ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs SRH: ಸಾರ್ವಕಾಲಿಕ ಐಪಿಎಲ್ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

Virat Kohli creates all-time IPL record: ಐಪಿಎಲ್ ಟೂರ್ನಿಯಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧ ವಿರಾಟ್ ಕೊಹ್ಲಿ, 874 ರನ್ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ ಅವರ ದಾಖಲೆಯನ್ನು ಮುರಿದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಒಟ್ಟು 64 ಅರ್ಧಶತಕಗಳನ್ನು ಗಳಿಸಿದ್ದಾರೆ.

Virat Kohli

ಬೆಂಗಳೂರು, ಮಾ.29: ಶನಿವಾರ ನಡೆದಿದ್ದ ಐಪಿಎಲ್ 2026 ರ ಆರಂಭಿಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದರು.

ಪಂದ್ಯದಲ್ಲಿ 69 ರನ್ ಗಳಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್ ಮಾಡುವಾಗ 4000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಮಾಜಿ ಆಟಗಾರ ಡೇವಿಡ್ ವಾರ್ನರ್(3285) ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ( 3285*) ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ ರನ್-ಚೇಸ್‌ನಲ್ಲಿ ಅತಿ ಹೆಚ್ಚು ರನ್‌ಗಳು

ವಿರಾಟ್ ಕೊಹ್ಲಿ: 125 ಇನ್ನಿಂಗ್ಸ್‌ಗಳಲ್ಲಿ 4027 ರನ್‌ಗಳು

ಡೇವಿಡ್ ವಾರ್ನರ್: 97 ಇನ್ನಿಂಗ್ಸ್‌ಗಳಲ್ಲಿ 3285 ರನ್‌ಗಳು

ರೋಹಿತ್ ಶರ್ಮಾ: 129 ಇನ್ನಿಂಗ್ಸ್‌ಗಳಲ್ಲಿ 3238 ರನ್‌ಗಳು

ಶಿಖರ್ ಧವನ್: 94 ಇನ್ನಿಂಗ್ಸ್‌ಗಳಲ್ಲಿ 2843 ರನ್‌ಗಳು

ರಾಬಿನ್ ಉತ್ತಪ್ಪ: 115 ಇನ್ನಿಂಗ್ಸ್‌ಗಳಲ್ಲಿ 2832 ರನ್‌ಗಳು

ಇದು ಮಾತ್ರವಲ್ಲದೆ ಐಪಿಎಲ್ ಟೂರ್ನಿಯಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧ ವಿರಾಟ್ ಕೊಹ್ಲಿ, 874 ರನ್ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ ಅವರ ದಾಖಲೆಯನ್ನು ಮುರಿದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಒಟ್ಟು 64 ಅರ್ಧಶತಕಗಳನ್ನು ಗಳಿಸಿದ್ದಾರೆ. ಎಂಟು ಶತಕಗಳು ಅವರ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 62 ಅರ್ಧಶತಕಗಳನ್ನು ಗಳಿಸಿದ್ದರು.

"ಅವರನ್ನು ವರ್ಣಿಸಲಸಾಧ್ಯ"; ವಿರಾಟ್‌ ಕೊಹ್ಲಿ ಕುರಿತು ಆರ್‌ಸಿಬಿ ನಾಯಕ ಹೇಳಿದ್ದೇನು?

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸನ್‌ರೈಸರ್ಸ್‌ ತಂಡ ನಾಯಕ ಇಶಾನ್‌ ಕಿಶನ್‌ ಅವರ ಅರ್ಧಶತಕದ ಬಲದಿಂದ 20 ಓವರಲ್ಲಿ 9 ವಿಕೆಟ್‌ಗೆ 201 ರನ್‌ ಗಳಿಸಿತು. ಈ ಸವಾಲಿನ ಮೊತ್ತವನ್ನು ಆರ್‌ಸಿಬಿ ಕೇವಲ 15.4 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ ಬಾರಿಸಿ ಸುಲಭವಾದ ಗೆಲುವು ತನ್ನದಾಗಿಸಿಕೊಂಡಿತು.

ಪಂದ್ಯದಲ್ಲಿ, ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 202 ರನ್‌ ಚೇಸ್‌ ಮಾಡುವ ಮಾಡುವ ಮೂಲಕ ಗೆಲುವು ಸಾಧಿಸಿದೆ. 15.4 ಓವರ್‌ಗಳಲ್ಲಿ 200 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ, ಆರ್‌ಸಿಬಿ ದಾಖಲೆ ಬರೆದಿದೆ. ಐಪಿಎಲ್ ಇತಿಹಾಸದಲ್ಲಿ 25 ಕ್ಕೂ ಹೆಚ್ಚು ಎಸೆತಗಳು ಬಾಕಿ ಇರುವಾಗಲೇ 200 ಕ್ಕೂ ಅಧಿಕ ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೊದಲ ತಂಡವಾಗಿದೆ. ಇದಕ್ಕೂ ಮೊದಲು ಈ ದಾಖಲೆ ರಾಜಸ್ಥಾನ ರಾಯಲ್ಸ್ ಹೆಸರಿನಲ್ಲಿತ್ತು. ಏಪ್ರಿಲ್ 28, 2025 ರಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 210 ರನ್‌ಗಳ ಗುರಿಯನ್ನು 15.5 ಓವರ್‌ಗಳಲ್ಲಿ ಚೇಸ್‌ ಮಾಡಿತ್ತು.