ಬೆಂಗಳೂರು, ಡಿ.24: ಇಲ್ಲಿನ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬುಧವಾರ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ನೂತನ ಮೈಲ್ಲುಗಲ್ಲೊಂದನ್ನು ತಲುಪಿದರು. 15 ವರ್ಷಗಳ ಬಳಿಕ ಟೂರ್ನಿಯಲ್ಲಿ ಆಡಲಿಳಿದ ಕೊಹ್ಲಿ ಒಂದು ರನ್ ಗಳಿಸುತ್ತಿದ್ದಂತೆ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 16 ಸಾವಿರ ರನ್ ಪೇರಿಸಿದ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರು.
ಕೊಹ್ಲಿ 343 ಪಂದ್ಯಗಳ 50 ಓವರ್‌ಗಳ ವೃತ್ತಿಜೀವನದಲ್ಲಿ 16,000 ಲಿಸ್ಟ್ ಎ ರನ್‌ಗಳನ್ನು ಪೂರ್ಣಗೊಳಿಸಿದರು. ಕೊಹ್ಲಿ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮತ್ತು ಈ ಸ್ವರೂಪದಲ್ಲಿ 16,000 ರನ್‌ಗಳನ್ನು ಪೂರ್ಣಗೊಳಿಸಿದ ಒಟ್ಟಾರೆ ಒಂಬತ್ತನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಲಿಸ್ಟ್ ಎ ಕ್ರಿಕೆಟ್ ವೃತ್ತಿಜೀವನದಲ್ಲಿ 20 ವರ್ಷಗಳನ್ನು ಸಮೀಪಿಸುತ್ತಿರುವ ಕೊಹ್ಲಿ, ಫೆಬ್ರವರಿ 2006 ರಲ್ಲಿ ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ರಣಜಿ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ದೆಹಲಿ ಪರ ಚೊಚ್ಚಲ ಪ್ರವೇಶ ಮಾಡಿದ್ದರು. ಅಂದಿನಿಂದ ಕೊಹ್ಲಿ 50 ಓವರ್‌ಗಳ ಸರ್ಕ್ಯೂಟ್‌ನಲ್ಲಿ ದೆಹಲಿ ಪರ 16 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕು ಶತಕಗಳು ಮತ್ತು ಅರ್ಧಶತಕಗಳೊಂದಿಗೆ 60.66 ಸರಾಸರಿಯಲ್ಲಿ 910 ರನ್ ಗಳಿಸಿದ್ದಾರೆ.
ಇದನ್ನೂ ಓದಿ ವಿಜಯ್ ಹಜಾರೆ; 32, 33, 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ ಬ್ಯಾಟರ್‌ಗಳು
ಕೊಹ್ಲಿ ಕೊನೆಯ ಬಾರಿಗೆ 2010-11 ಋತುವಿನಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ತಂಡದ ನಾಯಕರಾಗಿದ್ದರು. ನಂತರ ಕೊಹ್ಲಿ 2013-14ರಲ್ಲಿ 50 ಓವರ್‌ಗಳ NKP ಸಾಲ್ವೆ ಚಾಲೆಂಜರ್ ಟ್ರೋಫಿಯಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದರು. ತಂಡವು ಇಂಡಿಯಾ ಬ್ಲೂ ವಿರುದ್ಧ ಫೈನಲ್‌ನಲ್ಲಿ ಸೋತಿತ್ತು.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿದ್ದರು. ಸತತ ಎರಡು ಶತಕಗಳನ್ನು ಗಳಿಸುವ ಮೂಲಕ ಅವರ ಶತಕಗಳ ಸಂಖ್ಯೆಯನ್ನು 53 ಕ್ಕೆ ಏರಿಸಿದ್ದರು. ಒಟ್ಟಾರೆ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಸಚಿನ್ ಅವರ ಶತಕಗಳ ಸಂಖ್ಯೆಗೆ ಕೊಹ್ಲಿ ಇನ್ನೂ ಮೂರು ಶತಕಗಳ ಕೊರತೆಯನ್ನು ಹೊಂದಿದ್ದಾರೆ, ಮುಂಬೈ ಬ್ಯಾಟಿಂಗ್ ದಂತಕಥೆ ಸಚಿನ್ 60 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಕೊಹ್ಲಿ 57 ಶತಕಗಳೊಂದಿಗೆ ತಮ್ಮ ವೃತ್ತಿಜೀವನದಲ್ಲಿ 21,999 ರನ್ ಗಳಿಸಿದ್ದಾರೆ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್
ಗ್ರಹಾಂ ಗೂಚ್-22211
ಗ್ರೇಮ್ ಹಿಕ್-22059
ಸಚಿನ್ ತೆಂಡೂಲ್ಕರ್-21999
ಕುಮಾರ ಸಂಗಕ್ಕಾರ-19456
ವಿವ್ ರಿಚರ್ಡ್ಸ್-16995
ರಿಕಿ ಪಾಂಟಿಂಗ್-16363
ಗಾರ್ಡನ್ ಗ್ರೀನಿಡ್ಜ್-16349
ಸನತ್ ಜಯಸೂರ್ಯ-16128
ವಿರಾಟ್ ಕೊಹ್ಲಿ-16000*