ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮರವೇರಿ ಕೊಹ್ಲಿಯ ಶತಕ ಕಣ್ತುಂಬಿಕೊಂಡ ಅಭಿಮಾನಿ!

Virat Kohli fans: ಮೈದಾನದ ಸುತ್ತ ಇರುವ ಎತ್ತರದ ಕಂಪೌಂಡ್‌ ಹಿಂದೆ ನಿಂತು ಇಣುಕಿದರು. ರಸ್ತೆ ಬದಿ ನಿಂತ ಲಾರಿ, ಮರಗಳನ್ನು ಹತ್ತಿ ಕೊಹ್ಲಿಯನ್ನು ನೋಡುವ ಸಾಹಸ ಮಾಡಿದರು. ಇದೆಲ್ಲದರ ನಡುವೆ ವಿರಾಟ್ ಶತಕ ದಾಖಲಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್‌ಗಳ ಗಡಿ ದಾಟಿದ ಸಾಧನೆಯೂ ಮಾಡಿದರು.

Virat Kohli crazy fans

ಬೆಂಗಳೂರು, ಡಿ.25: ವಿಜಯ್ ಹಜಾರೆ ಟ್ರೋಫಿ(Vijay Hazare Trophy)ಯಲ್ಲಿ ರೋಹಿತ್ ಶರ್ಮಾ ಅವರ ಆಟವನ್ನು ವೀಕ್ಷಿಸಲು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ 10,000 ಕ್ಕೂ ಹೆಚ್ಚು ಅಭಿಮಾನಿಗಳು ನೆರೆದಿದ್ದರು. ಆದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿತ್ತು. ಕೊಹ್ಲಿಯ(Virat Kohli fans) ಅಭಿಮಾನಿಯೊಬ್ಬ ಮರವೇರಿ ಕುಳಿತು ತನ್ನ ನೆಚ್ಚಿನ ಆಟಗಾರನ ಬ್ಯಾಟಿಂಗ್‌ ಕಣ್ತುಂಬಿಕೊಂಡಿದ್ದಾರೆ. ಈ ಅಭಿಮಾನಿಯ ಫೋಟೊ ಮತ್ತು ವಿಡಿಯೊ ವೈರಲ್‌ ಆಗಿದೆ.

ಸುರಕ್ಷತೆಯ ಕಾರಣದಿಂದಾಗಿ ಪಂದ್ಯವು ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು ಮತ್ತು ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಹಾಗಿದ್ದರೂ ಕೂಡ ದೆಹಲಿ ತಂಡದ ಆಟಗಾರರು ಇದ್ದ ಬಸ್‌ ಬರುತ್ತಿದ್ದಂತೆಯೇ ಕೊಹ್ಲಿ..ಕೊಹ್ಲಿ ಎಂದು ಜನರು ಕೂಗಿದರು.



ಮೈದಾನದ ಸುತ್ತ ಇರುವ ಎತ್ತರದ ಕಂಪೌಂಡ್‌ ಹಿಂದೆ ನಿಂತು ಇಣುಕಿದರು. ರಸ್ತೆ ಬದಿ ನಿಂತ ಲಾರಿ, ಮರಗಳನ್ನು ಹತ್ತಿ ಕೊಹ್ಲಿಯನ್ನು ನೋಡುವ ಸಾಹಸ ಮಾಡಿದರು. ಇದೆಲ್ಲದರ ನಡುವೆ ವಿರಾಟ್ ಶತಕ ದಾಖಲಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್‌ಗಳ ಗಡಿ ದಾಟಿದ ಸಾಧನೆಯೂ ಮಾಡಿದರು. 83 ಎಸೆತಗಳಲ್ಲಿ ಶತಕ ಹೊಡೆದ ಕೊಹ್ಲಿ ಅಂತಿಮವಾಗಿ 131 ರನ್‌ ಬಾರಿಸಿದರು. ಅವರ ಶತಕದ ನೆರವಿನಿಂದ ಡೆಲ್ಲಿ ತಂಡ 4 ವಿಕೆಟ್‌ ಅಂತರದ ಗೆಲುವು ಸಾಧಿಸಿತು.



ಕೊಹ್ಲಿ 343 ಪಂದ್ಯಗಳ 50 ಓವರ್‌ಗಳ ವೃತ್ತಿಜೀವನದಲ್ಲಿ 16,000 ಲಿಸ್ಟ್ ಎ ರನ್‌ಗಳನ್ನು ಪೂರ್ಣಗೊಳಿಸಿದರು. ಕೊಹ್ಲಿ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮತ್ತು ಈ ಸ್ವರೂಪದಲ್ಲಿ 16,000 ರನ್‌ಗಳನ್ನು ಪೂರ್ಣಗೊಳಿಸಿದ ಒಟ್ಟಾರೆ ಒಂಬತ್ತನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

‌Vijay Hazare Trophy: 62 ಎಸೆತಗಳಲ್ಲಿ ಶತಕ ಬಾರಿಸಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಮೊದಲ ದಿನವಾದ ಬುಧವಾರ ಒಟ್ಟು 22 ಶತಕಗಳು ದಾಖಲಾಗಿತ್ತು. ಇದು ಮೊದಲ ದಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಶತಕ ಎನಿಸಿಕೊಂಡಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಅವರಷ್ಟೇ ಅಲ್ಲದೇ ಇನ್ನೂ 18 ಮಂದಿ ಶತಕ ಸಿಡಿಸಿ ಹೊಸ ದಾಖಲೆ ಬರೆದರು. ಈ ಮೊದಲು 2021ರ ಡಿಸೆಂಬರ್ 12ರಂದು ಹಾಗೂ 2025ರ ಜನವರಿ 03ರಂದು ತಲಾ 19 ಶತಕಗಳು ದಾಖಲಾಗಿದ್ದವು.