ಕಾರ್ಡಿಫ್, ಜು.17: ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ವಿರಾಟ್ ಕೊಹ್ಲಿ, ಗುರುವಾರ (ಜುಲೈ 16) ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಶ್ರೀಲಂಕಾದ ದಿಗ್ಗಜ ಕುಮಾರ್ ಸಂಗಕ್ಕಾರ ಅವರ ವಿಶ್ವ ದಾಖಲೆಯನ್ನು ಮುರಿದು ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು. ಎದುರಾಳಿ ತಂಡದ ತವರು ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಕೊಹ್ಲಿಯ ಪಾಲಾಯಿತು.
ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 37 ವರ್ಷದ ಭಾರತೀಯ ತಾರೆ ಸಂಗಕ್ಕಾರ ಅವರ 5,518 ರನ್‌ಗಳನ್ನು ಹಿಂದಿಕ್ಕಿ ಸಾರ್ವಕಾಲಿಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಈ ದಾಖಲೆ ಮುರಿಯಲು ಕೊಹ್ಲಿಗೆ 46 ರನ್‌ಗಳ ಅಗತ್ಯವಿತ್ತು. ಭಾರತದ ಇನ್ನಿಂಗ್ಸ್‌ನ 24 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ ತಮ್ಮ 46ನೇ ರನ್ ಗಳಿಸಿದಾಗ ಈ ಮೈಲಿಗಲ್ಲು ತಲುಪಿದರು.
ಶ್ರೀಲಂಕಾದ ಮಾಜಿ ನಾಯಕ ಸಂಗಕ್ಕಾರ ಎದುರಾಳಿ ದೇಶಗಳಲ್ಲಿ ಆಡಿದ 149 ಏಕದಿನ ಪಂದ್ಯಗಳಲ್ಲಿ 5,518 ರನ್ ಗಳಿಸಿದ್ದರು. ಆದರೆ ಕೊಹ್ಲಿ 126 ನೇ ಏಕದಿನ ಪಂದ್ಯದಲ್ಲಿ ಈ ದಾಖಲೆ ಹಿಂದಿಕ್ಕಿದರು.
ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ರೆಫರಿಗಳ ಪಟ್ಟಿ ಪ್ರಕಟ
ಒಟ್ಟಾರೆಯಾಗಿ ಕೊಹ್ಲಿ ಈಗ ತವರಿನಿಂದ ಹೊರಗೆ (ಭಾರತದ ಹೊರಗೆ) ಆಡಿದ 183 ಏಕದಿನ ಪಂದ್ಯಗಳಲ್ಲಿ 7,981* ರನ್ ಗಳಿಸಿದ್ದಾರೆ. ವಿದೇಶದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 8,000 ರನ್ ಗಳಿಸಲು ಅವರಿಗೆ ನಡೆಯುತ್ತಿರುವ ಪಂದ್ಯದಲ್ಲಿ ಕನಿಷ್ಠ 65 ರನ್ ಗಳಿಸಬೇಕಾಗಿದೆ. ದಾಖಲೆ ಸಸಚಿನ್ ತೆಂಡೂಲ್ಕರ್ (11,450) ಹೆಸರಿನಲ್ಲಿದೆ. ಸೌರವ್ ಗಂಗೂಲಿ (8,111)ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ, ವಿಶ್ವದ ಏಳು ಬ್ಯಾಟ್ಸ್‌ಮನ್‌ಗಳು ಮಾತ್ರ ತವರಿನಿಂದ ಹೊರಗೆ ಆಡಿದ ಏಕದಿನ ಪಂದ್ಯಗಳಲ್ಲಿ 8,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದ್ರಾವಿಡ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. 4 ರನ್ ಗಳಿಸುತ್ತಿದ್ದಂತೆ ಕೊಹ್ಲಿ ಈ ದಾಖಲೆಯನ್ನು ಮುರಿದರು. 2011 ರಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ಕೊಹ್ಲಿ, ಈಗ ದೇಶದಲ್ಲಿ 59 ಪಂದ್ಯಗಳಲ್ಲಿ 75 ಇನ್ನಿಂಗ್ಸ್‌ಗಳಲ್ಲಿ 2,707* ರನ್‌ಗಳನ್ನು ಗಳಿಸಿದ್ದಾರೆ. ಏತನ್ಮಧ್ಯೆ, ದ್ರಾವಿಡ್ 1996 ಮತ್ತು 2011 ರ ನಡುವೆ ಇಂಗ್ಲೆಂಡ್‌ನಲ್ಲಿ 46 ಪಂದ್ಯಗಳಲ್ಲಿ 56 ಇನ್ನಿಂಗ್ಸ್‌ಗಳಲ್ಲಿ 2,645 ರನ್‌ಗಳನ್ನು ಗಳಿಸಿದ್ದಾರೆ.
ವಿದೇಶಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳು(ತವರಿನ ಎದುರಾಳಿ)
ವಿರಾಟ್ ಕೊಹ್ಲಿ-5,538* ರನ್
ಕುಮಾರ್ ಸಂಗಕ್ಕಾರ- 5518 ರನ್
ರಿಕಿ ಪಾಂಟಿಂಗ್- 5090 ರನ್
ಸಚಿನ್ ತೆಂಡೂಲ್ಕರ್-5065 ರನ್
ಎಂ.ಎಸ್ ಧೋನಿ- 4520 ರನ್
ಮಹೇಲಾ ಜಯವರ್ಧನೆ- 4311 ರನ್