32 ವರ್ಷಗಳ ಹಳೆಯ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಕೊಹ್ಲಿ ಸಜ್ಜು
ಏತನ್ಮಧ್ಯೆ, ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಸಚಿನ್ ದಾಖಲೆಯತ್ತ ದೃಷ್ಟಿ ನೆಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ದಾಖಲೆಯನ್ನು ಹಿಂದಿಕ್ಕಲು ಅವರಿಗೆ ಕೇವಲ ಒಂದು ರನ್ ಅಗತ್ಯವಿದೆ.
Virat Kohli -
ರಾಜ್‌ಕೋಟ್, ಜ.12: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಜ.14ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಬೃಹತ್ ಸಚಿನ್ ದಾಖಲೆಯನ್ನು ಮುರಿಯಬಹುದು. 37 ವರ್ಷದ ಕೊಹ್ಲಿ ಈಗ ಏಕದಿನ ಕ್ರಿಕೆಟ್‌ನಲ್ಲಿ ಸತತ ಐದು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಹೊಂದಿದ್ದಾರೆ ಇದು ಅಕ್ಟೋಬರ್ 2025 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪ್ರಾರಂಭವಾಯಿತು.
ಇನ್ನೊಂದು 50 ಪ್ಲಸ್ ರನ್ ಬಾರಿಸಿದರೆ ಸಚಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ರಾಹುಲ್ ದ್ರಾವಿಡ್ ಅವರೊಂದಿಗೆ ಜಂಟಿಯಾಗಿ ಹೊಂದಿರುವ ದಾಖಲೆಯನ್ನು ಮುರಿಯುತ್ತಾರೆ. ಸದ್ಯ ಕೊಹ್ಲಿ ಐದು ಬಾರಿ ಐವತ್ತಕ್ಕೂ ಹೆಚ್ಚು ಸ್ಕೋರ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆಯಾಗಿ ಕ್ವಿಂಟನ್ ಡಿ ಕಾಕ್, ಕೇನ್ ವಿಲಿಯಮ್ಸನ್ ಮತ್ತು ಬಾಬರ್ ಅಜಮ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಸತತ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್
ಸಚಿನ್ ತೆಂಡೂಲ್ಕರ್-5 ಬಾರಿ
ರಾಹುಲ್ ದ್ರಾವಿಡ್-5 ಬಾರಿ
ಅಜಿಂಕ್ಯ ರಹಾನೆ-5 ಬಾರಿ
ರೋಹಿತ್ ಶರ್ಮಾ-5 ಬಾರಿ
ವಿರಾಟ್ ಕೊಹ್ಲಿ-5 ಬಾರಿ
'ಐಪಿಎಲ್‌ನಲ್ಲೂ ಕಂಡಿದ್ದೇನೆ'; ಪ್ರೇಕ್ಷಕರ ವರ್ತನೆಗೆ ಗರಂ ಆದ ವಿರಾಟ್ ಕೊಹ್ಲಿ
ಏತನ್ಮಧ್ಯೆ, ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಸಚಿನ್ ದಾಖಲೆಯತ್ತ ದೃಷ್ಟಿ ನೆಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ದಾಖಲೆಯನ್ನು ಹಿಂದಿಕ್ಕಲು ಅವರಿಗೆ ಕೇವಲ ಒಂದು ರನ್ ಅಗತ್ಯವಿದೆ. ಸರಣಿಯ ಆರಂಭಿಕ ಪಂದ್ಯದಲ್ಲಿ 93 ರನ್ ಗಳಿಸಿದ ನಂತರ, ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸ್ವರೂಪದಲ್ಲಿ 1750 ರನ್ ಗಳಿಸಿ ಸಚಿನ್ ಜತೆ ಸಮಬಲ ಸಾಧಿಸಿದ್ದಾರೆ.
2ನೇ ಮತ್ತು 3ನೇ ಏಕದಿನ ಪಂದ್ಯಗಳಿಗೆ ಭಾರತ ತಂಡ
ಶುಭಮನ್ ಗಿಲ್ (ಸಿ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ಡಬ್ಲ್ಯುಕೆ), ಶ್ರೇಯಸ್ ಅಯ್ಯರ್ (ವಿಸಿ), ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (WK), ಆಯುಷ್ ಬಡೋನಿ.