ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಐಪಿಎಲ್‌ನಲ್ಲೂ ಕಂಡಿದ್ದೇನೆ'; ಪ್ರೇಕ್ಷಕರ ವರ್ತನೆಗೆ ಗರಂ ಆದ ವಿರಾಟ್‌ ಕೊಹ್ಲಿ

Virat Kohli: "ನಾನು ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದೇ ಇಲ್ಲ. ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನಾನು ಬಹುಶಃ ಇನ್ನೂ ಕಠಿಣವಾಗಿ ಹೋಗುತ್ತಿದ್ದೆ. ಆದರೆ ಚೇಸಿಂಗ್‌ನಲ್ಲಿ, ಒಟ್ಟು ಮೊತ್ತದೊಂದಿಗೆ, ನಾನು ಪರಿಸ್ಥಿತಿಯನ್ನು ಆಡಬೇಕಾಗಿತ್ತು. ನನ್ನ ಮನಸ್ಸಿನಲ್ಲಿದ್ದ ಏಕೈಕ ವಿಷಯವೆಂದರೆ ತಂಡವನ್ನು ನಾವು ಆರಾಮವಾಗಿ ಗೆಲ್ಲಬಹುದಾದ ಸ್ಥಾನಕ್ಕೆ ತರುವುದು" ಎಂದು ಕೊಹ್ಲಿ ಹೇಳಿದರು.

Virat Kohli

ವಡೋದರಾ, ಜ.12: ಭಾನುವಾರ ಇಲ್ಲಿ ನಡೆದಿದ್ದ ನ್ಯೂಜಿಲೆಂಡ್(India vs New Zealand) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನೆರೆದಿದ್ದ ಅಭಿಮಾನಿಗಳ ವರ್ತನೆಗೆ ವಿರಾಟ್‌ ಕೊಹ್ಲಿ(Virat Kohli) ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ವಿಕೆಟ್ ಬಿದ್ದಾಗ ಸಂಭ್ರಮಿಸುವುದು ನನಗೆ ಇಷ್ಟವಾಗುವುದಿಲ್ಲ ಎಂದರು.

ಹೌದು, ಭಾರತ ಚೇಸಿಂಗ್‌ ನಡೆಸುವ ವೇಳೆ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್‌ ಶರ್ಮ 26 ರನ್‌ ಗಳಿಸುವ ವೇಳೆ ವಿಕೆಟ್‌ ಕಳೆದುಕೊಂಡರು. ಈ ವೇಳೆ ಕ್ರೀಡಾಂಗಣದಲ್ಲಿ ನೆರದಿದ್ದ ಪ್ರೇಕ್ಷಕರು ಕೊಹ್ಲಿಯ ಬ್ಯಾಟಿಂಗ್‌ ನೋಡಲು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುವ ಮೂಲಕ ಸಂಭ್ರಮಿಸಿದರು. ಈ ವರ್ತನೆಗೆ ಕೊಹ್ಲಿ ಬೇಸರ ಹೊರಹಾಕಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಅಭಿಮಾನಿಗಳ ಈ ಅತಿರೇಕದ ಅಭಿಮಾನಕ್ಕೆ ಬೇಸರ ಹೊರಹಾಕಿದ ಕೊಹ್ಲಿ ತಂಡದ ವಿಕೆಟ್ ಬಿದ್ದಾಗ ಸಂಭ್ರಮಿಸುವುದು ನನಗೆ ಇಷ್ಟವಾಗುವುದಿಲ್ಲ ಎಂದರು.

‘ಭಾರತದ ಮೊದಲ ವಿಕೆಟ್ ಬಿದ್ದಾಗ ಎಲ್ಲರೂ ಖಷಿಯಿಂದ ಬೊಬ್ಬೆ ಹೊಡೆಯುತ್ತಾರೆ. ಅದು, ಔಟ್ ಆಗಿ ಹೋಗುವವರಿಗೆ ಬೇಸರ ತರಿಸಬಹುದು. ಎಂ.ಎಸ್. ಧೋನಿ ವಿಚಾರದಲ್ಲೂ ಇದೇ ತರ ಆಗಿರುವುದನ್ನು ನಾನು ನೋಡಿದ್ದೇನೆ. ಈ ವಿಚಾರಕ್ಕೆ ನನಗೆ ಬೇಸರವಿದೆ’ ಎಂದರು. ಐಪಿಎಲ್‌ ವೇಳೆ ಧೋನಿ ಬ್ಯಾಟಿಂಗ್‌ ಬರುವ ಸಲುವಾಗಿ ತಂಡದ ಸಹ ಆಟಗಾರರ ವಿಕೆಟ್‌ ಪತನಗೊಂಡಾಗಲೂ ಇದೇ ರೀತಿಯ ಘಟನೆ ನಡೆದಿತ್ತು.

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನ ತಾಯಿಗೆ ಕಳುಹಿಸುತ್ತೇನೆಂದ ವಿರಾಟ್‌ ಕೊಹ್ಲಿ!

"ನನಗೆ ಅದರ ಬಗ್ಗೆ ತಿಳಿದಿದೆ, ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಅದರ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ಎಂಎಸ್ [ಧೋನಿ] ಅವರಿಗೂ [ಐಪಿಎಲ್‌ನಲ್ಲಿ] ಅದೇ ರೀತಿ ಆಗುವುದನ್ನು ನಾನು ನೋಡಿದ್ದೇನೆ. ಹಿಂತಿರುಗಿ ಹೋಗುವ ವ್ಯಕ್ತಿಗೆ ಅದು ಉತ್ತಮ ಭಾವನೆಯಲ್ಲ. ಪ್ರೇಕ್ಷಕರ ಉತ್ಸಾಹವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಾನು ಏನು ಮಾಡಬೇಕೆಂದು ಗಮನಹರಿಸಲು ಪ್ರಯತ್ನಿಸುತ್ತೇನೆ ಮತ್ತು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ" ಎಂದು ಕೊಹ್ಲಿ ಹೇಳಿದರು.

"ನಾನು ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದೇ ಇಲ್ಲ. ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನಾನು ಬಹುಶಃ ಇನ್ನೂ ಕಠಿಣವಾಗಿ ಹೋಗುತ್ತಿದ್ದೆ. ಆದರೆ ಚೇಸಿಂಗ್‌ನಲ್ಲಿ, ಒಟ್ಟು ಮೊತ್ತದೊಂದಿಗೆ, ನಾನು ಪರಿಸ್ಥಿತಿಯನ್ನು ಆಡಬೇಕಾಗಿತ್ತು. ನನ್ನ ಮನಸ್ಸಿನಲ್ಲಿದ್ದ ಏಕೈಕ ವಿಷಯವೆಂದರೆ ತಂಡವನ್ನು ನಾವು ಆರಾಮವಾಗಿ ಗೆಲ್ಲಬಹುದಾದ ಸ್ಥಾನಕ್ಕೆ ತರುವುದು" ಎಂದು ಕೊಹ್ಲಿ ಹೇಳಿದರು.

ಕೊಹ್ಲಿ ಪಂದ್ಯದಲ್ಲಿ 42 ರನ್‌ ಗಳಿಸುತ್ತಿದ್ದಂತೆ ಶ್ರೀಲಂಕಾದ ಕುಮಾರ್​ ಸಂಗಕ್ಕರರನ್ನು (28,016) ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2ನೇ ಗರಿಷ್ಠ ರನ್​ಸ್ಕೋರರ್​ ಎನಿಸಿದರು. ದಿಗ್ಗಜ ಸಚಿನ್​ ತೆಂಡುಲ್ಕರ್​ (34,357) ಅಗ್ರಸ್ಥಾನದಲ್ಲಿದ್ದಾರೆ.

93 ರನ್‌ ಬಾರಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್‌ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ಉಭಯ ಆಟಗಾರರು 1750 ರನ್‌ ಬಾರಿಸಿದ್ದಾರೆ. ಕೊಹ್ಲಿ ಮುಂದಿನ ಪಂದ್ಯದಲ್ಲಿ ಒಂದು ರನ್‌ ಬಾರಿಸಿದರೆ ಸಚಿನ್‌ ದಾಖಲೆ ಪತನಗೊಳ್ಳಲಿದೆ.