ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಂಡ ಬದಲಾದರೂ ಬದಲಾಗದ ಕೊಹ್ಲಿ-ಸಿರಾಜ್‌ ನಡುವಿನ ಸ್ನೇಹ ಬಾಂಧವ್ಯ; ಹೃದಯಸ್ಪರ್ಶಿ ಕ್ಷಣದ ವಿಡಿಯೊ ವೈರಲ್‌

Virat Kohli and Mohammed Siraj ಪಂದ್ಯ ಮುಗಿದ ಕೂಡಲೇ ಸಿರಾಜ್ ಕೊಹ್ಲಿ ಬಳಿಗೆ ನಡೆದು ಬಂದು ಅವರನ್ನು ಹಿಂದಿನಿಂದ ಹಿಡಿದು ಅಪ್ಪಿಕೊಂಡರು. ಕೊಹ್ಲಿ ತಿರುಗಿ, ಮುಗುಳ್ನಕ್ಕು, ಮತ್ತೆ ಅಪ್ಪಿಕೊಂಡರು. ಬಳಿಕ ಉಭಯ ಆಟಗಾರರು ಕೆಲ ಹೊತ್ತು ಮಾತುಗಳನ್ನಾಡಿದರು.

Siraj hugging Kohli

ಬೆಂಗಳೂರು, ಎ.25: ಐಪಿಎಲ್ 2026 ರಲ್ಲಿ ಗುಜರಾತ್‌ ಟೈಟಾನ್ಸ್‌(RCB vs GT) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 5 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ(Virat Kohli) ಮತ್ತು ಮೊಹಮ್ಮದ್ ಸಿರಾಜ್(Mohammed Siraj) ನಡುವಿನ ಹೃದಯಸ್ಪರ್ಶಿ ಕ್ಷಣ ಎಲ್ಲರ ಗಮನ ಸೆಳೆಯಿತು. ವೈರಲ್ ಆದ ವೀಡಿಯೊದಲ್ಲಿ ಸಿರಾಜ್ ಕೊಹ್ಲಿಯನ್ನು ಅಪ್ಪಿಕೊಂಡು ಬಹಳ ಆತ್ಮೀಯವಾಗಿ ಮಾತನಾಡಿಸಿದರು. ಅದು ಒಂದು ಸಣ್ಣ ಕ್ಷಣವಾಗಿತ್ತು, ಆದರೆ ಅದು ಮನಸ್ಸಿಗೆ ಮುದ ನೀಡಿತು. ವಿಶೇಷವಾಗಿ ಬೆಂಗಳೂರಿನಲ್ಲಿ. ಸಿರಾಜ್ ಒಂದು ಕಾಲದಲ್ಲಿ ಇಲ್ಲಿ ಅಭಿಮಾನಿಗಳ ನೆಚ್ಚಿನ ಆಟಗಾರರಾಗಿದ್ದರು. ಮತ್ತು ಅವರನ್ನು ಚಿನ್ನಸ್ವಾಮಿಯಲ್ಲಿ ಮತ್ತೆ ನೋಡಿದಾಗ, ಕೊಹ್ಲಿಯೊಂದಿಗೆ ನಗು ಹಂಚಿಕೊಳ್ಳುವಾಗ, ಹಿಂದಿನ ನೆನಪುಗಳು ಮರುಕಳಿಸಿತು.

ಪಂದ್ಯ ಮುಗಿದ ಕೂಡಲೇ ಸಿರಾಜ್ ಕೊಹ್ಲಿ ಬಳಿಗೆ ನಡೆದು ಬಂದು ಅವರನ್ನು ಹಿಂದಿನಿಂದ ಹಿಡಿದು ಅಪ್ಪಿಕೊಂಡರು. ಕೊಹ್ಲಿ ತಿರುಗಿ, ಮುಗುಳ್ನಕ್ಕು, ಮತ್ತೆ ಅಪ್ಪಿಕೊಂಡರು. ಬಳಿಕ ಉಭಯ ಆಟಗಾರರು ಕೆಲ ಹೊತ್ತು ಮಾತುಗಳನ್ನಾಡಿದರು.

ಮೊಹಮ್ಮದ್‌ ಸಿರಾಜ್‌ ಅವರ ಬೆಳವಣಿಗೆಯಲ್ಲಿ ವಿರಾಟ್‌ ಕೊಹ್ಲಿಯ ಪಾತ್ರ ದೊಡ್ಡದಿದೆ. 2018ರ ಆವೃತ್ತಿಯಲ್ಲಿ ಆರ್‌ಸಿಬಿ ಸೇರಿದ್ದ ಸಿರಾಜ್‌ ಆ ವೃತ್ತಿಯಲ್ಲಿ ಅತ್ಯಂತ ಕಳಪೆ ಮಟ್ಟದ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಹೀಗಿದ್ದರೂ ನಾಯಕನಾಗಿದ್ದ ಕೊಹ್ಲಿ ಮುಂದಿನ ಆವೃತ್ತಿಯಲ್ಲಿಯೂ ಸಿರಾಜ್‌ರನ್ನು ತಂಡದಲ್ಲಿ ಉಳಿಸಿಕೊಂಡು ಅವರನ್ನು ಉತ್ತಮ ಆಟಗಾರನಾಗಿ ಹೊರಹೊಮ್ಮಿಸಿದರು. ಬಳಿಕ ಭಾರತ ತಂಡದಲ್ಲಿಯೂ ಅವಕಾಶ ನೀಡಿ ಅಲ್ಲಿಯೂ ಅವರನ್ನು ಬೆಳೆಸಿದರು. ಈ ಸಾರ್ಥಕತೆಯನ್ನು ಮರೆಯದ ಸಿರಾಜ್‌ ಆರ್‌ಸಿಬಿಯಿಂದ ಬೇರ್ಪಟ್ಟು ಬೇರೆ ತಂಡ ಸೇರಿದರೂ ವಿರಾಟ್‌ ಕೊಹ್ಲಿಯ ಜತೆಗಿನ ಬಾಂಧವ್ಯವನ್ನು ಮಾತ್ರ ಮರೆತಿಲ್ಲ.



ಗುಜರಾತ್‌ ಎದುರಿನ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ 81 ರನ್ ಗಳಿಸಿದರು. 27 ಎಸೆತಗಳಲ್ಲಿ 55 ರನ್ ಗಳಿಸಿದ ದೇವದತ್ ಪಡಿಕ್ಕಲ್ ಜೊತೆಗೆ, ಎರಡನೇ ವಿಕೆಟ್‌ಗೆ 115 ರನ್ ಸೇರಿಸಿ ಆರ್‌ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗೆಲುವಿನಿಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಪಂದ್ಯಕ್ಕೂ ಮುನ್ನ ಮೂರನೇ ಸ್ಥಾನಿಯಾಗಿತ್ತು. ಸದ್ಯ ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ 5 ಗೆಲುವು 2 ಸೋಲಿನೊಂದಿಗೆ 10 ಅಂಕ ಗಳಿಸಿದೆ. ತಂಡದ ರನ್‌ರೇಟ್‌(+1.101) ಕೂಡ ಉತ್ತಮವಾಗಿದೆ.

IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು

ಮೊಹಮ್ಮದ್‌ ಸಿರಾಜ್‌ ಓವರ್‌ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದರು. ಆದರೆ ವಾಷಿಂಗ್ಟನ್‌ ಸುಂದರ್‌ ಸುಲಭವಾದ ಕ್ಯಾಚ್‌ ಪಡೆಯಲು ವಿಫಲರಾಗಿ ಕೊಹ್ಲಿಗೆ ಜೀವದಾನ ನೀಡಿದರು.