದ ಆರೋಪದ ನಡುವೆಯೂ ಇಂಗ್ಲೆಂಡ್ ಆಟಗಾರರ ಬೆಂಬಲಕ್ಕೆ ನಿಂತ ಬೆನ್ ಸ್ಟೋಕ್ಸ್
ಮತ್ತೊಂದೆಡೆ ಇಶಾನ್ ಕಿಶನ್ ಅವರು ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ 33 ಎಸೆತಗಳಲ್ಲಿ ಶತಕ ಸಿಡಿಸಿ ಭಾರತ ಪರ ಲಿಸ್ಟ್ ಎ ಪಂದ್ಯದಲ್ಲಿ ಅತ್ಯಧಿಕ ವೇಗದ ಶತಕ ಸಿಡಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
ಲಿಸ್ಟ್ ಎ ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ವೇಗದ ಶತಕಗಳು
32 ಎಸೆತಗಳು: ಸಕಿಬುಲ್ ಗನಿ (ಬಿಹಾರ)
33 ಎಸೆತಗಳು: ಇಶಾನ್ ಕಿಶನ್ (ಜಾರ್ಖಂಡ್)
35 ಎಸೆತಗಳು: ಅನ್ಮೋಲ್‌ಪ್ರೀತ್ ಸಿಂಗ್ (ಪಂಜಾಬ್)
36 ಎಸೆತಗಳು: ವೈಭವ್ ಸೂರ್ಯವಂಶಿ (ಬಿಹಾರ)
40 ಎಸೆತಗಳು: ಯೂಸುಫ್ ಪಠಾಣ್ (ಬರೋಡಾ)
41 ಎಸೆತಗಳು: ಉರ್ವಿಲ್ ಪಟೇಲ್ (ಗುಜರಾತ್)
42 ಎಸೆತಗಳು: ಅಭಿಷೇಕ್ ಶರ್ಮಾ (ಪಂಜಾಬ್)