ಅಹಮದಾಬಾದ್, ಎ.30: ಇಂದು(ಗುರುವಾರ) ನಡೆಯುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(GT vs RCB) ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲವೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಮಾಜಿ ಆಟಗಾರ ಕ್ರಿಸ್ ಗೇಲ್(Chris Gayle) ಅವರ ವಿಶ್ವ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ.
ಹೌದು ಈ ಪಂದ್ಯದಲ್ಲಿ ಕೊಹ್ಲಿ 106 ರನ್ ಬಾರಿಸಿದರೆ, ಟಿ20ಯಲ್ಲಿ ವೇಗವಾಗಿ 14000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಕೊಹ್ಲಿ ಪ್ರಸ್ತುತ 405 ಇನ್ನಿಂಗ್ಸ್‌ಗಳಲ್ಲಿ 13894* ರನ್ ಗಳಿಸಿದ್ದಾರೆ. ಸದ್ಯ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 423 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ತಲುಪಿದ್ದರು. 37 ವರ್ಷದ ಕೊಹ್ಲಿ 14 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ 13000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಆಟಗಾರ ಅವರು.
ಟಿ20ಗಳಲ್ಲಿ ಭಾರತೀಯರಿಂದ ಅತಿ ಹೆಚ್ಚು ರನ್‌ಗಳು
ವಿರಾಟ್ ಕೊಹ್ಲಿ: 405 ಇನ್ನಿಂಗ್ಸ್‌ಗಳಲ್ಲಿ 13894 ರನ್‌ಗಳು
ರೋಹಿತ್ ಶರ್ಮಾ: 454 ಇನ್ನಿಂಗ್ಸ್‌ಗಳಲ್ಲಿ 12385 ರನ್‌ಗಳು
ಶಿಖರ್ ಧವನ್: 331 ಇನ್ನಿಂಗ್ಸ್‌ಗಳಲ್ಲಿ 9797 ರನ್‌ಗಳು
ಸೂರ್ಯಕುಮಾರ್ ಯಾದವ್: 341 ಇನ್ನಿಂಗ್ಸ್‌ಗಳಲ್ಲಿ 9616 ರನ್‌ಗಳು
ಸಂಜು ಸ್ಯಾಮ್ಸನ್: 321 ಇನ್ನಿಂಗ್ಸ್‌ಗಳಲ್ಲಿ 8704 ರನ್‌ಗಳು
ಅಗ್ರಸ್ಥಾನದ ಮೇಲೆ ಕಣ್ಣಿಟ್ಟ ಆರ್‌ಸಿಬಿ
ಸದ್ಯ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಜತೆಗೆ ಪ್ಲೇ-ಆಫ್ ಸ್ಥಾನಕ್ಕೂ ಸನಿಹಗೊಳ್ಳಲಿದೆ. ಆರ್‌ಸಿಬಿ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟೀದಾರ್, ಟಿಮ್ ಡೇವಿಡ್ ಅಬ್ಬರಿಸುತ್ತಿದ್ದಾರೆ. ಫಿಲ್ ಸಾಲ್ಟ್ ಗಾಯಗೊಂಡಿರುವ ಕಾರಣ ಜೇಕಬ್ ಬೆಥೆಲ್‌ಗೆ ಮತ್ತೊಂದು ಅವಕಾಶ ಸಿಗುವುದು ಬಹುತೇಕ ಖಚಿತ. ಬೌಲಿಂಗ್‌ನಲ್ಲಿ ಭುವನೇಶ್ವರ್, ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
MI vs SRH: ಸತತ ನಾಲ್ಕನೇ ಪಂದ್ಯದಿಂದಲೂ ರೋಹಿತ್ ಶರ್ಮಾ ಔಟ್! ಹಿಟ್‌ಮ್ಯಾನ್ ಕೆರಿಯರ್ ಅಂತ್ಯ?
ಸಂಭಾವ್ಯ ತಂಡಗಳು
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್.
ಇಂಪ್ಯಾಕ್ಟ್ ಆಟಗಾರ: ರಾಹುಲ್ ತೆವಾಟಿಯಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಸುಯಶ್ ಶರ್ಮಾ, ರಸಿಖ್ ಸಲಾಮ್ ದಾರ್.
ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್.